
ಅರ್ಜುನ್ ತೆಂಡೂಲ್ಕರ್, ಸಚಿನ್ ತೆಂಡೂಲ್ಕರ್
IPL 2022:
ಅರ್ಜುನ್ ತೆಂಡೂಲ್ಕರ್ ಕಳೆದ ಎರಡು ಸೀಸನ್ಗಳಲ್ಲಿ ಮುಂಬೈ ಇಂಡಿಯನ್ಸ್ನ ಭಾಗವಾಗಿದ್ದಾರೆ ಆದರೆ ಅವರಿಗೆ ಇನ್ನೂ ಚೊಚ್ಚಲ ಅವಕಾಶ ಸಿಕ್ಕಿಲ್ಲ. ತಂಡ ಉತ್ತಮ ಪ್ರದರ್ಶನ ನೀಡದ ಕಾರಣ ಅವರು ಈ ವರ್ಷ ಆಡುತ್ತಾರೆ ಎಂದು ನಿರೀಕ್ಷಿಸಲಾಗಿತ್ತು ಆದರೆ ಅದು ಆಗಲಿಲ್ಲ. ಇದೀಗ ಸಚಿನ್ ತೆಂಡೂಲ್ಕರ್ ಈ ವಿಷಯದ ಬಗ್ಗೆ ತಮ್ಮ ಅಭಿಪ್ರಾಯವನ್ನು ಹೊರಹಾಕಿದ್ದಾರೆ.
ಮಾಜಿ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ (Sachin Tendulkar) ಅವರ ಪುತ್ರ ಅರ್ಜುನ್ ತೆಂಡೂಲ್ಕರ್ (Arjun Tendulkar) ಅವರು ಐಪಿಎಲ್ (IPL 2022) 15 ನೇ ಸೀಸನ್ನಲ್ಲಿ ಮುಂಬೈ ಪರ ಪಾದಾರ್ಪಣೆ ಮಾಡುತ್ತಾರೆ ಎಂದು ನಿರೀಕ್ಷಿಸಲಾಗಿತ್ತು ಆದರೆ ಈಗ ಅವರು ತಮ್ಮ ಚೊಚ್ಚಲ ಪ್ರವೇಶಕ್ಕಾಗಿ ಇನ್ನೂ ಒಂದು ವರ್ಷ ಕಾಯಬೇಕಾಗಿದೆ. ಹಿರಿಯ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ ಅವರ ಪುತ್ರ ಅರ್ಜುನ್ ತೆಂಡೂಲ್ಕರ್, ಐಪಿಎಲ್ 2021 ರ ನಂತರ ಐಪಿಎಲ್ 2022 ರಲ್ಲೂ ಒಂದೇ ಒಂದು ಪಂದ್ಯದಲ್ಲಿ ಆಡುವ ಅವಕಾಶ ಪಡೆದುಕೊಳ್ಳಲಿಲ್ಲ. ಅರ್ಜುನ್ ತೆಂಡೂಲ್ಕರ್ ಖಂಡಿತವಾಗಿಯೂ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಆಡುತ್ತಾರೆ ಎಂದು ವದಂತಿಗಳಿದ್ದವು. ಏಕೆಂದರೆ, ರೋಹಿತ್ ಶರ್ಮಾ ಹಿಂದಿನ ಪಂದ್ಯದಲ್ಲಿ ಹೊಸ ಆಟಗಾರರನ್ನು ಪ್ರಯತ್ನಿಸುವುದಾಗಿ ಹೇಳಿದ್ದರು. ಆದರೆ ಇದು ಆಗಲಿಲ್ಲ. ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಅರ್ಜುನ್ ತೆಂಡೂಲ್ಕರ್ ಅವರ ಚೊಚ್ಚಲ ಪಂದ್ಯ ಖಚಿತವಾಗಿತ್ತು. ಆದರೆ ಅದು ಆಗಲಿಲ್ಲ. ಏಕೆಂದರೆ ಪಂದ್ಯ ಆರಂಭವಾಗುವ ಮುನ್ನ ಅರ್ಜುನ್ ತೆಂಡೂಲ್ಕರ್ ರನ್ ಅಪ್ ಎಣಿಸುತ್ತಿರುವುದನ್ನು ಟಿವಿಯಲ್ಲಿ ತೋರಿಸಲಾಗಿತ್ತು. ಆಗ ಅರ್ಜುನ್ ಈ ಪಂದ್ಯ ಆಡುತ್ತಿದ್ದಾರೆ ಎಂದು ಎಲ್ಲರೂ ಭಾವಿಸಿದ್ದರು. ಆದರೆ, ಆದರೆ ಆ ಪಂದ್ಯದಲ್ಲಿ ಅವರಿಗೆ ಅವಕಾಶ ಸಿಗಲಿಲ್ಲ. ಇದೇ ವೇಳೆ ಅತೃಪ್ತ ಅರ್ಜುನ್ಗೆ ತೆಂಡೂಲ್ಕರ್ ಅಮೂಲ್ಯ ಸಲಹೆ ನೀಡಿದ್ದಾರೆ.
ಅರ್ಜುನ್ಗೆ ಸಚಿನ್ ಅಮೂಲ್ಯ ಸಲಹೆ
ಸಚಿನ್ ತಮ್ಮ ಯೂಟ್ಯೂಬ್ ಚಾನೆಲ್ನಲ್ಲಿ ಅಭಿಮಾನಿಗಳೊಂದಿಗೆ ಸಂವಾದ ನಡೆಸುತ್ತಿರುವಾಗ ಅರ್ಜುನ್ಗೆ ನೀಡಿರುವ ಸಲಹೆಯನ್ನು ಹಂಚಿಕೊಂಡರು. ಈ ಋತುವಿನಲ್ಲಿ ನಿಮ್ಮ ಮಗ ಅರ್ಜುನ್ ಆಡುವುದನ್ನು ನೋಡಲು ಬಯಸುತ್ತೀದ್ರಾ ಎಂದು ಅಭಿಮಾನಿಯೊಬ್ಬರು ಸಚಿನ್ ಅವರನ್ನು ಕೇಳಿದರು. ಅದಕ್ಕೆ ಉತ್ತರಿಸಿದ ಸಚಿನ್, ನಾನು ಅರ್ಜುನ್ಗೆ ಕಷ್ಟಪಟ್ಟು ಕೆಲಸ ಮಾಡುವಂತೆ ಹೇಳಿದ್ದೇನೆ. ಅದುವೇ ಜೀವನದಲ್ಲಿ ಯಶಸ್ಸು ಗಳಿಸುವ ದಾರಿ. ಇದರಿಂದ ಭವಿಷ್ಯದಲ್ಲಿ ಅವರಿಗೆ ಅವಕಾಶ ಸಿಗಲಿದೆ. ಪ್ರಸ್ತುತ ಸೀಸನ್ ಮುಗಿದಿದೆ. ಕ್ರಿಕೆಟ್ಗೆ ಸಂಬಂಧಿಸಿದಂತೆ ನಾನು ಅರ್ಜುನ್ಗೆ ಈ ಹಾದಿ ಕಷ್ಟಕರವಾಗಿದೆ ಮತ್ತು ಹಾಗೆಯೇ ಇರುತ್ತದೆ ಎಂದು ಯಾವಾಗಲೂ ಹೇಳುತ್ತಿದ್ದೆ. ನೀವು ಕ್ರಿಕೆಟ್ ಅನ್ನು ಪ್ರೀತಿಸಲು ಪ್ರಾರಂಭಿಸಿದ್ದೀರಿ. ಕಷ್ಟಪಟ್ಟು ಕೆಲಸ ಮಾಡಿ ಮತ್ತು ಫಲಿತಾಂಶಗಳು ಬರುತ್ತಲೇ ಇರುತ್ತವೆ ಎಂಬ ಸಲಹೆ ನೀಡಿದ್ದೇನೆ ಎಂದಿದ್ದಾರೆ.