IPL 2022 Auction: ಚಹಾಲ್​ಗಾಗಿ ಹರಾಜು ನಡೆಸದ RCB..! | Yuzvendra chahal IPL 2022 Auction


IPL 2022 Auction: ಚಹಾಲ್​ಗಾಗಿ ಹರಾಜು ನಡೆಸದ RCB..!

Yuzvendra chahal

ಆರ್‌ಸಿಬಿಯ ಖ್ಯಾತ ಸ್ಪಿನ್ ಬೌಲರ್ ಯುಜ್ವೇಂದ್ರ ಚಹಾಲ್ ಈ ಬಾರಿ ರಾಜಸ್ಥಾನ ರಾಯಲ್ಸ್ ಪರ ಆಡಲಿದ್ದಾರೆ . ಐಪಿಎಲ್ 2022 ಹರಾಜು (IPL 2022 Auction) ನ ಮೂಲಕ ರಾಜಸ್ಥಾನ್ ರಾಯಲ್ಸ್ ತಂಡವು ಬರೋಬ್ಬರಿ 6.50 ಕೋಟಿ ನೀಡಿ ಚೈನಾಮನ್ ಸ್ಪಿನ್ನರ್‌ ಅನ್ನು ತನ್ನದಾಗಿಸಿಕೊಂಡಿತು. ಆರಂಭದಿಂದಲೇ ಚಹಲ್ ಖರೀದಿಗಾಗಿ ಮುಂಬೈ ಇಂಡಿಯನ್ಸ್ ಹಾಗೂ ರಾಜಸ್ಥಾನ್ ರಾಯಲ್ಸ್ ನಡುವೆ ಪೈಪೋಟಿ ಏರ್ಪಟ್ಟಿತ್ತು. ಇದರ ನಡುವೆ ಡೆಲ್ಲಿ ಕ್ಯಾಪಿಟಲ್ಸ್ ಕೂಡ ಬಿಡ್ಡಿಂಗ್ ನಡೆಸಿತು. ಆದರೆ ಐದು ಕೋಟಿಗಳ ನಂತರ ಡೆಲ್ಲಿ ಕ್ಯಾಪಿಟಲ್ಸ್ ರೇಸ್‌ನಿಂದ ಹಿಂದೆ ಸರಿಯಿತು. ಈ ಹಂತದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ಬಿಡ್ಡಿಂಗ್ ಪ್ರಾರಂಭಿಸಿತು. ಅಂತಿಮವಾಗಿ ರಾಜಸ್ಥಾನ್ ರಾಯಲ್ಸ್ ಆರು ಕೋಟಿ 50 ಲಕ್ಷ ಹರಾಜಾಗುವ ಕೂಗುವ ಮೂಲಕ ಯುಜ್ವೇಂದ್ರ ಚಹಾಲ್ ಅವರನ್ನು ತನ್ನದಾಗಿಸಿಕೊಂಡಿತು. ಇದಾಗ್ಯೂ ಚಹಲ್ ಅವರ ಖರೀದಿಗೆ ಆರ್​ಸಿಬಿ ಬಿಡ್ಡಿಂಗ್ ನಡೆಸದೇ ಅಚ್ಚರಿ ಮೂಡಿಸಿತು.

ಚಹಾಲ್ ಆರ್‌ಸಿಬಿ ಪರ ದೀರ್ಘಕಾಲ ಆಡುತ್ತಿದ್ದಾರೆ. ಆರ್​ಸಿಬಿ ತಂಡದಲ್ಲಿ 50 ಪಂದ್ಯಗಳನ್ನು ಆಡಿರುವ ಚಹಲ್ ಒಟ್ಟು 64 ವಿಕೆಟ್ ಪಡೆದಿದ್ದಾರೆ. ಅಲ್ಲದೆ ಆರ್​ಸಿಬಿ ತಂಡದ ಅತ್ಯಂತ ಯಶಸ್ವಿ ಸ್ಪಿನ್ನರ್ ಆಗಿ ಗುರುತಿಸಿಕೊಂಡಿದ್ದರು. ಇದಾಗ್ಯೂ ಚಹಲ್ ಅವರನ್ನು ಖರೀದಿಸಲು ಆರ್​ಸಿಬಿ ಯಾವುದೇ ಆಸಕ್ತಿ ತೋರದಿರುವುದು ಅಚ್ಚರಿಗೆ ಕಾರಣವಾಗಿದೆ.

ಆರ್‌ಸಿಬಿ ಪರ ಆಡಲು ಬಯಸಿದ್ದರು:
ಯುಜ್ವೇಂದ್ರ ಚಹಾಲ್ ಹರಾಜಿಗೂ ಮುನ್ನ ಆರ್‌ಸಿಬಿ ಪರ ಆಡುವ ಆಸೆ ವ್ಯಕ್ತಪಡಿಸಿದ್ದರು. ನಾನು 8 ವರ್ಷಗಳಿಂದ ಆರ್‌ಸಿಬಿಗೆ ಆಡಿದ್ದೇನೆ. ಮುಂದೆಯೂ ಆಡಲು ಬಯಸುತ್ತೇನೆ ಎಂದು ಹೇಳಿದ್ದರು. ನಾನು ಬೇರೆ ತಂಡಕ್ಕೆ ಹೋದರೆ ನನಗೆ ಬೇಸರವಾಗುವುದಿಲ್ಲ. ಏಕೆಂದರೆ ಈ ಬಾರಿ ಎಲ್ಲರೂ ತಮ್ಮ ಹೊಸ ತಂಡವನ್ನು ರಚಿಸುತ್ತಿದ್ದಾರೆ. ಯಾವ ತಂಡ ನನ್ನನ್ನು ಖರೀದಿಸಿದರೂ, ನಾನು ನನ್ನ ಶೇಕಡಾ 100 ಅನ್ನು ನೀಡುತ್ತೇನೆ ಎಂದಿದ್ದರು. ಇದೀಗ ನಿರೀಕ್ಷೆಯಂತೆ ಚಹಲ್ ಹೊಸ ತಂಡದ ಪಾಲಾಗಿದ್ದಾರೆ.

(Yuzvendra chahal IPL 2022 Auction)

TV9 Kannada


Leave a Reply

Your email address will not be published.