IPL 2022 Auctions: ಕೆಎಲ್ ರಾಹುಲ್ ಅಲ್ಲ: ಎಲ್ಲ 10 ಫ್ರಾಂಚೈಸಿ ಈ ಒಬ್ಬ ಆಟಗಾರನನ್ನು ಖರೀದಿಸಲು ಮುಗಿಬೀಳಲಿದೆ ಎಂದ ಲಕ್ಷ್ಮಣ್ | Yuzvendra Chahal will get more money in IPL 2022 auctions said Laxman Sivaramakrishnan


IPL 2022 Auctions: ಕೆಎಲ್ ರಾಹುಲ್ ಅಲ್ಲ: ಎಲ್ಲ 10 ಫ್ರಾಂಚೈಸಿ ಈ ಒಬ್ಬ ಆಟಗಾರನನ್ನು ಖರೀದಿಸಲು ಮುಗಿಬೀಳಲಿದೆ ಎಂದ ಲಕ್ಷ್ಮಣ್

IPL 2022 Mega Auction

15ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್​ಗಾಗಿ (Indian Premier League) ಆಟಗಾರರ ರಿಟೇನ್ ಪಟ್ಟಿ ಈಗಾಗಲೇ ಪ್ರಕಟಗೊಂಡಾಗಿದೆ. ನಿರೀಕ್ಷೆಯಂತೆ ಕೆಲ ಆಟಗಾರರು ತಮ್ಮ ತಂಡಗಳಲ್ಲಿ ಸ್ಥಾನ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾದರೆ, ಕೆಲ ಆಟಗಾರರನ್ನು ಕೆಲ ಫ್ರಾಂಚೈಸಿ ಕೈಬಿಟ್ಟಿದ್ದು ಅಚ್ಚರಿಗೂ ಕಾರಣವಾಗಿದೆ. ಈ ಪೈಕಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (Royal Challengers Bangalore) ಫ್ರಾಂಚೈಸಿ ಕೂಡ ಶಾಕಿಂಗ್ ನಿರ್ಧಾರ ತೆಗೆದುಕೊಂಡಿತ್ತು. ವಿರಾಟ್ ಕೊಹ್ಲಿ (Virat Kohli), ಗ್ಲೆನ್ ಮ್ಯಾಕ್ಸ್​ವೆಲ್ (Glenn Maxwell) ಮತ್ತು ಮೊಹಮ್ಮದ್ ಸಿರಾಜ್ (Mohammed Siraj) ಅವರನ್ನು ಆರ್​ಸಿಬಿ ರಿಟೇನ್ (RCB retained) ಮಾಡಿದೆ. ಆದರೆ, ಅನೇಕ ವರ್ಷಗಳಿಂದ ತಂಡಕ್ಕೆ ಸಾಕಷ್ಟು ಕೊಡುಗೆ ನೀಡಿದ್ದ ಪ್ರಮುಖ ಸ್ಪಿನ್ನರ್ ಯುಜ್ವೇಂದ್ರ ಚಹಾಲ್ (Yuzvendra Chahal) ಅವರನ್ನು ಕೈಬಿಟ್ಟಿದೆ. ಇದು ಅಭಿಮಾನಿಗಳಿಗೆ ಆಘಾತ ಉಂಟು ಮಾಡಿತ್ತು. ಈ ಬಗ್ಗೆ ಮಾನಾತನಾಡಿರುವ ಭಾರತ ತಂಡದ ಮಾಜಿ ಲೆಗ್‌ ಸ್ಪಿನ್ನರ್‌ ಲಕ್ಷ್ಮಣ್‌ ಶಿವರಾಮಕೃಷ್ಣನ್‌ (Laxman Sivaramakrishnan), ಆರ್‌ಸಿಬಿ ತಾರೆ ಯುಜ್ವೇಂದ್ರ ಚಹಾಲ್‌ಗೆ ಐಪಿಎಲ್ 2022 ಮೆಗಾ ಹರಾಜಿನಲ್ಲಿ (IPL 2022 Mega Auction) ಫ್ರಾಂಚೈಸಿಗಳು ಹಣದ ಹೊಳೆ ಹರಿಸಲಿವೆ ಎಂದು ಭವಿಷ್ಯ ನುಡಿದಿದ್ದಾರೆ.

“ಮೊದಲನೆಯದಾಗಿ ಆರ್‌ಸಿಬಿ ಫ್ರಾಂಚೈಸಿ ಖಂಡಿತಾ ಹರಾಜಿನಲ್ಲಿ ಯುಜ್ವೇಂದ್ರ ಚಹಾಲ್‌ ಅವರನ್ನು ಮರಳಿ ಖರೀದಿಸುವ ಪ್ರಯತ್ನ ಮಾಡಲಿದೆ. ಉಳಿದ ತಂಡಗಳಿಗೂ ಕೂಡ ಚಹಾಲ್‌ ಮೇಲೆ ಆಸಕ್ತಿ ಇರುವ ಕಾರಣ ಹಣದ ಹೊಳೆ ಹರಿಯಲಿದೆ. ಏಕೆಂದರೆ ಚಹಾಲ್‌ ಐಪಿಎಲ್‌ನಲ್ಲಿ ಅದ್ಭುತ ದಾಖಲೆ ಹೊಂದಿದ್ದಾರೆ. ಹೆಚ್ಚು ಹಣ ಹೊಂದಿರುವ ಫ್ರಾಂಚೈಸಿಗಳು ಇವರ ಖರೀದಿಗೆ ಖಂಡಿತಾ ಆಸಕ್ತಿ ತೋರಲಿವೆ. ಹೀಗಾಗಿ ಹರಾಜಿಗೂ ಮುನ್ನ ಉಳಿಸಿಕೊಂಡ ಆಟಗಾರರ ಪಟ್ಟಿ ಸೇರಿದ್ದರೆ ಸಿಗುತ್ತಿದ್ದ ಹಣಕ್ಕಿಂತಲೂ ಹೆಚ್ಚಿನ ಮೊತ್ತ ಚಹಾಲ್‌ಗೆ ಲಭ್ಯವಾಗುವ ಸಾಧ್ಯತೆ ಹೆಚ್ಚಿದೆ” ಎಂದು ಶಿವರಾಮಕೃಷ್ಣನ್‌ ಹೇಳಿದ್ದಾರೆ.

ಈ ನಡುವೆ ಮೆಗಾ ಆಕ್ಷನ್‌ನಲ್ಲಿ ಅನುಭವಿ ಆಫ್‌ ಸ್ಪಿನ್ನರ್‌ ಆರ್‌ ಅಶ್ವಿನ್‌ ಸಲುವಾಗಿ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ಮತ್ತು ಚೆನ್ನೈ ಸೂಪರ್‌ ಕಿಂಗ್ಸ್‌ ತಂಡಗಳ ನಡುವೆ ಭಾರಿ ಪೈಪೋಟಿ ನಡೆಯುವ ಸಾಧ್ಯತೆ ಇದೆ ಎಂದಿರುವ ಶಿವರಾಮಕೃಷ್ಣನ್‌, ಚಹಲ್‌ ಖರೀದಿಗೂ ತಂಡಗಳು ಮುಗಿ ಬೀಳಲಿವೆ ಎಂದಿದ್ದಾರೆ. ಆರ್​ಸಿಬಿ ವಿರಾಟ್​ ಕೊಹ್ಲಿಯನ್ನು 15 ಕೋಟಿರೂ, ಗ್ಲೇನ್​ ಮ್ಯಾಕ್ಸ್​ವೆಲ್​ಗೆ 12 ಮತ್ತು ಮೊಹಮ್ಮದ್ ಸಿರಾಜ್​ಗೆ 7 ಕೋಟಿ ರೂ ನೀಡಿ ರಿಟೈನ್ ಮಾಡಿಕೊಂಡಿದೆ.

ತಂಡಗಳಿಂದ ರಿಲೀಸ್ ಆಗಿರುವ ಆಟಗಾರರ ಮೆಗಾ ಹರಾಜು ಪ್ರಕ್ರಿಯೆ ಮುಂದಿನ ವರ್ಷ ಜನವರಿಯಲ್ಲಿ ನಡೆಯಲಿದೆ. ಅದಕ್ಕೆ ಮುನ್ನ 2 ಹೊಸ ತಂಡಗಳಾದ ಲಖನೌ ಮತ್ತು ಅಹಮದಾಬಾದ್‌ಗೆ ಹರಾಜಿಗೆ ಮುನ್ನವೇ 3 ಆಟಗಾರರ ಜತೆ ಒಪ್ಪಂದ ಮಾಡಿಕೊಳ್ಳಲು ಅವಕಾಶವಿದೆ. ಇದರಲ್ಲಿ ಕೆಎಲ್ ರಾಹುಲ್ ಅವರಿಗೆ ಲಖನೌ ಫ್ರಾಂಚೈಸಿ ದಾಖಲೆ ಎಂಬಂತೆ 20 ಕೋಟಿ ರೂ. ಆಫರ್ ಮಾಡಿದೆ ಎಂಬ ವರದಿಯಾಗಿದೆ.

India vs New Zealand: ಕೊಹ್ಲಿ ಪಡೆಗೆ ಬಿಗ್ ಶಾಕ್: 2ನೇ ಟೆಸ್ಟ್​ನಿಂದ ಟೀಮ್ ಇಂಡಿಯಾದ 3 ಆಟಗಾರರು ಹೊರಕ್ಕೆ

LIVE Score: ಮಳೆಯಿಂದ ಒದ್ದೆಯಾದ ಮೈದಾನ: ಟಾಸ್ ವಿಳಂಬ

(Yuzvendra Chahal will get more money in IPL 2022 auctions said Laxman Sivaramakrishnan)

TV9 Kannada


Leave a Reply

Your email address will not be published. Required fields are marked *