IPL 2022 Closing Ceremony: ಐಪಿಎಲ್ ಸಮಾರೋಪ ಸಮಾರಂಭದಲ್ಲಿ ದೇಸಿ ನೃತ್ಯ | IPL 2022 Closing Ceremony will also feature Jharkhand’s famous CHHAU DANCE


IPL 2022 Closing Ceremony: ಐಪಿಎಲ್ ಸಮಾರೋಪ ಸಮಾರಂಭದಲ್ಲಿ ದೇಸಿ ನೃತ್ಯ

IPL 2022 Closing Ceremony

IPL 2022 Closing Ceremony: ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಮತ್ತು ಕಾರ್ಯದರ್ಶಿ ಜಯ್ ಶಾ ಸೇರಿದಂತೆ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಪದಾಧಿಕಾರಿಗಳಲ್ಲದೆ, ಭಾರತ ತಂಡದ ಮಾಜಿ ನಾಯಕರು ಕೂಡ ಈ ಸಂದರ್ಭದಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆಯಿದೆ.

IPL 2022 Closing Ceremony: ಐಪಿಎಲ್ ಸೀಸನ್ 15 ಮುಕ್ತಾಯದ ಹಂತಕ್ಕೆ ಬಂದು ನಿಂತಿದೆ. ಮೇ 29 ರಂದು ನಡೆಯಲಿರುವ ಫೈನಲ್ ಪಂದ್ಯಕ್ಕೂ ಮುನ್ನ ಅದ್ಧೂರಿ ಸಮಾರೋಪ ಸಮಾರಂಭ ನಡೆಸಲು ಬಿಸಿಸಿಐ ನಿರ್ಧರಿಸಿದೆ. ಕಳೆದ ಎರಡು ಸೀಸನ್​ಗಳಲ್ಲಿ ಯಾವುದೇ ರಂಗೀನ್ ಕಾರ್ಯಕ್ರಮಗಳನ್ನು ಆಯೋಜಿಸಲಾಗಿರಲಿಲ್ಲ. ಈ ಬಾರಿ ಮತ್ತೆ ಐಪಿಎಲ್​ಗೆ ರಂಗೇರಲಿದ್ದು, ಖ್ಯಾತ ಬಾಲಿವುಡ್ ನಟ ರಣವೀರ್ ಸಿಂಗ್ ಈ ಸಮಾರಂಭದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಹಾಗೆಯೇ ಮ್ಯೂಸಿಕ್ ಮಾಂತ್ರಿಕ ಎ.ಆರ್ ರೆಹಮಾನ್ ಸಹ ವಿಶೇಷ ಕಾರ್ಯಕ್ರಮ ನಡೆಸಿ ಕೊಡಲಿದ್ದಾರೆ. ವಿಶೇಷ ಎಂದರೆ ಈ ಬಾರಿ ಛೌ ನೃತ್ಯ ಕೂಡ ಇರಲಿದೆ.

ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಸಮಾರೋಪ ಸಮಾರಂಭದಲ್ಲಿ ಜಾರ್ಖಂಡ್‌ನ ಪ್ರಸಿದ್ಧ ಸಾಂಪ್ರದಾಯಿಕ ಛೌ ನೃತ್ಯವನ್ನು ಒಳಗೊಂಡಿರುತ್ತದೆ ಎಂದು ದೃಢಪಡಿಸಲಾಗಿದೆ. ಇದಕ್ಕಾಗಿ ಜಾರ್ಖಂಡ್‌ನ 10 ಸದಸ್ಯರ ತಂಡವನ್ನು ಅಂತಿಮಗೊಳಿಸಲಾಗಿದೆ. ಪ್ರಭಾತ್ ಕುಮಾರ್ ಮಹ್ತೋ ನೇತೃತ್ವದ ಈ ತಂಡವು ಭೂತಾನ್, ಯುನೈಟೆಡ್ ಅರಬ್ ಎಮಿರೇಟ್ಸ್ ಮತ್ತು ಚೀನಾದಂತಹ ಅನೇಕ ದೇಶಗಳಲ್ಲಿ ಛೌ ನೃತ್ಯದ ಕಾರ್ಯಕ್ರಮದ ಮೂಲಕ ಭಾರತದ ಕೀರ್ತಿ ಪತಾಕೆಯನ್ನು ಹಾರಿಸಿದ್ದರು. ಇದೀಗ ಇದೇ ಮೊದಲ ಬಾರಿಗೆ ಐಪಿಎಲ್ ಸಮಾರೋಪ ಸಮಾರಂಭದಲ್ಲಿ ಛೌ ನೃತ್ಯಕ್ಕೆ ಅವಕಾಶ ನೀಡಲಾಗಿದೆ.

ಐಪಿಎಲ್ 2022 ಸಮಾರೋಪ ಸಮಾರಂಭದ ಸಂಪೂರ್ಣ ಮಾಹಿತಿ ಹೀಗಿದೆ:

ಸಮಾರಂಭ ಎಲ್ಲಿ, ಯಾವಾಗ ನಡೆಯಲಿದೆ?
ಐಪಿಎಲ್ 2022 ರ ಸಮಾರೋಪ ಸಮಾರಂಭವು ಇದೇ ಭಾನುವಾರ ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಪಂದ್ಯ ಆರಂಭಕ್ಕೂ ಒಂದು ಘಂಟೆ ಮುಂಚೆ ನಡೆಯಲಿದೆ.

ಸೆಲೆಬ್ರೆಟಿಗಳು ಯಾರೆಲ್ಲಾ ಇರಲಿದ್ದಾರೆ?
ಬಾಲಿವುಡ್ ಸ್ಟಾರ್ ರಣವೀರ್ ಸಿಂಗ್ ಸಮಾರೋಪ ಸಮಾರಂಭದಲ್ಲಿ ನೃತ್ಯ ಪ್ರದರ್ಶನ ನೀಡಲಿದ್ದಾರೆ. ಜೊತೆಗೆ ಆಸ್ಕರ್ ಪ್ರಶಸ್ತಿ ವಿಜೇತ ಸ್ಟಾರ್ ಎಆರ್ ರೆಹಮಾನ್ ಸಹ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ. ಜೊತೆ ಛೌ ನೃತ್ಯವನ್ನು ಆಯೋಜಿಸಲಾಗುತ್ತಿದೆ.

ಸಮಾರೋಪ ಸಮಾರಂಭಕ್ಕೆ ಯಾರೆಲ್ಲಾ ಬರಲಿದ್ದಾರೆ?
ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಮತ್ತು ಕಾರ್ಯದರ್ಶಿ ಜಯ್ ಶಾ ಸೇರಿದಂತೆ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಪದಾಧಿಕಾರಿಗಳಲ್ಲದೆ, ಭಾರತ ತಂಡದ ಮಾಜಿ ನಾಯಕರು ಕೂಡ ಈ ಸಂದರ್ಭದಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆಯಿದೆ.

ಐಪಿಎಲ್ ಸಮಾರೋಪ ಸಮಾರಂಭವನ್ನು ವೀಕ್ಷಿಸುವುದು ಹೇಗೆ?
ಸ್ಟಾರ್‌ಸ್ಪೋರ್ಟ್ಸ್‌ನಲ್ಲಿ ಐಪಿಎಲ್ ಸಮಾರೋಪ ಸಮಾರಂಭವನ್ನು ವೀಕ್ಷಿಸಬಹುದು. ಹಾಗೆಯೇ ಹಾಟ್‌ಸ್ಟಾರ್ ಈ ಕಾರ್ಯಕ್ರಮವನ್ನು ಸ್ಟ್ರೀಮ್ ಮಾಡಲಿದೆ.

ಹೆಚ್ಚಿನ IPL 2022 ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

TV9 Kannada


Leave a Reply

Your email address will not be published. Required fields are marked *