
Guinness World Record T Shirt
IPL 2022 Closing Ceremony: ಈ ವರ್ಣರಂಜಿತ ಸಂಗೀಜ ಸಂಜೆಯಲ್ಲಿ ಎಆರ್ ರೆಹಮಾನ್ ಅವರೊಂದಿಗೆ ಗಾಯಕಿ ನೀತಿ ಮೋಹನ್, ಗಾಯಕ ಮೋಹಿತ್ ಚೌಹಾಣ್ ಮತ್ತು ಬೆನ್ನಿ ದಯಾಳ್ ಕೂಡ ಕಾಣಿಸಿಕೊಂಡಿದ್ದರು.
IPL 2022 Final: ಗುಜರಾತ್ ಟೈಟಾನ್ಸ್ ಮತ್ತು ರಾಜಸ್ಥಾನ್ ರಾಯಲ್ಸ್ (GT vs RR) ನಡುವಿನ ಐಪಿಎಲ್ 2022 ರ ಫೈನಲ್ಗೆ ಮುಂಚಿತವಾಗಿ, ಅಹಮದಾಬಾದ್ನ ನರೇಂದ್ರ ಮೋದಿ ಕ್ರಿಕೆಟ್ ಸ್ಟೇಡಿಯಂನಲ್ಲಿ ಅದ್ಭುತವಾದ ಸಮಾರೋಪ ಸಮಾರಂಭ ನಡೆಯಿತು. ಕೊರೋನಾದಿಂದಾಗಿ, ಕಳೆದ ವರ್ಷ ಮತ್ತು 2020 ರಲ್ಲಿ ಐಪಿಎಲ್ನ ಸಮಾರೋಪ ಸಮಾರಂಭವನ್ನು ನಡೆಸಿರಲಿಲ್ಲ. ಆದರೆ ಬಾರಿ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಸೇರಿದ್ದ ಒಂದು ಲಕ್ಷಕ್ಕೂ ಅಧಿಕ ಪ್ರೇಕ್ಷಕರ ಮುಂದೆ ಅದ್ಧೂರಿ ಸಮಾರೋಪ ಸಮಾರಂಭ ಆಯೋಜಿಸುವಲ್ಲಿ ಬಿಸಿಸಿಐ ಯಶಸ್ವಿಯಾಗಿದೆ. ಅಷ್ಟೇ ಅಲ್ಲದೆ ವಿಶೇಷ ದಾಖಲೆಯನ್ನೂ ಕೂಡ ಬರೆದಿದೆ.
ಸಮಾರೋಪ ಸಮಾರಂಭದಲ್ಲಿ ಅತಿದೊಡ್ಡ ಕ್ರಿಕೆಟ್ ಟಿ-ಶರ್ಟ್ ಅನ್ನು ಪ್ರದರ್ಶಿಸಲಾಗಿತ್ತು. ಈ ಜೆರ್ಸಿ 66 ಮೀಟರ್ ಉದ್ದ ಮತ್ತು 42 ಮೀಟರ್ ಅಗಲವಿತ್ತು. 10 ತಂಡಗಳ ಲೋಗೋವನ್ನು ಹೊಂದಿದ್ದ ಜೆರ್ಸಿಯು ವಿಶ್ವದ ಅತೀ ದೊಡ್ಡ ಜೆರ್ಸಿ ಎಂಬ ದಾಖಲೆ ಬರೆದಿದೆ. ಈ ದಾಖಲೆಯನ್ನು ಪರಿಗಣಿಸಿರುವ ಗಿನ್ನೆಸ್ ಬುಕ್ ಆಫ್ ರೆಕಾರ್ಡ್ಸ್ ಅಧಿಕಾರಿಗಳು ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಮತ್ತು ಕಾರ್ಯದರ್ಶಿ ಜಯ್ ಶಾ ಅವರಿಗೆ ಅತಿದೊಡ್ಡ ಕ್ರಿಕೆಟ್ ಟಿ-ಶರ್ಟ್ ದಾಖಲೆಯ ಪ್ರಮಾಣಪತ್ರವನ್ನು ನೀಡಿದರು.
A 𝗚𝘂𝗶𝗻𝗻𝗲𝘀𝘀 𝗪𝗼𝗿𝗹𝗱 𝗥𝗲𝗰𝗼𝗿𝗱 to start #TATAIPL 2022 Final Proceedings. 🔝 #GTvRR
Presenting the 𝗪𝗼𝗿𝗹𝗱’𝘀 𝗟𝗮𝗿𝗴𝗲𝘀𝘁 𝗖𝗿𝗶𝗰𝗸𝗲𝘁 𝗝𝗲𝗿𝘀𝗲𝘆 At The 𝗪𝗼𝗿𝗹𝗱’𝘀 𝗟𝗮𝗿𝗴𝗲𝘀𝘁 𝗖𝗿𝗶𝗰𝗸𝗲𝘁 𝗦𝘁𝗮𝗱𝗶𝘂𝗺 – the Narendra Modi Stadium. @GCAMotera 👏 pic.twitter.com/yPd0FgK4gN
— IndianPremierLeague (@IPL) May 29, 2022
ಇದಾದ ಬಳಿಕ ಉಭಯ ತಂಡಗಳ ನಾಯಕರಾದ ಹಾರ್ದಿಕ್ ಪಾಂಡ್ಯ ಹಾಗೂ ಸಂಜು ಸ್ಯಾಮ್ಸನ್ ಸ್ಟೇಡಿಯಂ ಕಾಣಿಸಿಕೊಂಡಿದ್ದರು. ಆ ಬಳಿಕ ನಡೆದ ಮನರಂಜನಾ ಕಾರ್ಯಕ್ರಮದಲ್ಲಿ ಬಾಲಿವುಡ್ ನಟ ರಣವೀರ್ ಸಿಂಗ್ ನೃತ್ಯ ಪ್ರದರ್ಶನ ನೀಡಿದರು. ಇದರ ನಂತರ, ಆಸ್ಕರ್ ಪ್ರಶಸ್ತಿ ವಿಜೇತ ಸಂಗೀತ ಸಂಯೋಜಕ ಎಆರ್ ರೆಹಮಾನ್ ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು. ಈ ಮೂಲಕ 75 ವರ್ಷಗಳ ಭಾರತೀಯ ಕ್ರಿಕೆಟ್ ಪಯಣವನ್ನು ವಿಭಿನ್ನ ಹಾಡುಗಳ ಮೂಲಕ ತೋರಿಸಲಾಯಿತು. ಈ ವರ್ಣರಂಜಿತ ಸಂಗೀಜ ಸಂಜೆಯಲ್ಲಿ ಎಆರ್ ರೆಹಮಾನ್ ಅವರೊಂದಿಗೆ ಗಾಯಕಿ ನೀತಿ ಮೋಹನ್, ಗಾಯಕ ಮೋಹಿತ್ ಚೌಹಾಣ್ ಮತ್ತು ಬೆನ್ನಿ ದಯಾಳ್ ಕೂಡ ಕಾಣಿಸಿಕೊಂಡಿದ್ದರು.
ಹೆಚ್ಚಿನ IPL 2022 ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.