IPL 2022: CSK ಯತ್ತ ಓಡಿದ ಡುಪ್ಲೆಸಿಸ್, ಬ್ರಾವೊ ಕಾಲೆಳೆದ ವಿರಾಟ್ ಕೊಹ್ಲಿ: ಇಲ್ಲಿದೆ ವಿಡಿಯೋ | CSK vs RCB IPL 2022 chennai super kings players meet Royal Challengers Bangalore Ravindra Jadeja faf du plessis


IPL 2022: CSK ಯತ್ತ ಓಡಿದ ಡುಪ್ಲೆಸಿಸ್, ಬ್ರಾವೊ ಕಾಲೆಳೆದ ವಿರಾಟ್ ಕೊಹ್ಲಿ: ಇಲ್ಲಿದೆ ವಿಡಿಯೋ

CSK vs RCB

IPL 2022 ರ 22ನೇ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು (CSK vs RCB) ಮುಖಾಮುಖಿಯಾಗಲಿದೆ. ಮುಂಬೈನ ಡಿವೈ ಪಾಟೀಲ್ ಕ್ರೀಡಾಂಗಣದಲ್ಲಿ ನಡೆಯಲಿರುವ ಈ ಪಂದ್ಯಕ್ಕೂ ಮುನ್ನ ಏಪ್ರಿಲ್ 11ರಂದು ಅಭ್ಯಾಸದ ವೇಳೆ ಎರಡೂ ತಂಡಗಳ ಆಟಗಾರರು ಮುಖಾಮುಖಿಯಾಗಿದ್ದರು. ಈ ಕ್ಷಣಗಳು ಆಟಗಾರರ ನಡುವಣ ಸ್ನೇಹಕ್ಕೆ ಮತ್ತು ತಮಾಷೆಗೆ ಸಾಕ್ಷಿಯಾಗಿದ್ದವು. ವಿಶೇಷ ಎಂದರೆ RCB ತಂಡ ಕೆಲ ಪ್ರಮುಖ ಆಟಗಾರರು ಕಳೆದ ಸೀಸನ್​ವರೆಗೂ CSK ತಂಡ ಭಾಗವಾಗಿದ್ದರು. ಇವರಲ್ಲಿ ಫಾಫ್ ಡು ಪ್ಲೆಸಿಸ್ , ಜೋಶ್ ಹ್ಯಾಝಲ್‌ವುಡ್ ಮತ್ತು ಕರ್ನ್ ಶರ್ಮಾ ಪ್ರಮುಖರು. ಹೀಗಾಗಿ ಮಾಜಿ ತಂಡದ ಆಟಗಾರರೊಂದಿಗೆ ಇವರು ಕಾಣಿಸಿಕೊಂಡಿದ್ದರು. ಇನ್ನು ವಿರಾಟ್ ಕೊಹ್ಲಿ ಕೂಡ ಸಿಎಸ್​ಕೆ ಕ್ಯಾಂಪ್​ನಲ್ಲಿ ಕಾಣಿಸಿಕೊಳ್ಳುವ ಮೂಲಕ ಧೋನಿ, ಜಡೇಜಾ ಜೊತೆ ಸಮಯ ಕಳೆದರು.

ಈ ಅಪೂರ್ವ ಸಂಗಮದ ಫೋಟೋ ಮತ್ತು ವಿಡಿಯೋಗಳನ್ನು ಚೆನ್ನೈ ಸೂಪರ್ ಕಿಂಗ್ಸ್ ತಮ್ಮ ಸಾಮಾಜಿಕ ಮಾಧ್ಯಮ ಖಾತೆಯಲ್ಲಿ ಪೋಸ್ಟ್ ಮಾಡಿದೆ. ವಿರಾಟ್ ಕೊಹ್ಲಿ ರವೀಂದ್ರ ಜಡೇಜಾ ಅವರನ್ನು ಭೇಟಿಯಾಗಲು ಬರುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದು. ಅದೇ ರೀತಿ ಆರ್‌ಸಿಬಿ ನಾಯಕ ಫಾಫ್ ಡು ಪ್ಲೆಸಿಸ್ ಸಿಎಸ್‌ಕೆ ತರಬೇತುದಾರ ಸ್ಟೀಫನ್ ಫ್ಲೆಮಿಂಗ್ ಅವರನ್ನು ತಬ್ಬಿಕೊಳ್ಳುತ್ತಿರುವುದು ಕೂಡ ಈ ವಿಡಿಯೋದಲ್ಲಿದೆ.

ಇನ್ನು ಸಿಎಸ್​ಕೆ ಬ್ಯಾಟಿಂಗ್ ಕೋಚ್ ಮೈಕ್ ಹಸ್ಸಿ, ಮಿಚೆಲ್ ಸ್ಯಾಂಟ್ನರ್, ರಾಬಿನ್ ಉತ್ತಪ್ಪ, ರವೀಂದ್ರ ಜಡೇಜಾ ಮತ್ತು ಇತರ ಆಟಗಾರರೊಂದಿಗೆ ಡುಪ್ಲೆಸಿಸ್​ ಹರಟೆಯಲ್ಲಿ ನಿರತರಾಗಿದ್ದರು. ಇದೇ ವೇಳೆ ಜಡೇಜಾ ಅವರ ಬ್ಯಾಟಿಂಗ್ ಸೆಲೆಬ್ರೇಷನ್ ಕತ್ತಿ ಬೀಸುವುದನ್ನು ಡುಪ್ಲೆಸಿಸ್ ತೋರಿಸುತ್ತಿರುವುದು ಕಂಡು ಬಂದಿದೆ.

ಮತ್ತೊಂದೆಡೆ ವಿರಾಟ್ ಕೊಹ್ಲಿ ಮಹೇಂದ್ರ ಸಿಂಗ್ ಧೋನಿ ಹಾಗೂ ಡ್ವೇನ್ ಬ್ರಾವೊ ಜೊತೆ ಚಿಟ್ ಚಾಟ್​ನಲ್ಲಿ ತೊಡಗಿಸಿಕೊಂಡಿರುವುದು ಕೂಡ ವಿಡಿಯೋದಲ್ಲಿ ಕಾಣಬಹುದು. ಅಲ್ಲದೆ ವಿರಾಟ್ ಕೊಹ್ಲಿ ಬ್ರಾವೋ ಅವರ ‘ಚಾಂಪಿಯನ್-ಚಾಂಪಿಯನ್’ ಹಾಡಿಗೆ ಡ್ಯಾನ್ಸ್ ಸ್ಟೆಪ್ಸ್ ಕೂಡ ಹಾಕಿ ಕಾಲೆಳೆಯುತ್ತಿರುವ ದೃಶ್ಯ ಕೂಡ ಈ ವಿಡಿಯೋದಲ್ಲಿದೆ. ಒಟ್ಟಿನಲ್ಲಿ ಐಪಿಎಲ್​ನ ಸಾಂಪ್ರದಾಯಿಕ ಎದುರಾಳಿಗಳ ಮುಖಾಮುಖಿಗೂ ಮುನ್ನ ಉಭಯ ತಂಡಗಳ ಆಟಗಾರರ ಈ ಸಂಗಮದ ವಿಡಿಯೋ ಇದೀಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

TV9 Kannada


Leave a Reply

Your email address will not be published.