IPL 2022 Final: ಸಿಕ್ಸ್​ಗಳ ಮೂಲಕವೇ ಬಟ್ಲರ್ ಗಳಿಸಿದ ರನ್ ಎಷ್ಟು? ಪಾಂಡ್ಯ ಮುಂದಿದೆ ಭರ್ಜರಿ ದಾಖಲೆ..! | Jos Buttler slams his fifth IPL century: Records broken

IPL 2022 Records: ಐಪಿಎಲ್ ಇತಿಹಾಸದಲ್ಲಿ ಮೂರನೇ ಬಾರಿಗೆ ಒಬ್ಬ ಬ್ಯಾಟ್ಸ್‌ಮನ್ 800 ಕ್ಕೂ ಹೆಚ್ಚು ರನ್ ಗಳಿಸಿದ್ದಾರೆ. ಇದಕ್ಕೂ ಮುನ್ನ 2016ರಲ್ಲಿ ವಿರಾಟ್ ಕೊಹ್ಲಿ 4 ಶತಕ ಹಾಗೂ 7 ಅರ್ಧ ಶತಕಗಳ ನೆರವಿನಿಂದ 973 ರನ್ ಗಳಿಸಿದ್ದರು.

May 28, 2022 | 1:26 PM

TV9kannada Web Team

| Edited By: Zahir PY

May 28, 2022 | 1:26 PM
IPL 2022 ರಲ್ಲಿ ಜೋಸ್ ಬಟ್ಲರ್ ಅದ್ಭುತ ಫಾರ್ಮ್‌ನಲ್ಲಿದ್ದಾರೆ. ಇಲ್ಲಿಯವರೆಗೆ ಆಡಿದ 16 ಪಂದ್ಯಗಳಲ್ಲಿ 4 ಶತಕ ಮತ್ತು 4 ಅರ್ಧ ಶತಕಗಳನ್ನು ಬಾರಿಸಿದ್ದಾರೆ. ಈ ಮೂಲಕ 59ರ ಸರಾಸರಿಯಲ್ಲಿ 824 ರನ್ ಗಳಿಸಿದ್ದಾರೆ. ಈ ಮೂಲಕ ರಾಜಸ್ಥಾನ್ ರಾಯಲ್ಸ್ ತಂಡವನ್ನು 2ನೇ ಬಾರಿಗೆ ಫೈನಲ್​ಗೆ ಕೊಂಡೊಯ್ಯುವಲ್ಲಿ ಜೋಸ್ ಬಟ್ಲರ್ ಪ್ರಮುಖ ಪಾತ್ರವಹಿಸಿದ್ದಾರೆ.

ಮೇ 29 ರಂದು ಐಪಿಎಲ್ 2022 ರ ಫೈನಲ್‌ನಲ್ಲಿ ರಾಜಸ್ಥಾನವು ರಾಯಲ್ಸ್ ತಂಡವು ಗುಜರಾತ್ ಟೈಟಾನ್ಸ್ ಅನ್ನು ಎದುರಿಸಲಿದೆ. ಇತ್ತ ಗುಜರಾತ್ ತಂಡ ಚೊಚ್ಚಲ ಬಾರಿಗೆ ಫೈನಲ್ ಆಡುತ್ತಿದೆ. ಕ್ವಾಲಿಫೈಯರ್-1ರಲ್ಲಿ ರಾಜಸ್ಥಾನ್ ರಾಯಲ್ಸ್ ತಂಡವನ್ನು ಸೋಲಿಸಿ ಗುಜರಾತ್ ತಂಡವು ಫೈನಲ್​ಗೆ ಎಂಟ್ರಿ ಕೊಟ್ಟಿತ್ತು. ಹೀಗಾಗಿ ಅಂತಿಮ ಹಣಾಹಣಿ ಮತ್ತಷ್ಟು ರೋಚಕವಾಗಿರಲಿದೆ.

ಇನ್ನು ಈ ಟೂರ್ನಿಯುದ್ದಕ್ಕೂ ಜೋಸ್ ಬಟ್ಲರ್ ಅಬ್ಬರಿಸುತ್ತಾ ಬಂದಿದ್ದಾರೆ. ಕಳೆದ 16 ಪಂದ್ಯಗಳಲ್ಲಿ ಬಟ್ಲರ್ 78 ಫೋರ್ ಮತ್ತು 45 ಸಿಕ್ಸರ್​ಗಳನ್ನು ಬಾರಿಸಿದ್ದಾರೆ. ಅಂದರೆ ಕೇವಲ ಸಿಕ್ಸ್​ಗಳಿಂದಲೇ 270 ರನ್​ ಹಾಗೂ ಫೋರ್​ಗಳಿಂದ 312 ರನ್​ ಕಲೆಹಾಕಿದ್ದಾರೆ. ಈ ಮೂಲಕ ಬೌಂಡರಿಗಳಿಂದ ಒಟ್ಟು 582 ರನ್​ ಬಾರಿಸಿದ್ದಾರೆ. ವಿಶೇಷ ಎಂದರೆ ಅತೀ ಹೆಚ್ಚು ರನ್​ಗಳಿಸಿದ ಬ್ಯಾಟ್ಸ್​ಮನ್​ಗಳ ಪಟ್ಟಿಯಲ್ಲಿ 2ನೇ ಸ್ಥಾನದಲ್ಲಿರುವ ಕೆಎಲ್ ರಾಹುಲ್ 616 ರನ್​ ಬಾರಿಸಿದ್ದಾರೆ. ಇದಾಗ್ಯೂ ಬೇರೆ ಯಾವುದೇ ಬ್ಯಾಟ್ಸ್​ಮನ್ 580 ಕ್ಕಿಂತ ಅಧಿಕ ಮೊತ್ತ ಗಳಿಸಿಲ್ಲ. ಇತ್ತ ಬಟ್ಲರ್ ಸಿಕ್ಸ್​-ಫೋರ್​ಗಳ ಮೂಲಕ 582 ರನ್​ ಕಲೆಹಾಕಿರುವುದೇ ವಿಶೇಷ.

ಹಾಗೆಯೇ ಐಪಿಎಲ್ ಇತಿಹಾಸದಲ್ಲಿ ಮೂರನೇ ಬಾರಿಗೆ ಒಬ್ಬ ಬ್ಯಾಟ್ಸ್‌ಮನ್ 800 ಕ್ಕೂ ಹೆಚ್ಚು ರನ್ ಗಳಿಸಿದ್ದಾರೆ. ಇದಕ್ಕೂ ಮುನ್ನ 2016ರಲ್ಲಿ ವಿರಾಟ್ ಕೊಹ್ಲಿ 4 ಶತಕ ಹಾಗೂ 7 ಅರ್ಧ ಶತಕಗಳ ನೆರವಿನಿಂದ 973 ರನ್ ಗಳಿಸಿದ್ದರು. ಅದೇ ಸೀಸನ್​ ಸನ್​ರೈಸರ್ಸ್​ ಹೈದರಾಬಾದ್ ತಂಡದ ನಾಯಕರಾಗಿದ್ದ ಡೇವಿಡ್ ವಾರ್ನರ್ 9 ಅರ್ಧ ಶತಕಗಳ ನೆರವಿನಿಂದ 848 ರನ್ ಗಳಿಸಿದರು. ಇದೀಗ ಜೋಸ್ ಬಟ್ಲರ್ 824 ರನ್ ಕಲೆಹಾಕುವ ಮೂಲಕ ಐಪಿಎಲ್​ನಲ್ಲಿ 800 ರನ್​ಗಳಿಸಿದ 3ನೇ ಬ್ಯಾಟ್ಸ್​ಮನ್ ಎನಿಸಿಕೊಂಡಿದ್ದಾರೆ. ಇನ್ನು ಫೈನಲ್ ಪಂದ್ಯದಲ್ಲಿ ಜೋಸ್ ಬಟ್ಲರ್ 25 ರನ್ ಗಳಿಸಿದರೆ ವಾರ್ನರ್ ಅವರನ್ನು ಹಿಂದಿಕ್ಕಲಿದ್ದಾರೆ.

 ಅದೇ ರೀತಿ ಫೈನಲ್ ಪಂದ್ಯದಲ್ಲಿ ಗೆಲ್ಲುವ ಮೂಲಕ ಗುಜರಾತ್ ಟೈಟಾನ್ಸ್​ ತಂಡದ ನಾಯಕ ಹಾರ್ದಿಕ್ ಪಾಂಡ್ಯ ಕೂಡ ಶೇನ್ ವಾರ್ನ್ ದಾಖಲೆಯನ್ನು ಸರಿಗಟ್ಟುವ ತವಕದಲ್ಲಿದ್ದಾರೆ. ಅಂದರೆ  2008 ರ ಐಪಿಎಲ್​ನ ಮೊದಲ ಸೀಸನ್‌ನಲ್ಲಿ ನಾಯಕನಾಗಿ ವಾರ್ನ್​ ಐಪಿಎಲ್ ಪ್ರಶಸ್ತಿ ಗೆದ್ದಿದ್ದರು. ಇದೀಗ ಈ ಸಾಧನೆ ಮಾಡಲು ಪಾಂಡ್ಯ ಒಂದು ಪಂದ್ಯ ಮಾತ್ರ ಗೆಲ್ಲಬೇಕಿದೆ. ಅಲ್ಲದೆ ಫೈನಲ್​ನಲ್ಲಿ ರಾಜಸ್ಥಾನ್ ರಾಯಲ್ಸ್​ ತಂಡವನ್ನು ಮಣಿಸಿದರೆ ಈ ಸಾಧನೆ ಮಾಡಿದ ಕಿರಿಯ ನಾಯಕ ಎಂಬ ದಾಖಲೆ ಹಾರ್ದಿಕ್ ಪಾಂಡ್ಯ ಪಾಲಾಗಲಿದೆ.

Most Read Stories

TV9 Kannada

Leave a Reply

Your email address will not be published. Required fields are marked *