IPL 2022 Final: 14 ವರ್ಷಗಳ ನಂತರ ರಾಜಸ್ಥಾನ ಫೈನಲ್‌ಗೆ! ಟೇಬಲ್ ಟಾಪರ್ ಗುಜರಾತ್ ಮುಂದಿನ ಎದುರಾಳಿ | Ipl 2022 final gujarat titans vs rajasthan royals the last battle for crown between debutant and first champion


IPL 2022 Final: 14 ವರ್ಷಗಳ ನಂತರ ರಾಜಸ್ಥಾನ ಫೈನಲ್‌ಗೆ! ಟೇಬಲ್ ಟಾಪರ್ ಗುಜರಾತ್ ಮುಂದಿನ ಎದುರಾಳಿ

ಹಾರ್ದಿಕ್, ಸ್ಯಾಮ್ಸನ್

IPL 2022 Final: ರಾಜಸ್ಥಾನ್ ರಾಯಲ್ಸ್ ತಂಡವು 2008 ರ ನಂತರ ಮೊದಲ ಬಾರಿಗೆ ಫೈನಲ್ ತಲುಪಿದೆ. ಲೀಗ್ ಸುತ್ತಿನ ಆರಂಭದಿಂದಲೂ ಎಲ್ಲಾ ವಿಭಾಗಗಳಲ್ಲಿ ರಾಜಸ್ಥಾನ ಅಗ್ರಸ್ಥಾನದಲ್ಲಿದೆ.

ಐಪಿಎಲ್ 2022 (IPL 2022)ರ ಅಂತಿಮ ಸ್ಪರ್ಧಿಗಳನ್ನು ನಿರ್ಧರಿಸಲಾಗಿದೆ. ಮೇ 29 ರಂದು, ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂ (Narendra Modi Stadium)ನಲ್ಲಿ, ಲೀಗ್‌ನಲ್ಲಿ ಮೊದಲ ಬಾರಿಗೆ ಆಡುತ್ತಿರುವ ಗುಜರಾತ್ ಟೈಟಾನ್ಸ್ (Gujarat Titans), ಪ್ರಶಸ್ತಿ ಗೆಲ್ಲಲು ಲೀಗ್‌ನ ಮೊದಲ ಸೀಸನ್‌ನ ಚಾಂಪಿಯನ್ ರಾಜಸ್ಥಾನ್ ರಾಯಲ್ಸ್ (Rajasthan Royals) ತಂಡವನ್ನು ಎದುರಿಸಲಿದೆ. ಫೈನಲ್ ಮತ್ತೊಮ್ಮೆ ಮೊದಲ ಕ್ವಾಲಿಫೈಯರ್‌ನ ಪುನರಾವರ್ತನೆಯನ್ನು ನೋಡುತ್ತದೆ. ಲೀಗ್ ಸುತ್ತಿನಲ್ಲಿ ತನ್ನ ಮುಂದೆ ನಿಲ್ಲುವ ಅವಕಾಶವನ್ನು ಬೇರೆ ಯಾವುದೇ ತಂಡಕ್ಕೆ ನೀಡದ ಗುಜರಾತ್ ಟೈಟಾನ್ಸ್ ಪ್ರಾಬಲ್ಯವನ್ನು ಸಂಜು ಸ್ಯಾಮ್ಸನ್ ತಂಡ ಎದುರಿಸಬೇಕಾಗಿದೆ. ಗೆಲುವು ಏನೇ ಇರಲಿ, ಬಹಳ ದಿನಗಳ ನಂತರ ಅಭಿಮಾನಿಗಳಿಗೆ ಹೊಸ ಚಾಂಪಿಯನ್‌ ದರ್ಶನ ಸಿಗುವುದು ನಿಶ್ಚಿತ.

ರಾಜಸ್ಥಾನ್ ರಾಯಲ್ಸ್ ತಂಡವು ತಮ್ಮ ಮಾರ್ಗದರ್ಶಕ ಮತ್ತು ಮಾಜಿ ನಾಯಕ ಶೇನ್ ವಾರ್ನ್‌ಗಾಗಿ ಈ ಸೀಸನ್​ನಲ್ಲಿ ಕಪ್ ಗೆಲ್ಲಲು ಬಯಸಿದೆ. ಇದಕ್ಕೆ ಉತ್ತರವೆಂಬಂತೆ ರಾಯಲ್ಸ್ ಎರಡನೇ ಕ್ವಾಲಿಫೈಯರ್ ಪಂದ್ಯವನ್ನು ಏಕಪಕ್ಷೀಯ ರೀತಿಯಲ್ಲಿ ಗೆದ್ದ ರೀತಿ ನೋಡಿದರೆ ಗುಜರಾತ್​ಗೆ ಫೈನಲ್‌ನಲ್ಲಿ ಕಠಿಣ ಸವಾಲನ್ನು ನೀಡಲಿದೆ ಎಂಬುದನ್ನು ಸಾಬೀತುಪಡಿಸಿದೆ. ಸ್ಯಾಮ್ಸನ್ ಮತ್ತು ಹಾರ್ದಿಕ್ ಇಬ್ಬರೂ ನಾಯಕರಾಗಿ ಐಪಿಎಲ್ ಗೆದ್ದಿಲ್ಲ. ಹೀಗಾಗಿ ಈ ಇಬ್ಬರು ಇತಿಹಾಸವನ್ನು ರಚಿಸುವ ಅವಕಾಶವನ್ನು ಹೊಂದಿರುತ್ತಾರೆ.

TV9 Kannada


Leave a Reply

Your email address will not be published. Required fields are marked *