
ಪಂತ್, ರೋಹಿತ್
IPL 2022 MI vs DC Live Streaming: ಐಪಿಎಲ್ 2022 ರ ಅಗ್ರ ಮೂರು ತಂಡಗಳು ಬಹುತೇಕ ನಿರ್ಧಾರವಾಗಿವೆ, ಆದರೂ ಉಳಿದ ಒಂದು ಸ್ಥಾನಕ್ಕಾಗಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಡೆಲ್ಲಿ ಕ್ಯಾಪಿಟಲ್ಸ್ ನಡುವೆ ಪೈಪೋಟಿ ನಡೆಯುತ್ತಿದೆ.
ಐಪಿಎಲ್ 2022 (IPL 2022)ರ ಅಗ್ರ ಮೂರು ತಂಡಗಳು ಬಹುತೇಕ ನಿರ್ಧಾರವಾಗಿವೆ, ಆದರೂ ಉಳಿದ ಒಂದು ಸ್ಥಾನಕ್ಕಾಗಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಡೆಲ್ಲಿ ಕ್ಯಾಪಿಟಲ್ಸ್ (Royal Challengers Bangalore and Delhi Capitals) ನಡುವೆ ಪೈಪೋಟಿ ನಡೆಯುತ್ತಿದೆ. ಈ ಲೀಗ್‌ನ ಪ್ರಮುಖ ಪಂದ್ಯ ಶನಿವಾರ ನಡೆಯಲಿದ್ದು, ಮುಂಬೈ ಇಂಡಿಯನ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ನಡುವೆ ನಡೆಯಲಿದೆ. ಪ್ರಸ್ತುತ ಡೆಲ್ಲಿ ಕ್ಯಾಪಿಟಲ್ಸ್ ತಂಡ 13 ಪಂದ್ಯಗಳಲ್ಲಿ ಏಳು ಗೆಲುವಿನೊಂದಿಗೆ 14 ಅಂಕ ಗಳಿಸಿದೆ. ಸದ್ಯ ಅವರು ಐದನೇ ಸ್ಥಾನದಲ್ಲಿದ್ದಾರೆ. ಅಗ್ರ ನಾಲ್ಕನೇ ಸ್ಥಾನವನ್ನು ತಲುಪಲು, ಅವರು ಯಾವುದೇ ಬೆಲೆ ತೆತ್ತಾದರೂ ಈ ಪಂದ್ಯವನ್ನು ಗೆಲ್ಲಬೇಕಾಗುತ್ತದೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 14 ಪಂದ್ಯಗಳ ಪೈಕಿ 8ರಲ್ಲಿ ಗೆಲುವು ಸಾಧಿಸಿದ್ದು, ಆರು ಪಂದ್ಯಗಳಲ್ಲಿ ಸೋಲು ಎದುರಿಸಬೇಕಾಯಿತು. ಜೊತೆಗೆ 16 ಅಂಕಗಳನ್ನು ಹೊಂದಿದೆ. ದೆಹಲಿ ತಂಡವು ಮುಂಬೈ ತಂಡವನ್ನು ಸೋಲಿಸಿದರೆ, ಅದು ಪ್ಲೇಆಫ್ ತಲುಪುತ್ತದೆ ಏಕೆಂದರೆ ಅದರ ನೆಟ್-ರೇಟ್ RCB ಗಿಂತ ಉತ್ತಮವಾಗಿದೆ. ಆದರೆ, ಸೋತರೆ ಆರ್‌ಸಿಬಿ ಸ್ಥಾನ ಖಚಿತವಾಗಲಿದೆ.