IPL 2022: RCB ತಂಡಕ್ಕೆ ಕನ್ನಡಿಗನದ್ದೇ ಚಿಂತೆ..! | IPL 2022: KL Rahul Stats vs RCB


IPL 2022: RCB ತಂಡಕ್ಕೆ ಕನ್ನಡಿಗನದ್ದೇ ಚಿಂತೆ..!

KL Rahul Stats vs RCB

IPL 2022: ಐಪಿಎಲ್​ನ 31ನೇ ಪಂದ್ಯದಲ್ಲಿ ಆರ್​ಸಿಬಿ ಹಾಗೂ ಲಕ್ನೋ ಸೂಪರ್ ಜೈಂಟ್ಸ್ (​RCB vs LSG) ಮುಖಾಮುಖಿಯಾಗಲಿದೆ. ಉಭಯ ತಂಡಗಳು ಇದೇ ಮೊದಲ ಬಾರಿ ಆಡುತ್ತಿದ್ದರೂ ಒಬ್ಬ ಆಟಗಾರನ ಭಯವಂತು ಆರ್​ಸಿಬಿಗೆ ಕಾಡಲಿದೆ. ಹೌದು, ಲಕ್ನೋ ಸೂಪರ್ ಜೈಂಟ್ಸ್ ತಂಡದ ನಾಯಕ ಕನ್ನಡಿಗ ಕೆಎಲ್ ರಾಹುಲ್ ಇದೀಗ ಭರ್ಜರಿ ಫಾರ್ಮ್​ನಲ್ಲಿದ್ದಾರೆ. ಕಳೆದ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ದ ಶತಕ ಸಿಡಿಸಿ ಮಿಂಚಿದ್ದ ರಾಹುಲ್ ಅವರ ವಿಕೆಟ್ ಆರ್​ಸಿಬಿ ಪಾಲಿಗೆ ನಿರ್ಣಾಯಕ ಎಂದರೆ ತಪ್ಪಾಗಲಾರದು. ಏಕೆಂದರೆ ಕೆಎಲ್ ರಾಹುಲ್ ಆರ್​ಸಿಬಿ ವಿರುದ್ದ ಮಾತ್ರ ಭರ್ಜರಿ ಪ್ರದರ್ಶನ ನೀಡುತ್ತಾ ಬಂದಿದ್ದಾರೆ. ಅಂದರೆ ಇದುವರೆಗೆ ಆರ್​ಸಿಬಿ ವಿರುದ್ದ ರಾಹುಲ್ 11 ಪಂದ್ಯಗಳನ್ನು ಆಡಿದ್ದಾರೆ. ಈ ವೇಳೆ ಕಲೆಹಾಕಿದ್ದು ಬರೋಬ್ಬರಿ 501 ರನ್​ಗಳು.

ಇನ್ನು ಆರ್​ಸಿಬಿ ವಿರುದ್ದ 11 ಪಂದ್ಯಗಳಲ್ಲಿ ರಾಹುಲ್ 39 ಫೋರ್ ಬಾರಿಸಿದ್ದಾರೆ. ಅಲ್ಲದೆ ಬರೋಬ್ಬರಿ 29 ಸಿಕ್ಸ್​ಗಳನ್ನೂ ಕೂಡ​ ಸಿಡಿಸಿದ್ದಾರೆ. ಹಾಗೆಯೇ ಆರ್​ಸಿಬಿ ವಿರುದ್ದ ಕೆಎಲ್ ರಾಹುಲ್ ಅವರ ಸ್ಟ್ರೈಕ್ ರೇಟ್ 150 ಕ್ಕಿಂತ ಹೆಚ್ಚಿದೆ. ಅಂದರೆ ಆರ್​ಸಿಬಿ ವಿರುದ್ದ ಅಬ್ಬರಿಸಿದ ಪ್ರಮುಖ ಆಟಗಾರರಲ್ಲಿ ಕೆಎಲ್ ರಾಹುಲ್ ಕೂಡ ಒಬ್ಬರು. ಹೀಗಾಗಿ ಆರ್​ಸಿಬಿ ಗೆಲ್ಲಬೇಕಿದ್ದರೆ ಕೆಎಲ್ ರಾಹುಲ್ ಅವರ ವಿಕೆಟ್ ಬೇಗನೆ ಪಡೆಯಲೇಬೇಕು. ಇಲ್ಲದಿದ್ದರೆ ಮತ್ತೊಮ್ಮೆ ಆರ್​ಸಿಬಿ ಪಾಲಿಗೆ ಕೆಎಲ್​ಆರ್​ ಕಂಟಕವಾಗಲಿದ್ದಾರೆ.

ಇತ್ತ ಆರ್​ಸಿಬಿ ವಿರುದ್ದ ಭರ್ಜರಿ ಪ್ರದರ್ಶನ ನೀಡುವ ಕೆಎಲ್ ರಾಹುಲ್ ಅವರ ವಿಕೆಟ್​ಗಾಗಿ ಆರ್​ಸಿಬಿ ವಿಶೇಷ ಕಾರ್ಯತಂತ್ರಗಳೊಂದಿಗೆ ಕಣಕ್ಕಿಳಿಯಲಿದೆ. ಇದಾಗ್ಯೂ ಕೆಎಲ್ ರಾಹುಲ್ ಆರ್​ಸಿಬಿ ವಿರುದ್ದ ಅಬ್ಬರಿಸಲಿದ್ದಾರಾ ಕಾದು ನೋಡಬೇಕಿದೆ. ಒಟ್ಟಿನಲ್ಲಿ ಐಪಿಎಲ್​ನ 31ನೇ ಪಂದ್ಯದಲ್ಲಿ ರೋಚಕ ಹೋರಾಟವನ್ನು ನಿರೀಕ್ಷಿಸಬಹುದು.

ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB):
ಫಾಫ್ ಡು ಪ್ಲೆಸಿಸ್ (ನಾಯಕ), ವಿರಾಟ್ ಕೊಹ್ಲಿ, ಗ್ಲೆನ್ ಮ್ಯಾಕ್ಸ್‌ವೆಲ್, ಅನುಜ್ ರಾವತ್, ದಿನೇಶ್ ಕಾರ್ತಿಕ್, ಶಹಬಾಜ್ ಅಹ್ಮದ್, ವನಿಂದು ಹಸರಂಗ, ಹರ್ಷಲ್ ಪಟೇಲ್, ಜೋಶ್ ಹ್ಯಾಝಲ್​ವುಡ್, ಮೊಹಮ್ಮದ್ ಸಿರಾಜ್, ಆಕಾಶ್ ದೀಪ್, ಸುಯಶ್ ಪ್ರಭುದೇಸಾಯಿ, ರಜತ್ ಪಾಟಿದಾರ್, ಅನೀಶ್ವರ್ ಗೌತಮ್, ಕರ್ಣ್ ಶರ್ಮಾ, ಜೇಸನ್ ಬೆಹ್ರೆಡ್ರಾರ್ಫ್, ಸಿದ್ದಾರ್ಥ್ ಕೌಲ್, ಚಾಮಾ ಮಿಲಿಂದ್, ಮಹಿಪಾಲ್ ಲೊಮ್ರೋರ್, ಶೆರ್ಫೇನ್ ರುದರ್‌ಫೋರ್ಡ್, ಫಿನ್ ಅಲೆನ್, ಡೇವಿಡ್ ವಿಲ್ಲಿ.

ಲಕ್ನೋ ಸೂಪರ್ ಜೈಂಟ್ಸ್ (LSG):
ಕೆಎಲ್ ರಾಹುಲ್ (ನಾಯಕ), ಕ್ವಿಂಟನ್ ಡಿ ಕಾಕ್, ಮನೀಶ್ ಪಾಂಡೆ, ದೀಪಕ್ ಹೂಡಾ, ಮಾರ್ಕಸ್ ಸ್ಟೊಯಿನಿಸ್, ಕೃನಾಲ್ ಪಾಂಡ್ಯ, ಜೇಸನ್ ಹೋಲ್ಡರ್, ಕೆ ಗೌತಮ್, ರವಿ ಬಿಷ್ಣೋಯ್, ಅವೇಶ್ ಖಾನ್, ಆ್ಯಂಡ್ರ್ಯೂ ಟೈ, ದುಷ್ಮಂತ ಚಮೀರಾ, ಅಂಕಿತ್ ರಾಜ್‌ಪೂತ್, ಶಹಬಾಜ್ ನದೀಮ್, ಮನನ್ ವೋಹ್ರಾ, ಮೊಹ್ಸಿನ್ ಬದೋನಿ, ಕರಣ್ ಶರ್ಮಾ, ಮಯಾಂಕ್ ಯಾದವ್, ಕೈಲ್ ಮೇಯರ್ಸ್, ಕೆ ಗೌತಮ್, ಎವಿನ್ ಲೂಯಿಸ್.

TV9 Kannada


Leave a Reply

Your email address will not be published. Required fields are marked *