IPL 2023 Final: ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಐಪಿಎಲ್ 2023 ಫೈನಲ್ಗೂ ಮುನ್ನ ಸಮಾರೋಪ ಸಮಾರಂಭ ಏರ್ಪಡಿಸಲು ಮುಂದಾಗಿದೆ. ಇದನ್ನು ಅದ್ಧೂರಿಯಾಗಿ ನೆರವೇರಿಸಲು ತೀರ್ಮಾನಿಸಿದೆ.

IPL 2023 closing ceremony
16ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿ ಕೊನೆಯ ಹಂತದಲ್ಲಿದೆ. ಇನ್ನು ಉಳಿದಿರುವುದು ಕೇವಲ ಎರಡು ಪಂದ್ಯ ಮಾತ್ರ. ಎಂಎಸ್ ಧೋನಿ ನಾಯಕತ್ವದ ಚೆನ್ನೈ ಸೂಪರ್ ಕಿಂಗ್ಸ್ ತಂಡ ಮೊದಲ ಕ್ವಾಲಿಫೈಯರ್ನಲ್ಲಿ ಗೆಲ್ಲುವ ಮೂಲಕ ಫೈನಲ್ಗೆ ಎಂಟ್ರಿ ಕೊಟ್ಟಿದೆ. ಇಂದು ಕ್ವಾಲಿಫೈಯರ್-2 (Qualifier 2) ಪಂದ್ಯ ನಡೆಯಲಿದ್ದು ಅಹ್ಮದಾಬಾದ್ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಹಾರ್ದಿಕ್ ಪಾಂಡ್ಯ ಅವರ ಗುಜರಾತ್ ಟೈಟಾನ್ಸ್ ಮತ್ತು ರೋಹಿತ್ ಶರ್ಮಾ ನೇತೃತ್ವದ ಮುಂಬೈ ಇಂಡಿಯನ್ಸ್ (GT vs MI) ಮುಖಾಮುಖಿ ಆಗಲಿದೆ. ಇಲ್ಲಿ ಗೆದ್ದ ತಂಡ ಮೇ 28 ಭಾನುವಾರದಂದು ಸಿಎಸ್ಕೆ ವಿರುದ್ಧ ಐಪಿಎಲ್ 2023 ಫೈನಲ್ನಲ್ಲಿ (IPL 2023 Final) ಟ್ರೋಫಿಗಾಗಿ ಸೆಣೆಸಾಡಲಿದೆ.
ಇದೀಗ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಐಪಿಎಲ್ 2023 ಫೈನಲ್ಗೂ ಮುನ್ನ ಸಮಾರೋಪ ಸಮಾರಂಭ ಏರ್ಪಡಿಸಲು ಮುಂದಾಗಿದೆ. ಇದನ್ನು ಅದ್ಧೂರಿಯಾಗಿ ನೆರವೇರಿಸಲು ತೀರ್ಮಾನಿಸಿದೆ. ಹಾಗಾದರೆ ಐಪಿಎಲ್ 2023 ಕ್ಲೋಸಿಂಗ್ ಸೆರಮನಿ ಯಾವಾಗ?, ಎಷ್ಟು ಗಂಟೆಗೆ?, ಯಾರೆಲ್ಲ ಸಾಕ್ಷಿಯಾಗಲಿದ್ದಾರೆ ಎಂಬುದನ್ನು ನೋಡೋಣ.
Asia Cup 2023: 3 ಮಂಡಳಿ ಅಧ್ಯಕ್ಷರ ಹಾಜರಿ; ಐಪಿಎಲ್ ಫೈನಲ್ ಪಂದ್ಯದಲ್ಲಿ ಏಷ್ಯಾಕಪ್ ಭವಿಷ್ಯ ನಿರ್ಧಾರ!