IPL 2023 Retention ಕ್ಯಾಪ್ಟೆನ್ಸಿ ಕಳೆದುಕೊಂಡ ಬೆನ್ನಲ್ಲೇ ಕನ್ನಡಿಗ ಮಯಾಂಕ್‌ ಅಗರ್ವಾಲ್‌ ಪಂಜಾಬ್‌ ಕಿಂಗ್ಸ್‌ ತಂಡದಿಂದ ಔಟ್ – IPL 2023 Retention: Punjab Kings release ex-captain Mayank Agarwal Odean Smith, retain Shahrukh Khan


ಕ್ಯಾಪ್ಟೆನ್ಸಿ ಹೋದ ಬೆನ್ನಲ್ಲೇ ಕನ್ನಡಿಗ ಮಯಾಂಕ್‌ ಅಗರ್ವಾಲ್‌ ಪಂಜಾಬ್‌ ಕಿಂಗ್ಸ್‌ ತಂಡದಿಂದ ಹೊರಬಿದ್ದಿದ್ದಾರೆ. 2023ರ ಐಪಿಎಲ್‌ ಹರಾಜಿಗೆ ಮಯಾಂಕ್‌ ಅಗರ್ವಾಲ್‌ ಅವರನ್ನು ಪಂಜಾಬ್‌ ಕಿಂಗ್ಸ್‌ ತಂಡ ಬಿಡುಗಡೆ ಮಾಡಿದೆ.

ಶಿಖರ್‌ ಧವನ್‌ ಅವರನ್ನು ನಾಯಕರನ್ನಾಗಿ ಘೋಷಣೆ ಮಾಡಿದ ಬೆನ್ನಲ್ಲೇ ಇದೀಗ 2023ರ ಐಪಿಎಲ್‌(IPL 2023) ಹರಾಜಿಗೆ ಪಂಜಾಬ್‌ ಕಿಂಗ್ಸ್‌ ತಂಡ (Punjab Kings)  ಮಯಾಂಕ್‌ ಅಗರ್ವಾಲ್‌ (Mayank Agarwal ) ಅವರನ್ನು ರಿಲೀಸ್‌ ಮಾಡಿದೆ.  2022 ರ ಋತುವಿನ ಪಂಜಾಬ್ ಕಿಂಗ್ಸ್ ನಾಯಕನಾಗಿ ಮಯಾಂಕ್‌ ಅಗರ್ವಾಲ್‌ ಅವರನ್ನ ನೇಮಿಸಿತ್ತು. ಆದ್ರೆ, 2023ರ ಐಪಿಎಲ್‌ ಹರಾಜಿಗೆ ಆಟಗಾರರನ್ನು ಬಿಡುಗಡೆ ಮಾಡುವ ಅವಕಾಶ ನೀಡಿದ್ದರಿಂದ ಕಿಂಗ್ಸ್ ಪಂಜಾಬ್, ಮಯಾಂಕ್‌ ಅಗರ್ವಾಲ್​ಗೆ ತಂಡದಿಂದ ಗೇಟ್​ ಪಾಸ್ ನೀಡಿದೆ.

IPL Retention: ನಾಯಕ ಕೇನ್‌ ವಿಲಿಯಮ್ಸನ್​ ಜತೆ ಮೂವರು ಕನ್ನಡಿಗರಿಗೆ ಗೇಟ್‌ಪಾಸ್‌ ನೀಡಿದ ಸನ್‌ರೈಸರ್ಸ್‌ ಹೈದರಾಬಾದ್

ಮಯಾಂಕ್‌ ಅಗರ್ವಾಲ್​ ಅವರನ್ನು ತಂಡದಿಂದ ಕೈಬಿಡುವ ದೃಷ್ಟಿಯಿಂದ ಶಿಖರ್ ಧವನ್​ಗೆ ನಾಯಕಪಟ್ಟ ಕಟ್ಟಲಾಗಿದೆ ಎಂದು ಚರ್ಚೆಯಾಗಿತ್ತು. ಅದು ಇದೀಗ ಸತ್ಯವಾಗಿದೆ. ಕಳೆದ ಐಪಿಎಲ್ ಸೀಸನ್​ನಲ್ಲಿ ಮಯಾಂಕ್ 13 ಪಂದ್ಯಗಳಲ್ಲಿ ಕೇವಲ 196 ರನ್ ಗಳಿಸಿದ್ದರು. ಇದರಿಂದ ಮ್ಯಾನೇಜ್​ಮೆಂಟ್ ನಾಯಕನ ಆಟಕ್ಕೆ ಬೇಸರಗೊಂಡಿತ್ತು. ಇದೀಗ ಅಂತಿಮವಾಗಿ ಮಯಾಂಕ್​ ಅವರನ್ನು ತಂಡದಿಂದ ಬಿಡುಗಡೆಗೊಳಿಸಲಾಗಿದೆ.

ಮಯಾಂಕ್ ಅಗರ್ವಾಲ್ ಜೊತೆಗೆ ಓಡಿಯನ್ ಸ್ಮಿತ್, ವೈಭವ್ ಅರೋರಾ, ಬೆನ್ನಿ ಹೋವೆಲ್, ಇಶಾನ್ ಪೊರೆಲ್, ಅನ್ಶ್ ಪಟೇಲ್, ಪ್ರೇರಕ್ ಮಂಕಡ್, ಸಂದೀಪ್ ಶರ್ಮಾ, ವೃತ್ತಿಕ್ ಚಟರ್ಜಿಅವರು ಪಂಜಾಬ್‌ ಕಿಂಗ್ಸ್‌ ತಂಡದಿಂದ ಔಟ್ ಆಗಿದ್ದಾರೆ. ಹಾಗಾದ್ರೆ, ಇವರೆಲ್ಲರನ್ನೂ ಹೊರತುಪಡಿಸಿ ತಂಡದಲ್ಲಿ ಯಾರೆಲ್ಲ ಉಳಿದುಕೊಂಡಿದ್ದಾರೆ ಎನ್ನುವ ಪಟ್ಟಿ ಈ ಕೆಳಗಿನಂತಿದೆ ನೋಡಿ..

ಬಿಡುಗಡೆಯಾದ ಆಟಗಾರರು: ಮಯಾಂಕ್ ಅಗರ್ವಾಲ್, ಓಡಿಯನ್ ಸ್ಮಿತ್, ವೈಭವ್ ಅರೋರಾ, ಬೆನ್ನಿ ಹೋವೆಲ್, ಇಶಾನ್ ಪೊರೆಲ್, ಅನ್ಶ್ ಪಟೇಲ್, ಪ್ರೇರಕ್ ಮಂಕಡ್, ಸಂದೀಪ್ ಶರ್ಮಾ, ವೃತ್ತಿಕ್ ಚಟರ್ಜಿ.

ಟ್ರೇಡಿಂಗ್‌ ಮೂಲಕ ತಂಡಕ್ಕೆ ಆಯ್ಕೆ: ಯಾರೂ ಇಲ್ಲ

ತಂಡದ ಬಳಿ ಇರುವ ಹಣ: 32.2 ಕೋಟಿ ರೂಪಾಯಿ

ಬಾಕಿ ಉಳಿದಿರುವ ವಿದೇಶಿ ಆಟಗಾರರ ಸ್ಥಾನ: 3

ಹಾಲಿ ತಂಡ ಇಂತಿದೆ: ಶಿಖರ್ ಧವನ್ (ನಾಯಕ), ಶಾರುಖ್ ಖಾನ್, ಜಾನಿ ಬೈರ್‌ಸ್ಟೋವ್, ಪ್ರಬ್‌ಸಿಮ್ರಾನ್ ಸಿಂಗ್, ಭಾನುಕಾ ರಾಜಪಕ್ಸೆ, ಜಿತೇಶ್ ಶರ್ಮಾ, ರಾಜ್ ಬಾವಾ, ರಿಷಿ ಧವನ್, ಲಿಯಾಮ್ ಲಿವಿಂಗ್‌ಸ್ಟೋನ್, ಅಥರ್ವ ಟೈಡೆ, ಅರ್ಶ್‌ದೀಪ್ ಸಿಂಗ್, ಬಲ್ತೇಜ್ ಸಿಂಗ್, ನಾಥನ್ ಎಲ್ಲಿಸ್, ಕಗಿಸೊ ರಬಾಡ, ರಾಹುಲ್ ಚಾಹರ್, ಹರ್‌ಪ್ರೀತ್ ಬ್ರಾರ್‌

ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

ತಾಜಾ ಸುದ್ದಿ

TV9 Kannada


Leave a Reply

Your email address will not be published.