IPL Auction 2023: ಮಿನಿ ಹರಾಜಿಗೆ ದಿನಗಣನೆ; ಆಟಗಾರರ ಮೂಲ ಬೆಲೆ, ಯಾವ ಚಾನೆಲ್​ನಲ್ಲಿ, ಎಷ್ಟು ಗಂಟೆಗೆ ನೇರ ಪ್ರಸಾರ​? – Ipl 2023 mini auction players base price list venue date time live streaming details in kannada


IPL Auction 2023: ಮಿನಿ ಹರಾಜಿಗೆ ಆಯ್ಕೆಯಾದ 405 ಮಂದಿಯಲ್ಲಿ 273 ಮಂದಿ ಭಾರತೀಯ ಆಟಗಾರರಾಗಿದ್ದರೆ, 132 ಮಂದಿ ವಿದೇಶಿ ಆಟಗಾರರಾಗಿದ್ದಾರೆ.

IPL Auction 2023: ಮಿನಿ ಹರಾಜಿಗೆ ದಿನಗಣನೆ; ಆಟಗಾರರ ಮೂಲ ಬೆಲೆ, ಯಾವ ಚಾನೆಲ್​ನಲ್ಲಿ, ಎಷ್ಟು ಗಂಟೆಗೆ ನೇರ ಪ್ರಸಾರ​?

ipl 2023 auction

Image Credit source: insidesport

ಐಪಿಎಲ್ 2023 (IPL 2023)ರ ತಯಾರಿ ಈಗಾಗಲೇ ಪ್ರಾರಂಭವಾಗಿದೆ. ಮುಂಬರುವ ಸೀಸನ್​ನಲ್ಲಿ ಉತ್ತಮ ಪ್ರದರ್ಶನ ನೀಡಲು 10 ಫ್ರಾಂಚೈಸಿಗಳು ಕಾರ್ಯತಂತ್ರ ರೂಪಿಸಲು ಆರಂಭಿಸಿವೆ. ಅದಕ್ಕೂ ಮೊದಲು ಡಿ.23 ರಂದು ನಡೆಯಲ್ಲಿರುವ ಮಿನಿ ಹರಾಜಿನ (mini auction) ಮೇಲೆ ಎಲ್ಲರ ಕಣ್ಣು ನೆಟ್ಟಿದೆ. ಮಿನಿ ಹರಾಜಿನಲ್ಲಿ ಫ್ರಾಂಚೈಸಿಗಳು ತಮಗೆ ಬೇಕಾದ ಆಟಗಾರರನ್ನು ಖರೀದಿಸುವುದರೊಂದಿಗೆ ತಮ್ಮ ತಂಡಗಳನ್ನು ಮತ್ತಷ್ಟು ಬಲಪಡಿಸಲು ನೋಡುತ್ತಿವೆ. ಇದಕ್ಕಾಗಿ, ತಮಗೆ ಅಗತ್ಯವಿರುವ ಆಟಗಾರರ ಮೇಲೆ ಹಣದ ಹೊಳೆ ಹರಿಸಲು ಸಿದ್ಧವಾಗಿವೆ. ಡಿಸೆಂಬರ್ 23 ರಂದು ಮಧ್ಯಾಹ್ನ 2:30 ಕ್ಕೆ ಕೊಚ್ಚಿಯಲ್ಲಿ ಈ ಹರಾಜು ಪ್ರಕ್ರಿಯೆ ಆರಂಭವಾಗಲಿದೆ. ಈ ಬಾರಿ ವಿಶ್ವದಾದ್ಯಂತ 991 ಆಟಗಾರರು ಈ ಹರಾಜಿಗೆ ತಮ್ಮ ಹೆಸರನ್ನು ನೋಂದಣಿ ಮಾಡಿಕೊಂಡಿದ್ದರು. ಆದರೆ ಅಂತಿಮ ಪಟ್ಟಿಯಲ್ಲಿ 405 ಆಟಗಾರರು ಮಾತ್ರ ಸ್ಥಾನ ಪಡೆದಿದ್ದಾರೆ. ಮಿನಿ ಹರಾಜಿಗೆ ಆಯ್ಕೆಯಾದ 405 ಮಂದಿಯಲ್ಲಿ 273 ಮಂದಿ ಭಾರತೀಯ ಆಟಗಾರರಾಗಿದ್ದರೆ, 132 ಮಂದಿ ವಿದೇಶಿ ಆಟಗಾರರಾಗಿದ್ದಾರೆ. 132 ವಿದೇಶಿ ಆಟಗಾರರ ಪೈಕಿ 4 ಆಟಗಾರರು ಅಸೋಸಿಯೇಟ್ ನೇಷನ್‌ನವರು. ಒಟ್ಟು 119 ಕ್ಯಾಪ್ಡ್ ಅಂದರೆ ಅಂತಾರಾಷ್ಟ್ರೀಯ ಕ್ರಿಕೆಟ್ ಆಟಗಾರರು ಮತ್ತು 282 ಅನ್ ಕ್ಯಾಪ್ಡ್ ಆಟಗಾರರಿದ್ದಾರೆ.

2 ಕೋಟಿ ಮೂಲ ಬೆಲೆ ಹೊಂದಿರುವ ಆಟಗಾರರು

ರಿಲೆ ರೋಸೋ, ಕೇನ್ ವಿಲಿಯಮ್ಸನ್, ಸ್ಯಾಮ್ ಕರನ್, ಕ್ಯಾಮೂರಾನ್ ಗ್ರೀನ್, ಜೇಸನ್ ಹೋಲ್ಡರ್, ಬೆನ್ ಸ್ಟೋಕ್ಸ್, ಟಾಮ್ ಬ್ಯಾಂಟನ್, ನಿಕೋಲಸ್ ಪೂರನ್, ಕ್ರಿಸ್ ಜೋರ್ಡಾನ್, ಆಡಮ್ ಮಿಲ್ನೆ, ಆದಿಲ್ ರಶೀದ್, ಟ್ರಾವಿಸ್ ಹೆಡ್, ರೋಸ್ಸಿ ವ್ಯಾನ್ ಡೆರ್ ಡುಸೆನ್, ಜಿಮ್ಮಿ ನೀಶಮ್, ಕ್ರಿಸ್ಟನ್ ಮತ್ತು ಟೈಮಲ್ ಮಿಲ್ಸ್‌.

1.50 ಕೋಟಿ ಮೂಲ ಬೆಲೆಯ ಆಟಗಾರರು

ಹ್ಯಾರಿ ಬ್ರೂಕ್, ಶಕೀಬ್ ಅಲ್ ಹಸನ್, ಜೈ ರಿಚರ್ಡ್ಸನ್, ಆಡಮ್ ಝಂಪಾ, ವಿಲ್ ಜಾಕ್ವೆಸ್, ಡೇವಿಡ್ ಮಲನ್, ಶೆರ್ಫೇನ್ ರುದರ್ಫೋರ್ಡ್, ರಿಲೆ ಮೆರೆಡಿತ್, ಜೇಸನ್ ರಾಯ್, ಸೀನ್ ಅಬಾಟ್, ನಾಥನ್ ಕೌಲ್ಟರ್-ನೈಲ್.

1 ಕೋಟಿ ಮೂಲ ಬೆಲೆಯ ಆಟಗಾರರು

ಮಯಾಂಕ್ ಅಗರ್ವಾಲ್, ಜೋ ರೂಟ್, ಹೆನ್ರಿ ಕ್ಲಾಸೆನ್, ಅಖಿಲ್ ಹೊಸೈನ್, ಮುಜೀಬ್ ರೆಹಮಾನ್, ತಬ್ರಿಜ್ ಶಮ್ಸಿ, ಮನೀಶ್ ಪಾಂಡೆ, ಡ್ಯಾರಿಲ್ ಮಿಚೆಲ್, ಮೊಹಮ್ಮದ್ ನಬಿ, ಶಾಯ್ ಹೋಪ್, ಟಾಮ್ ಲ್ಯಾಥಮ್, ಮೈಕೆಲ್ ಬ್ರಾಸ್ವೆಲ್, ಆಂಡ್ರ್ಯೂ ಟೈ, ಲ್ಯೂಕ್ ವುಡ್, ಡೇವಿಡ್ ವೈಸ್, ರೋಸ್ಟನ್ ಚೇಸ್ ಮತ್ತು ರಹಕೀಮ್ ಕಾರ್ನ್‌ವಾಲ್.

ಐಪಿಎಲ್ ಮಿನಿ ಹರಾಜಿನ ಪೂರ್ಣ ವಿವರ ಇಲ್ಲಿದೆ.

ಐಪಿಎಲ್ ಮಿನಿ ಹರಾಜು ಯಾವಾಗ ನಡೆಯಲಿದೆ?

ಐಪಿಎಲ್ 2023ರ ಮಿನಿ ಹರಾಜು ಡಿಸೆಂಬರ್ 23 ರಂದು ಕೊಚ್ಚಿಯಲ್ಲಿ ನಡೆಯಲಿದೆ.

ಮಿನಿ ಹರಾಜು ಯಾವಾಗ ಪ್ರಾರಂಭವಾಗುತ್ತದೆ?

2023ರ ಐಪಿಎಲ್ ಮಿನಿ ಹರಾಜು ಮಧ್ಯಾಹ್ನ 2:30 ಕ್ಕೆ ಪ್ರಾರಂಭವಾಗುತ್ತದೆ.

ಮಿನಿ ಹರಾಜು ಎಲ್ಲಿ ನಡೆಯಲಿದೆ?

ಐಪಿಎಲ್ ಮಿನಿ ಹರಾಜು ಡಿಸೆಂಬರ್ 23 ರಂದು ಭಾರತದ ಕೊಚ್ಚಿಯಲ್ಲಿ ನಡೆಯಲಿದೆ.

ಮಿನಿ ಹರಾಜಿನ ನೇರ ಪ್ರಸಾರವನ್ನು ಯಾವ ಚಾನೆಲ್​ನಲ್ಲಿ ವೀಕ್ಷಿಸಬೇಕು?

ಮಿನಿ ಹರಾಜಿನ ನೇರ ಪ್ರಸಾರ ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್‌ನಲ್ಲಿ ಪ್ರಸಾರವಾಗಲಿದೆ.

ಲೈವ್ ಸ್ಟೀಮಿಂಗ್ ವೀಕ್ಷಿಸುವುದು ಹೇಗೆ?

ಜಿಯೋ ಸಿನಿಮಾದಲ್ಲಿ ಲೈವ್ ಆಗಿ ಮಿನಿ ಹರಾಜನ್ನು ವೀಕ್ಷಿಸಬಹುದಾಗಿದೆ.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ತಾಜಾ ಸುದ್ದಿ

TV9 Kannada


Leave a Reply

Your email address will not be published. Required fields are marked *