IPS ರವಿ ಚೆನ್ನಣ್ಣವರ್ ಸಹೋದರ ರಾಘವೇಂದ್ರ ತನ್ನನ್ನು ಮದುವೆಯಾಗಿ, ಮೋಸ ಮಾಡಿದ್ದಾರೆ- ಶಿವಮೊಗ್ಗ ಮಹಿಳೆ ದೂರು | IPS officer Ravi Channannavar brother Raghavendra cheated me says Shivamogga woman who claims Raghavendra married her


IPS ರವಿ ಚೆನ್ನಣ್ಣವರ್ ಸಹೋದರ ರಾಘವೇಂದ್ರ ತನ್ನನ್ನು ಮದುವೆಯಾಗಿ, ಮೋಸ ಮಾಡಿದ್ದಾರೆ-  ಶಿವಮೊಗ್ಗ ಮಹಿಳೆ ದೂರು

IPS ರವಿ ಚೆನ್ನಣ್ಣವರ್ ಸಹೋದರ ರಾಘವೇಂದ್ರ ತನ್ನನ್ನು ಮದುವೆಯಾಗಿ, ಮೋಸ ಮಾಡಿದ್ದಾರೆ- ಶಿವಮೊಗ್ಗ ಮಹಿಳೆ ದೂರು

ಬೆಂಗಳೂರು: ಐಪಿಎಸ್ ಅಧಿಕಾರಿ ರವಿ ಡಿ. ಚೆನ್ನಣ್ಣವರ್ (IPS officer Ravi Channannavar) ಸಹೋದರ ರಾಘವೇಂದ್ರ ಡಿ. ಚೆನ್ನಣ್ಣವರ್ ವಿರುದ್ದ ಶಿವಮೊಗ್ಗ ಮೂಲದ ಮಹಿಳೆಯೊಬ್ಬರು (Shivamogga woman) ಬೆಂಗಳೂರು ಪೊಲೀಸ್​ ಕಮೀಷನರ್ ಅವರಿಗೆ ದೂರು ನೀಡಿದ್ದಾರೆ. ಹಿರಿಯ ಪೊಲೀಸ್​ ಸೂಪರಿಂಟೆಂಡೆಂಟ್ ರವಿ ಡಿ. ಚೆನ್ನಣ್ಣವರ್ ಅವರ ಸಹೋದರ ರಾಘವೇಂದ್ರ ಅವರ ಪತ್ನಿ ಎಂದು ಹೇಳಿಕೊಂಡ ರೋಜಾ ಎಂಬ ಹೆಸರಿನ ಸದರಿ ಮಹಿಳೆ ದೂರು ಸಲ್ಲಿಸಿದ್ದಾರೆ. ರೋಜಾ ಎಂಬುವ ಮಹಿಳೆಯನ್ನ ಮದುವೆಯಾಗಿ ಮತ್ತೊಂದು ಮಹಿಳೆಯ ಜೊತೆ ರಾಘವೇಂದ್ರ ಅಕ್ರಮ ಸಂಬಂಧ ಹೊಂದಿದ್ದಾರೆ ಎಂದು ರೋಜಾ ಆರೋಪ ಮಾಡಿದ್ದಾರೆ (Wedding).

2015 ರಲ್ಲಿ ರಾಘವೇಂದ್ರ ಡಿ ಚೆನ್ನಣ್ಣವರ್ ಜೊತೆ ನನ್ನ ಮದುವೆಯಾಗಿತ್ತು. ಮದುವೆಯಾದ ಒಂದು ವರ್ಷದಲ್ಲೇ ಹೆಂಡತಿಯಾದ ನನ್ನನ್ನ ಬಿಟ್ಟುಬಿಟ್ಟು, ರುಕ್ಮಿಣಿ ಎಂಬುವ ಮಹಿಳೆ ಜೊತೆ ಅಕ್ರಮ ಸಂಬಂಧ ಬೆಳೆಸಿದ್ದಾರೆಂದು ರೋಜಾ ಆರೋಪ ಮಾಡಿದ್ದಾರೆ. ನನ್ನ ತಂದೆ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಮದುವೆ ಮಾಡಿಕೊಟ್ಟಿದ್ದಾರೆ. ಹಲವಾರು ಬಾರಿ ತಂದೆ ಬಳಿ ಹಣ ಪಡೆದಿದ್ದಾರೆ. ಈ ಮಧ್ಯೆ ಕೊಲ್ಲುವ ಬೆದರಿಕೆ ಹಾಕಿದ್ದಾರೆ. ಇದೇ ವೇಳೆ ವಿಷಯವನ್ನು ಐಪಿಎಸ್ ಅಧಿಕಾರಿ ರವಿ ಡಿ. ಚೆನ್ನಣ್ಣವರ್ ಅವರ ಗಮನಕ್ಕೂ ತಂದಿರುವೆ. ಆದರೆ ಅವರೂ ಹೊಸ ಹೆಂಡತಿಯ ಜೊತೆ ಹೊಂದಿಕೊಂಡು ಹೋಗು ಎಂದು ತನಗೆ ಹೇಳಿದ್ದಾಗಿ ರೋಜಾ ಅವರು ಬೆಂಗಳೂರು ನಗರ ಪೊಲೀಸ್ ಆಯುಕ್ತರಿಗೆ ಹಾಗೂ ಚಂದ್ರ ಲೇಔಟ್ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದಾರೆ.

Ravi D Chennanavar ತಮ್ಮನ ಪತ್ನಿಯಿಂದ ಗಂಭೀರ ಆರೋಪ, ಕಮಿಷನರ್​ಗೆ ದೂರು

TV9 Kannada


Leave a Reply

Your email address will not be published. Required fields are marked *