iQoo Neo 6: ಇದಪ್ಪ ಫೋನ್ ಅಂದ್ರೆ: ಸ್ಟೈಲಿಶ್​ಗೆ ತಕ್ಕಂತೆ ಭರ್ಜರಿ ಫೀಚರ್ಸ್​ನ ಐಕ್ಯೂ ನಿಯೋ 6 5G ಬಿಡುಗಡೆ | IQoo Neo 6 iQoo has launched its latest 5G Stylish Smartphone with Snapdragon 8 Gen 1 chipset


iQoo Neo 6: ಇದಪ್ಪ ಫೋನ್ ಅಂದ್ರೆ: ಸ್ಟೈಲಿಶ್​ಗೆ ತಕ್ಕಂತೆ ಭರ್ಜರಿ ಫೀಚರ್ಸ್​ನ ಐಕ್ಯೂ ನಿಯೋ 6 5G ಬಿಡುಗಡೆ

iQoo Neo 6

ಈಗಂತು ಮಾರುಕಟ್ಟೆಗೆ ದಿನಕ್ಕೊಂದರಂತೆ ಹೊಸ ಹೊಸ ಸ್ಮಾರ್ಟ್​​ಫೋನ್​ಗಳು ಲಗ್ಗೆಯಿಡುತ್ತವೆ. ಪ್ರತಿ ಫೋನ್​ನಲ್ಲೂ ತನ್ನದೇ ಆದ ವಿಶೇಷ ಫೀಚರ್​ಗಳು ಒಳಗೊಂಡಿರುತ್ತವೆ. ಇವುಗಳ ನಡುವೆ ವಿಭಿನ್ನವಾಗಿ ನಿಲ್ಲುವುದು ಐಕ್ಯೂ (iQoo) ಕಂಪನಿ. ವಿಶೇಷ ಫೀಚರ್​ಗಳ ಜೊತೆ ಸ್ಟೈಲಿಶ್ ಸ್ಮಾರ್ಟ್​​ಫೋನನ್ನು ಮಾರುಕಟ್ಟೆಗೆ ಪರಿಚಯಿಸುವ ಈ ಬ್ರ್ಯಾಂಡ್ ಇದೀಗ ತನ್ನ ಹೊಸ ಐಕ್ಯೂ ನಿಯೋ 6 5G (iQoo Neo 6) ಸ್ಮಾರ್ಟ್‌ಫೋನ್ ಅನ್ನು ಲಾಂಚ್‌ ಮಾಡಿದೆ. ಅತ್ಯಂತ ಬಲಿಷ್ಠವಾದ ಸ್ನಾಪ್‌ಡ್ರಾಗನ್‌ 8 Gen 1 SoC ಪ್ರೊಸೆಸರ್‌ ಬಲವನ್ನು ಈ ಸ್ಮಾರ್ಟ್‌ಫೋನ್‌ (Smartphone) ಪಡೆದುಕೊಂಡಿದ್ದು, ಟ್ರಿಪಲ್ ರಿಯರ್‌ ಕ್ಯಾಮೆರಾ ಸೆಟಪ್‌, ಮುಖ್ಯ ಕ್ಯಾಮೆರಾ 64 ಮೆಗಾಪಿಕ್ಸೆಲ್ ಸೆನ್ಸಾರ್​ನಿಂದ ಕೂಡಿದೆ. ಸದ್ಯಕ್ಕೆ ಈ ಫೋನ್ ವಿದೇಶದಲ್ಲಿ ಅನಾವರಣಗೊಂಡಿದೆ. ಕೆಲವೇ ತಿಂಗಳಲ್ಲಿ ಐಕ್ಯೂ ನಿಯೋ 6 5G ಭಾರತಕ್ಕೂ ಕಾಲಿಡಲಿದೆ ಎನ್ನಲಾಗಿದೆ.

ಬೆಲೆ ಎಷ್ಟು?:

ಐಕ್ಯೂ ನಿಯೋ 6 5G ಸ್ಮಾರ್ಟ್‌ಫೋನ್‌ ಒಟ್ಟು ಮೂರು ಸ್ಟೋರೆಜ್ ಆಯ್ಕೆಯಲ್ಲಿ ಖರೀದಿಗೆ ಸಿಗಲಿದೆ. ಈ ಪೈಕಿ ಇದರ 8GB RAM ಮತ್ತು 128GB ಸ್ಟೋರೇಜ್ ರೂಪಾಂತರಕ್ಕಾಗಿ CNY 2,799 (ಭಾರತದಲ್ಲಿ ಇದರ ಬೆಲೆ ಅಂದಾಜಿ 33,500 ರೂ. ಎನ್ನಬಹುದು). ಹಾಗೆಯೇ 8GB RAM ಮತ್ತು 256GB ಮಾದರಿಯ ಆಯ್ಕೆಗೆ CNY 2,999 (ಸುಮಾರು 35,900ರೂ) ಬೆಲೆ ಹೊಂದಿದೆ. ಜೊತೆಗೆ ಟಾಪ್-ಎಂಡ್ 12GB RAM ಮತ್ತು 256GB ಆಯ್ಕೆ CNY 3,299 (ಸರಿಸುಮಾರು. 39,400ರೂ) ಬೆಲೆ ನಿಗದಿ ಮಾಡಲಾಗಿದೆ. ಈ ಫೋನ್‌ ನೀಲಿ ಮತ್ತು ಕಿತ್ತಳೆ ಬಣ್ಣಗಳಲ್ಲಿ ಹಿಂಭಾಗದಲ್ಲಿ ಕ್ಲಾಸಿಕ್ ಲೈಸಿ ಲೆದರ್‌ನೊಂದಿಗೆ ಉತ್ತಮ ಸ್ಟೈಲಿಶ್ ಡಿಸೈನ್​ನೊಂದಿಗೆ ಲಗ್ಗೆಯಿಟ್ಟಿದೆ.

ಏನು ವಿಶೇಷತೆ?:

ಐಕ್ಯೂ ನಿಯೋ 6 5G ಸ್ಮಾರ್ಟ್‌ಫೋನ್ 1,080×2,400 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯದ 6.62 ಇಂಚಿನ ಫುಲ್‌ HD+ ಡಿಸ್‌ಪ್ಲೇ ಹೊಂದಿದೆ. ಈ ಡಿಸ್‌ಪ್ಲೇ 20:9 ರಚನೆಯ ಅನುಪಾತವನ್ನು ಒಳಗೊಂಡಿದೆ. ಬಲಿಷ್ಠವಾದ ಆಕ್ಟಾ-ಕೋರ್ ಸ್ನಾಪ್‌ಡ್ರಾಗನ್ 8 Gen 1 SoC ಪ್ರೊಸೆಸರ್‌ ಹೊಂದಿದೆ. ಇದು ಆಂಡ್ರಾಯ್ಡ್ 12 ನಲ್ಲಿ OriginOS ಓಷನ್ ಕಸ್ಟಮ್ ಸ್ಕಿನ್‌ನೊಂದಿಗೆ ಕಾರ್ಯನಿರ್ವಹಿಸುತ್ತದೆ.

ಈ ಸ್ಮಾರ್ಟ್‌ಫೋನ್‌ ಟ್ರಿಪಲ್ ರಿಯರ್‌ ಕ್ಯಾಮೆರಾ ಸೆಟಪ್ ಅನ್ನು ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 64 ಮೆಗಾಪಿಕ್ಸೆಲ್ ಸ್ಯಾಮ್‌ಸಂಗ್‌ ISOCELL ಪ್ಲಸ್‌ GW1P ಸೆನ್ಸಾರ್‌ ಕ್ಯಾಮೆರಾವನ್ನು ಹೊಂದಿದೆ. ಎರಡನೇ ಕ್ಯಾಮೆರಾ 12 ಮೆಗಾಪಿಕ್ಸೆಲ್ ಅಲ್ಟ್ರಾ-ವೈಡ್ ಶೂಟರ್ ಮತ್ತು ಮೂರನೇ ಕ್ಯಾಮೆರಾ 2 ಮೆಗಾಪಿಕ್ಸೆಲ್ ಮೊನೊಕ್ರೋಮ್ ಲೆನ್ಸ್ ಅನ್ನು ಸಹ ಒಳಗೊಂಡಿದೆ. ಇದಲ್ಲದೆ 16 ಮೆಗಾಪಿಕ್ಸೆಲ್ ಸೆನ್ಸಾರ್‌ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಹೊಂದಿದೆ.

ದೀರ್ಘ ಸಮಯ ಬಾಳಿಕೆ ಬರುವ 4,700mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಇದು 80W ಫ್ಲ್ಯಾಶ್ ಚಾರ್ಜ್ ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ. ಕನೆಕ್ಟಿವಿಟಿ ಆಯ್ಕೆಗಳಲ್ಲಿ 5G, 4G LTE, Wi-Fi 6, ಬ್ಲೂಟೂತ್ v5.2, GPS/ A-GPS, NFC, ಮತ್ತು USB ಟೈಪ್-C ಪೋರ್ಟ್ ಬೆಂಬಲಿಸಲಿದೆ. ಇದಲ್ಲದೆ ಅಕ್ಸಿಲೆರೊಮೀಟರ್, ಆಂಬಿಯೆಂಟ್ ಲೈಟ್ ಸೆನ್ಸಾರ್, ಗೈರೊಸ್ಕೋಪ್, ಮ್ಯಾಗ್ನೆಟೋಮೀಟರ್ ಮತ್ತು ಪ್ರಾಕ್ಸಿಮಿಟಿ ಸೆನ್ಸಾರ್‌ ಅನ್ನು ಅಳವಡಿಸಲಾಗಿದೆ.

Realme GT 2 Pro: ಇಂದಿನಿಂದ ರಿಯಲ್‌ ಮಿ GT 2 ಪ್ರೊ ಮಾರಾಟ ಆರಂಭ: ಖರೀದಿಗೆ ಕ್ಯೂ ನಿಲ್ಲೋದು ಗ್ಯಾರಂಟಿ

TV9 Kannada


Leave a Reply

Your email address will not be published. Required fields are marked *