ಭಾರತದಲ್ಲಿ ತನ್ನ ಹೊಸ ಐಕ್ಯೂ ನಿಯೋ 6 5G (iQoo Neo 6) ಸ್ಮಾರ್ಟ್ಫೋನ್ ಅನ್ನು ಲಾಂಚ್ ಮಾಡಲು ಸಿದ್ಧತೆ ನಡೆಸಿದೆ. ಈಗಾಗಲೇ ವಿದೇಶದಲ್ಲಿ ರಿಲೀಸ್ ಆಗಿ ಧೂಳೆಬ್ಬಿಸಿರುವ ಈ ಫೋನ್ ನಾಳೆ ಮೇ 31 ರಂದು ದೇಶದಲ್ಲಿ ಅನಾವರಣಗೊಳ್ಳಲಿದೆ.
ಈಗಂತು ಮಾರುಕಟ್ಟೆಗೆ ದಿನಕ್ಕೊಂದರಂತೆ ಹೊಸ ಹೊಸ ಸ್ಮಾರ್ಟ್ಫೋನ್ಗಳು (Smartphone) ಲಗ್ಗೆಯಿಡುತ್ತವೆ. ಪ್ರತಿ ಫೋನ್ನಲ್ಲೂ ತನ್ನದೇ ಆದ ವಿಶೇಷ ಫೀಚರ್ಗಳು ಒಳಗೊಂಡಿರುತ್ತವೆ. ಇವುಗಳ ನಡುವೆ ವಿಭಿನ್ನವಾಗಿ ನಿಲ್ಲುವುದು ಐಕ್ಯೂ (iQoo) ಕಂಪನಿ. ವಿಶೇಷ ಫೀಚರ್ಗಳ ಜೊತೆ ಸ್ಟೈಲಿಶ್ ಸ್ಮಾರ್ಟ್ಫೋನನ್ನು ಮಾರುಕಟ್ಟೆಗೆ ಪರಿಚಯಿಸುವ ಈ ಬ್ರ್ಯಾಂಡ್ ಇದೀಗ ಭಾರತದಲ್ಲಿ ತನ್ನ ಹೊಸ ಐಕ್ಯೂ ನಿಯೋ 6 5G (iQoo Neo 6) ಸ್ಮಾರ್ಟ್ಫೋನ್ ಅನ್ನು ಲಾಂಚ್ ಮಾಡಲು ಸಿದ್ಧತೆ ನಡೆಸಿದೆ. ಈಗಾಗಲೇ ವಿದೇಶದಲ್ಲಿ ರಿಲೀಸ್ ಆಗಿ ಧೂಳೆಬ್ಬಿಸಿರುವ ಈ ಫೋನ್ ನಾಳೆ ಮೇ 31 ರಂದು ದೇಶದಲ್ಲಿ ಅನಾವರಣಗೊಳ್ಳಲಿದೆ. ಐಕ್ಯೂ ನಿಯೋ 6 ಅತ್ಯಂತ ಬಲಿಷ್ಠವಾದ ಸ್ನಾಪ್ಡ್ರಾಗನ್ 870 SoC ಪ್ರೊಸೆಸರ್ ಬಲವನ್ನು ಪಡೆದುಕೊಂಡಿದ್ದು, ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್, ಮುಖ್ಯ ಕ್ಯಾಮೆರಾ 64 ಮೆಗಾಪಿಕ್ಸೆಲ್ ಸೆನ್ಸಾರ್ನಿಂದ ಕೂಡಿದೆ. ಹಾಗಾದ್ರೆ ಈ ಫೋನಿನ ಬೆಲೆ ಎಷ್ಟಿರಬಹುದು?, ಏನು ವಿಶೇಷತೆ ಎಂಬುದನ್ನ ನೋಡೋಣ.