IRCON Recruitment 2022: ಇಂಡಿಯನ್ ರೈಲ್ವೇ ಕನ್ಸ್ಟ್ರಕ್ಷನ್​ನಲ್ಲಿ ಉದ್ಯೋಗಾವಕಾಶ: ವೇತನ 36 ಸಾವಿರ ರೂ. | IRCON Recruitment 2022 for 16 Finance Assistant, HR Assistant Posts


IRCON Recruitment 2022: ಇಂಡಿಯನ್ ರೈಲ್ವೇ ಕನ್ಸ್ಟ್ರಕ್ಷನ್​ನಲ್ಲಿ ಉದ್ಯೋಗಾವಕಾಶ: ವೇತನ 36 ಸಾವಿರ ರೂ.

IRCON Recruitment 2022

IRCON Recruitment 2022: ಇಂಡಿಯನ್ ರೈಲ್ವೇ ಕನ್ಸ್ಟ್ರಕ್ಷನ್ ಲಿಮಿಟೆಡ್ (IRCON) ವಿಭಾಗದಲ್ಲಿ ಭಾರತ ಸರ್ಕಾರವು ಗುತ್ತಿಗೆ ಆಧಾರದ ಮೇಲೆ ಫೈನಾನ್ಸ್ ಸಹಾಯಕ ಹುದ್ದೆಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ. ಈ ನೇಮಕಾತಿ ಕುರಿತಾದ ಇತರ ಪ್ರಮುಖ ಮಾಹಿತಿಗಳಾದ ಅರ್ಜಿ ಪ್ರಕ್ರಿಯೆ, ಖಾಲಿ ಹುದ್ದೆಗಳ ಸಂಖ್ಯೆ, ವೇತನಗಳು, ಆಯ್ಕೆ ವಿಧಾನ ಇತ್ಯಾದಿಗಳು ಈ ಕೆಳಗಿನಂತಿವೆ.

ವಿವರಗಳು:
ಖಾಲಿ ಹುದ್ದೆಗಳ ಒಟ್ಟು ಸಂಖ್ಯೆ: 16

ಹುದ್ದೆಯ ವಿವರಗಳು:
ಹಣಕಾಸು ಸಹಾಯಕ ಹುದ್ದೆಗಳು: 8
ಮಾನವ ಸಂಪನ್ಮೂಲ ಸಹಾಯಕ ಹುದ್ದೆಗಳು: 5
ಐಟಿ ಇನ್ ಚಾರ್ಜ್ ಹುದ್ದೆಗಳು: 3

ವಯೋಮಿತಿ:
ಅರ್ಜಿ ಸಲ್ಲಿಸಲು ಅಭ್ಯರ್ಥಿಗಳ ವಯಸ್ಸು ಏಪ್ರಿಲ್ 1, 2022 ರಂತೆ 35 ವರ್ಷಗಳನ್ನು ಮೀರಬಾರದು.

ವೇತನ ಶ್ರೇಣಿ:
ಆಯ್ಕೆಯಾದ ಅಭ್ಯರ್ಥಿಗಳಿಗೆ ತಿಂಗಳಿಗೆ ರೂ 36,000 ವರೆಗೆ ವೇತನ ಪಾವತಿಸಲಾಗುತ್ತದೆ.

ವಿದ್ಯಾರ್ಹತೆಗಳು:
ಹುದ್ದೆಗೆ ಅನುಗುಣವಾಗಿ ಸಂಬಂಧಿತ ಸ್ಪೆಷಲೈಸೇಶನ್‌ನಲ್ಲಿ ಬಿಇ/ಬಿಟೆಕ್, ಪಿಜಿ/ಡಿಪ್ಲೊಮಾ, ಸಿಎ/ಸಿಎಂಎ ಇಂಟರ್‌ಮೀಡಿಯೇಟ್‌ನಲ್ಲಿ ತೇರ್ಗಡೆಯಾಗಿರಬೇಕು. ಸಂಬಂಧಿತ ಕೆಲಸದಲ್ಲಿ ಅನುಭವವನ್ನೂ ಹೊಂದಿರಬೇಕು. ತಾಂತ್ರಿಕ ಜ್ಞಾನ ಹೊಂದಿರಬೇಕು ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.

ಆಯ್ಕೆ ವಿಧಾನ:
ಅಭ್ಯರ್ಥಿಗಳನ್ನು ಸಂದರ್ಶನದ ಆಧಾರದ ಮೇಲೆ ಆಯ್ಕೆ ಮಾಡಲಾಗುತ್ತದೆ.

ಅರ್ಜಿ ಸಲ್ಲಿಸುವುದು ಹೇಗೆ:
ಆಸಕ್ತ ಅಭ್ಯರ್ಥಿಗಳು ಆನ್‌ಲೈನ್ / ಆಫ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ.

ಕೊನೆಯ ದಿನಾಂಕ:
ಅರ್ಜಿ ಸಲ್ಲಿಸಲು ಕೊನೆಯ ಮೇ 9, 2022.

ಅರ್ಜಿ ಸಲ್ಲಿಸಬೇಕಾದ ವಿಳಾಸ:
JJM / HRM, IRCON INTERNATIONAL LIMITED, PLOT NO – C-4, DISTRICT CENTRE SAKET, NEW DELHI- 110017

ಈ ನೇಮಕಾತಿ ಕುರಿತಾದ ಮತ್ತಷ್ಟು ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ.

TV9 Kannada


Leave a Reply

Your email address will not be published. Required fields are marked *