ITR filing: ಐಟಿ ರಿಟರ್ನ್ಸ್​ ಸಲ್ಲಿಸಲು ಇಂದು ಕೊನೆಯ ದಿನ; ಕಾರ್ಯನಿರ್ವಹಿಸಲಿವೆ ಆಯಕಾರ್ ಸೇವಾ ಕೇಂದ್ರಗಳು | Income Tax Returns ITR filing Aaykar Seva Kendras to remain open today to facilitate tax payment


ಐಟಿ ರಿಟರ್ನ್ಸ್​ ಸಲ್ಲಿಕೆಗೆ ಕೊನೆಯ ದಿನವಾಗಿರುವ ಜುಲೈ 31ರ ಭಾನುವಾರ ಆದಾಯ ತೆರಿಗೆ ಸಹಾಯ ಕೇಂದ್ರಗಳಿಗೆ ರಜೆ ಇರುವುದಿಲ್ಲ ಎಂದು ಕೇಂದ್ರ ಹಣಕಾಸು ಇಲಾಖೆಯು ಸ್ಪಷ್ಟಪಡಿಸಿದೆ.

ITR filing: ಐಟಿ ರಿಟರ್ನ್ಸ್​ ಸಲ್ಲಿಸಲು ಇಂದು ಕೊನೆಯ ದಿನ; ಕಾರ್ಯನಿರ್ವಹಿಸಲಿವೆ ಆಯಕಾರ್ ಸೇವಾ ಕೇಂದ್ರಗಳು

ಸಾಂದರ್ಭಿಕ ಚಿತ್ರ

ಬೆಂಗಳೂರು: 2021-22ರ ಆರ್ಥಿಕ ಸಾಲಿನ ಆದಾಯ ತೆರಿಗೆ ರಿಟರ್ನ್ಸ್​ (Income Tax Returns) ಸಲ್ಲಿಸಲು ಇಂದು (ಜುಲೈ 31ರ ಭಾನುವಾರ) ಕೊನೆಯ ದಿನವಾಗಿದೆ. ಭಾನುವಾರವಾಗಿದ್ದರೂ ಕೇಂದ್ರ ಸರ್ಕಾರದ ಅಧೀನದಲ್ಲಿರುವ ಆದಾಯ ತೆರಿಗೆ ಇಲಾಖೆಯ ಆಯಕಾರ್ ಸೇವಾ ಕೇಂದ್ರಗಳು (Aaykar Seva Kendras – ASKs) ಅಥವಾ ಆದಾಯ ತೆರಿಗೆ ಸಹಾಯ ಎಂದಿನಂತೆ ಕಾರ್ಯನಿರ್ವಹಿಸಲಿವೆ. ಆದಾಯ ತೆರಿಗೆ ಸಹಾಯ ಕೇಂದ್ರಗಳಿಗೆ ರಜೆ ಇರುವುದಿಲ್ಲ ಎಂದು ಕೇಂದ್ರ ಹಣಕಾಸು ಇಲಾಖೆಯು ಸ್ಪಷ್ಟಪಡಿಸಿದೆ.

‘ದೇಶಾದ್ಯಂತ ಇರುವ ಆದಾಯ ತೆರಿಗೆ ಸೇವಾ ಕೇಂದ್ರಗಳು ಭಾನುವಾರವೂ ಎಂದಿನಂತೆ ಕೆಲಸ ಮಾಡಲಿವೆ. ಆದಾಯ ತೆರಿಗೆ ಪಾವತಿಗೆ ಮುಂದಾಗುವ ನಾಗರಿಕರ ನೆರವಿಗಾಗಿ ಹೆಚ್ಚುವರಿ ಸ್ವೀಕೃತಿ ಕೇಂದ್ರಗಳು ಸಹ ಎಂದಿನಂತೆ ಕಾರ್ಯನಿರ್ವಹಿಸಲಿವೆ ಎಂದು ಕೇಂದ್ರ ಹಣಕಾಸು ಸಚಿವಾಲಯದ ನೇರ ತೆರಿಗೆಗಳ ಮಂಡಳಿ (Central Board of Direct Taxes – CBDT) ಪತ್ರಿಕಾ ಹೇಳಿಕೆಯಲ್ಲಿ ಸ್ಪಷ್ಟಪಡಿಸಿದೆ.

ಜುಲೈ 31ರಂದು ಭಾನುವಾರವಾಗಿರುವ ಕಾರಣ ಬ್ಯಾಂಕ್​ಗಳು ಸಹ ಕಾರ್ಯನಿರ್ವಹಿಸುವುದಿಲ್ಲ. ಐಟಿ ರಿಟರ್ನ್ಸ್​ನ ಕೊನೆಯ ದಿನವಾಗಿರುವ ಕಾರಣ ಆದಾಯ ತೆರಿಗೆ ಇಲಾಖೆಯ ಇ-ಫೈಲಿಂಗ್ ಪೋರ್ಟಲ್​ನ ಟ್ರಾಫಿಕ್ (ಬಳಕೆದಾರರು) ಸಹ ಹೆಚ್ಚಾಗಿರುತ್ತದೆ.

ಈವರೆಗೆ 5 ಕೋಟಿಗೂ ಹೆಚ್ಚು ಮಂದಿ ರಿಟರ್ನ್ಸ್​ ಸಲ್ಲಿಸಿದ್ದಾರೆ. ಈ ಪೈಕಿ ಶನಿವಾರ ಒಂದೇ ದಿನ 44 ಲಕ್ಷ ಮಂದಿ ರಿಟರ್ನ್ಸ್​ ಸಲ್ಲಿಸಿದ್ದಾರೆ ಎಂದು ತೆರಿಗೆ ಇಲಾಖೆಯು ಟ್ವೀಟ್​ನಲ್ಲಿ ತಿಳಿಸಿದೆ.

ತಾಜಾ ಸುದ್ದಿ

TV9 Kannada


Leave a Reply

Your email address will not be published. Required fields are marked *