Janhvi Kapoor: ಹೇಗಿದೆ ನೋಡಿ ನಟಿ ಜಾನ್ವಿ ಕಪೂರ್ ವರ್ಕೌಟ್​; ಇಲ್ಲಿದೆ ವಿಡಿಯೋ | Actress Janhvi Kapoor Workout video goes viral Janhvi Kapoor in hot Mode


ಈ ವಿಡಿಯೋದಲ್ಲಿ ಜಾನ್ವಿ ಭರ್ಜರಿಯಾಗಿ ವರ್ಕೌಟ್ ಮಾಡುತ್ತಿದ್ದಾರೆ. ಇದು ಹಳೆಯ ವಿಡಿಯೋ ಆಗಿದ್ದು, ಈಗ ಪೋಸ್ಟ್​ ಮಾಡಲಾಗಿದೆ. ಇದು ಅತ್ಯಂತ ಕಷ್ಟದ ವರ್ಕೌಟ್ ಎಂದು ಹೇಳಲಾಗಿದೆ.

ಸೆಲೆಬ್ರಿಟಿಗಳು ಫಿಟ್​​ನೆಸ್​ಗೆ ಹೆಚ್ಚು ಆದ್ಯತೆ ನೀಡುತ್ತಾರೆ. ಈ ಕಾರಣಕ್ಕೆ ಜಿಮ್​ನಲ್ಲಿ (Gym) ಹೆಚ್ಚು ಸಮಯ ಕಳೆಯುತ್ತಾರೆ. ಕೆಲವರು ಯೋಗದ ಮೊರೆ ಕೂಡ ಹೋಗುತ್ತಾರೆ. ಒಟ್ಟಿನಲ್ಲಿ ನಿತ್ಯ ಒಂದಷ್ಟು ಸಮಯವನ್ನು ದೇಹ ಹುರಿಗೊಳಿಸಲು ಮೀಸಲಿಡುತ್ತಾರೆ. ನಟಿ ಜಾನ್ವಿ ಕಪೂರ್ ಕೂಡ ಇದಕ್ಕೆ ಹೊರತಾಗಿಲ್ಲ. ಬಾಲಿವುಡ್​ನ ಸ್ಟಾರ್​ ಕುಡಿ ಆಗಿರುವ ಜಾನ್ವಿ (Janhvi Kapoor) ನಿತ್ಯ ಒಂದಷ್ಟು ಸಮಯವನ್ನು ಫಿಟ್​ನೆಸ್ ಕಾಯ್ದುಕೊಳ್ಳಲು ಮೀಸಲಿಟ್ಟಿದ್ದಾರೆ. ಇದರ ಫೋಟೋ ಹಾಗೂ ವಿಡಿಯೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಾರೆ. ಈಗ ಅವರು ಜಿಮ್​ನಲ್ಲಿ ವರ್ಕೌಟ್ ಮಾಡುತ್ತಿರುವ ವಿಡಿಯೋ ಒಂದು ವೈರಲ್ ಆಗಿದೆ.

‘ಧಡಕ್​’ ಸಿನಿಮಾ ಮೂಲಕ ಬಣ್ಣದ ಬದುಕು ಆರಂಭಿಸಿದವರು ಜಾನ್ವಿ. ಇದು ಮರಾಠಿ ಸಿನಿಮಾದ ರಿಮೇಕ್ ಆದರೂ ಹಿಂದಿಯಲ್ಲಿ ಈ ಚಿತ್ರ ಒಳ್ಳೆಯ ಗಳಿಕೆ ಕಂಡಿತು. ಮೊದಲ ಸಿನಿಮಾದಲ್ಲೇ ಗೆಲುವಿನ ರುಚಿ ಕಂಡರು ಜಾನ್ವಿ. ಆ ಬಳಿಕ ಅವರಿಗೆ ಒಳ್ಳೆಯ ಆಫರ್​ಗಳು ಬಂದರೂ ಹೇಳಿಕೊಳ್ಳುವಂತಹ ಗೆಲುವು ಸಿಗಲಿಲ್ಲ. ‘ಗುಂಜನ್​ ಸಕ್ಸೇನಾ: ದಿ ಕಾರ್ಗಿಲ್​ ಗರ್ಲ್​’, ‘ರೂಹಿ’ ಚಿತ್ರಗಳಲ್ಲಿ ಜಾನ್ವಿ ನಟನೆಯನ್ನು ಹೊಗಳಿದವರು ಕಡಿಮೆ. ಸದ್ಯ, ಹಲವು ಸಿನಿಮಾ ಕೆಲಸಗಳಲ್ಲಿ ಜಾನ್ವಿ ಬ್ಯುಸಿ ಇದ್ದಾರೆ. ಈ ಮಧ್ಯೆ ವರ್ಕೌಟ್ ಕೂಡ ಮಾಡುತ್ತಿದ್ದಾರೆ.

ಜಾನ್ವಿ ಕಪೂರ್ ಆ್ಯಂಟಿಗ್ರ್ಯಾವಿಟಿ ಕ್ಲಬ್​ ಜಿಮ್​​ನಲ್ಲಿ ವರ್ಕೌಟ್​ ನಡೆಸುತ್ತಾರೆ. ಈ ಜಿಮ್​ನವರು ಇನ್​​ಸ್ಟಾಗ್ರಾಮ್​ನಲ್ಲಿ ವಿಡಿಯೋ ಒಂದನ್ನು ಶೇರ್ ಮಾಡಿಕೊಂಡಿದ್ದಾರೆ. ಈ ವಿಡಿಯೋದಲ್ಲಿ ಜಾನ್ವಿ ಭರ್ಜರಿಯಾಗಿ ವರ್ಕೌಟ್ ಮಾಡುತ್ತಿದ್ದಾರೆ. ಇದು ಹಳೆಯ ವಿಡಿಯೋ ಆಗಿದ್ದು, ಈಗ ಪೋಸ್ಟ್​ ಮಾಡಲಾಗಿದೆ. ಇದು ಅತ್ಯಂತ ಕಷ್ಟದ ವರ್ಕೌಟ್ ಎಂದು ಹೇಳಲಾಗಿದೆ.

ಜಾನ್ವಿ ಸ್ಟಾರ್ ಕಿಡ್ ಆಗಿರುವುದರಿಂದ ಹಲವು ಆಫರ್​ಗಳು ಅವರನ್ನು ಹುಡುಕಿಕೊಂಡು ಬರುತ್ತಿವೆ. ಆದರೆ, ಎಲ್ಲಾ ಚಿತ್ರಗಳನ್ನು ಅವರು ಒಪ್ಪಿಕೊಳ್ಳುತ್ತಿಲ್ಲ. ‘ಗುಡ್​ ಲಕ್​ ಜೆರ್ರಿ’, ‘ಮಿಲಿ’, ‘ಮಿಸ್ಟರ್​ ಆ್ಯಂಡ್ ಮಿಸಸ್​ ಮಾಹಿ’ ಹಾಗೂ ‘ಬವಾಲ್’ ಸಿನಿಮಾಗಳಲ್ಲಿ ಸದ್ಯ ಅವರು ನಟಿಸುತ್ತಿದ್ದಾರೆ. ಸಿನಿಮಾ ಕೆಲಸಗಳ ಮಧ್ಯೆ ಅವರು ಫ್ರೆಂಡ್ಸ್ ಜತೆ ಸುತ್ತಾಡೋಕೆ ತೆರಳುತ್ತಾರೆ. ಈ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಾರೆ.

TV9 Kannada


Leave a Reply

Your email address will not be published. Required fields are marked *