Jasprit Bumrah: ಜಸ್​ಪ್ರಿತ್ ಬುಮ್ರಾ ಜಾಗಕ್ಕೆ ಮತ್ತೊಬ್ಬ ಸ್ಟಾರ್ ವೇಗಿಯನ್ನು ಆಯ್ಕೆ ಮಾಡಿದ ಬಿಸಿಸಿಐ | Mohammed Siraj as a replacement for injured Jasprit Bumrah for the remainder of the T20I series against South Africa


Mohammed Siraj, IND vs SA: ಬಿಸಿಸಿಐ ಜಸ್​ಪ್ರಿತ್ ಬುಮ್ರಾ ಜಾಗಕ್ಕೆ ಮತ್ತೊಬ್ಬ ವೇಗಿಯನ್ನು ಆಯ್ಕೆ ಮಾಡಿದೆ. ದ. ಆಫ್ರಿಕಾ ವಿರುದ್ಧ ಬಾಕಿ ಇರುವ ಎರಡು ಟಿ20 ಪಂದ್ಯಕ್ಕೆ ಬುಮ್ರಾ ಬದಲು ಮೊಹಮ್ಮದ್ ಸಿರಾಜ್​ಗೆ ಸ್ಥಾನ ನೀಡಲಾಗಿದೆ.

Jasprit Bumrah: ಜಸ್​ಪ್ರಿತ್ ಬುಮ್ರಾ ಜಾಗಕ್ಕೆ ಮತ್ತೊಬ್ಬ ಸ್ಟಾರ್ ವೇಗಿಯನ್ನು ಆಯ್ಕೆ ಮಾಡಿದ ಬಿಸಿಸಿಐ

Jasprit Bumrah and Team India

ಕಾಂಗರೂಗಳ ನಾಡಿನಲ್ಲಿ ಮುಂದಿನ ತಿಂಗಳು ಆರಂಭವಾಗಲಿರುವ ಬಹುನಿರೀಕ್ಷಿತ ಐಸಿಸಿ ಟಿ20 ವಿಶ್ವಕಪ್​ಗೂ (T20 World Cup 2022) ಮುನ್ನ ಟೀಮ್ ಇಂಡಿಯಾಗೆ ದೊಡ್ಡ ಆಘಾತ ಉಂಟಾಗಿದೆ. ತಂಡದ ಪ್ರಮುಖ ವೇಗಿ ಜಸ್​ಪ್ರೀತ್​ ಬುಮ್ರಾ (Jasprit Bumrah) ಸೌತ್ ಆಫ್ರಿಕಾ ವಿರುದ್ಧದ ಟಿ20 ಸರಣಿ ಸೇರಿದಂತೆ ಟಿ20 ವಿಶ್ವಕಪ್​ನಿಂದ ಹೊರಬಿದ್ದಿದ್ದಾರೆ. ಬೆನ್ನು ನೋವಿನ ಕಾರಣ ಬುಮ್ರಾ ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಟಿ20 ಪಂದ್ಯ ಆಡಿರಲಿಲ್ಲ. ಇದೀಗ ಬೆನ್ನು ನೋವಿನ ಸಮಸ್ಯೆ ಹೆಚ್ಚಾಗಿರುವ ಕಾರಣ ಬುಮ್ರಾಗೆ ಶಸ್ತ್ರ ಚಿಕಿತ್ಸೆಯ ಅಗತ್ಯವಿಲ್ಲದಿದ್ದರೂ 4 ರಿಂದ 6 ತಿಂಗಳುಗಳ ಕಾಲ ವಿಶ್ರಾಂತಿ ಬೇಕಾಗಿದೆ ಎಂದು ಬಿಸಿಸಿಐ ವೈದ್ಯಕೀಯ ತಂಡ ಹೇಳಿದೆ. ಇದರ ಬೆನ್ನಲ್ಲೇ ಬಿಸಿಸಿಐ ಬುಮ್ರಾ ಜಾಗಕ್ಕೆ ಮತ್ತೊಬ್ಬ ವೇಗಿಯನ್ನು ಆಯ್ಕೆ ಮಾಡಿದೆ. ದ. ಆಫ್ರಿಕಾ ವಿರುದ್ಧ ಬಾಕಿ ಇರುವ ಎರಡು ಟಿ20 ಪಂದ್ಯಕ್ಕೆ ಬುಮ್ರಾ ಬದಲು ಮೊಹಮ್ಮದ್ ಸಿರಾಜ್​ಗೆ (Mohammed Siraj) ಸ್ಥಾನ ನೀಡಲಾಗಿದೆ.

ಭಾರತ ಕ್ರಿಕೆಟ್ ತಂಡ ಹಿರಿಯ ಆಯ್ಕೆ ಸಮಿತಿಯು ಮೊಹಮ್ಮದ್ ಸಿರಾಜ್ ಅವರನ್ನು ದಕ್ಷಿಣ ಆಫ್ರಿಕಾ ವಿರುದ್ಧದ ಉಳಿದ ಟಿ20 ಸರಣಿಗೆ ಗಾಯಾಳು ಜಸ್ಪ್ರೀತ್ ಬುಮ್ರಾಗೆ ಬದಲಿಯಾಗಿ ನೇಮಿಸಿದೆ ಎಂದು ಬಿಸಿಸಿಐ ತನ್ನ ಹೇಳಿಕಯಲ್ಲಿ ತಿಳಿಸಿದೆ. ಸಿರಾಜ್ ಭಾರತ ಪರ ಐದು ಟಿ ಪಂದ್ಯಗಳನ್ನು ಆಡಿದ್ದಾರೆ, ಕೊನೆಯ T20I ಈ ವರ್ಷದ ಆರಂಭದಲ್ಲಿ ಶ್ರೀಲಂಕಾ ವಿರುದ್ಧ ಆಡಿದ್ದರು. ಉಳಿದ 2 ಪಂದ್ಯಗಳಲ್ಲಿ ಸಿರಾಜ್ ಅವಕಾಶ ಪಡೆದು ಮಿಂಚಿದರೆ ಟಿ20 ವಿಶ್ವಕಪ್​ ಬಳಗದಲ್ಲಿ ಸ್ಥಾನ ಪಡೆಯುವುದು ಖಚಿತ ಎಂದೇ ಹೇಳಬಹುದು.

ಐಸಿಸಿಯ ಬಹುದೊಡ್ಡ ಟೂರ್ನಿ ಆರಂಭಕ್ಕೂ ಮುನ್ನ ಭಾರತದ ಆಟಗಾರರು ಇಂಜುರಿಗೆ ತುತ್ತಾಗುತ್ತಿರುವುದು ಮ್ಯಾನೇಜ್ಮೆಂಟ್​ಗೆ ತಲೆನೋವಾಗಿದೆ. ಈಗಾಗಲೇ ಕಾಲಿಗೆ ಗಾಯ ಮಾಡಿಕೊಂಡು ಶಸ್ತ್ರಚಿಕಿತ್ಸೆಗೆ ಒಳಗಾಗಿರುವ ಆಲ್​ರೌಂಡರ್​ ರವೀಂದ್ರ ಜಡೇಜಾ ವಿಶ್ವಕಪ್​ನಿಂದ ಹೊರಬಿದ್ದಿದ್ದಾರೆ. ಆಸ್ಟ್ರೇಲಿಯಾ ಮತ್ತು ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಯ ಪಂದ್ಯಗಳಲ್ಲಿ ಬೂಮ್ರಾ ಕೂಡ ಕಣಕ್ಕಿಯದಿರುವುದು ಹಲವು ಅನುಮಾನಗಳಿಗೆ ಕಾರಣವಾಗಿತ್ತು. ಗಾಯದಿಂದ ಸಂಪೂರ್ಣವಾಗಿ ಚೇತರಿಸಿಕೊಂಡಿರದ ಕಾರಣ ಅವರು ಸರಣಿಯ ಎಲ್ಲ ಪಂದ್ಯಗಳಲ್ಲಿ ಭಾಗವಹಿಸುತ್ತಿಲ್ಲ ಎಂಬ ವಾದ ಕೇಳಿ ಬಂದಿತ್ತು. ಆದರೆ ಬೆನ್ನು ಮೂಳೆ ಗಾಯಕ್ಕೆ ತುತ್ತಾಗಿದ್ದಾರೆ ಎಂಬ ಸುದ್ದಿ ಅಭಿಮಾನಿಗಳಲ್ಲಿ ಭಾರಿ ನಿರಾಸೆ ಮೂಡಿಸಿದೆ.

ಗುವಾಹಟಿಗೆ ಬಂದಿಳಿದ ಭಾರತ:

TV9 Kannada


Leave a Reply

Your email address will not be published.