ಮೈಸೂರು: ಜೆಡಿಎಸ್‌ನಲ್ಲಿ ಶಾಸಕಿ ಅನಿತಾ ಕುಮಾರಸ್ವಾಮಿ ಫುಲ್ ಆಕ್ಟೀವ್ ಆಗಿದ್ದು, ಅತೃಪ್ತರ ಮನವೊಲಿಸಲು ಖಾಡಕ್ಕೆ ಧುಮುಕಿದ್ದಾರೆ ಅನ್ನೋ ಮಾಹಿತಿ ಲಭ್ಯವಾಗಿದೆ.
ಅದರಂತೆ ಶಾಸಕ ಜಿ.ಟಿ.ದೇವೆಗೌಡ, ಮೇಲುಕೋಟೆ ಶಾಸಕ ಪುಟ್ಟರಾಜು ಮನವೊಲಿಸುವಲ್ಲಿ ಯಶಸ್ವಿಯಾಗಿದ್ದಾರೆ ಅನ್ನೋ ಮಾಹಿತಿ ಸಿಕ್ಕಿದೆ. ಜಿಟಿಡಿ ಕುಟುಂಬದ ಸದಸ್ಯರ ಜೊತೆ ಅನಿತಾ ಕುಮಾರಸ್ವಾಮಿ ತುಂಬಾ ವಿಶ್ವಾಸದಲ್ಲಿದ್ದಾರೆ.
ಯಾವುದೇ ಕಾರಣಕ್ಕೂ ಪಕ್ಷ ತೊರೆಯಬೇಡಿ, ನಿಮ್ಮ ಬೇಡಿಕೆ ಈಡೇರಿಸುತ್ತೇವೆ ಎಂದು ಅನಿತಾ ಭರವಸೆ ನೀಡಿದ್ದಾರಂತೆ. ಜೊತೆಗೆ ಮಂಡ್ಯ ಜಿಲ್ಲಾ ಶಾಸಕರ ಸಭೆಯಲ್ಲೂ ಭಾಗಿಯಾಗಿ ಮಾಜಿ ಸಿಎಂ ಹೆಚ್ಡಿ ಕುಮಾರಸ್ವಾಮಿಯಿಂದ ಅಂತರ ಕಾಯ್ದುಕೊಂಡಿದ್ದ ಪುಟ್ಟರಾಜು ಜೊತೆಗೂ ಮಾತುಕತೆ ನಡೆಸಿದ್ದಾರಂತೆ. ಈ ಮೂಲಕ ಅತೃಪ್ತ ಶಾಸಕರ ಜೊತೆ ನಿರಂತರ ಸಂಪರ್ಕದಲ್ಲಿ ಅನಿತಾ ಕುಮಾರಸ್ವಾಮಿ ಇದ್ದಾರೆ ಎನ್ನಲಾಗಿದೆ. ಇನ್ನು ಅಮ್ಮನಿಗೆ ಪುತ್ರ ನಿಖಿಲ್ ಕುಮಾರಸ್ವಾಮಿ ಕೂಡ ಸಾಥ್ ನೀಡಿದ್ದಾರೆ ಅನ್ನೋ ಮಾಹಿತಿ ಲಭ್ಯವಾಗಿದೆ.