ಜೆಡಿಎಸ್ ಅಭ್ಯರ್ಥಿ ಗೆಲ್ಲಿಸಲು ಕೋಲಾರ ಜನರು ತೀರ್ಮಾನಿಸಿದ್ದಾರೆ. JDS ಅಭ್ಯರ್ಥಿ ಗೆಲ್ತಾರೆ, ಯಾವುದೇ ಸಂಶಯವಿಲ್ಲ ಬರೆದಿಟ್ಟುಕೊಳ್ಳಿ ಎಂದು ಹೆಚ್ಡಿ ಕುಮಾರಸ್ವಾಮಿ ಹೇಳಿದರು.

ಹೆಚ್ಡಿಕೆ
Image Credit source: vijaykarnataka.com
ಬಾಗಲಕೋಟೆ: ವಿಧಾನಸಭಾ ಚುನಾವಣೆಯ (election) ಕಾವು ದಿನದಿಂದ ದಿನಕ್ಕೆ ಕರ್ನಾಟಕದಲ್ಲಿ ಹೆಚ್ಚಾಗುತ್ತಿದೆ. ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಪಕ್ಷಗಳು ತಮ್ಮದೆ ಶೈಲಿಯಲ್ಲಿ ಚುನಾವಣಾ ಕಾರ್ಯದಲ್ಲಿ ತೊಡಗಿಕೊಂಡಿವೆ. ಮಾಜಿ ಸಿಎಂ ಸಿದ್ಧರಾಮಯ್ಯ ಅವರು ಯಾವ ಕ್ಷೇತ್ರದಿಂದ ಚುನಾವಣೆಗೆ ನಿಂತುಕೊಳ್ಳುತ್ತಾರೆ ಎಂಬ ಹಲವು ಗೊಂದಲಗಳಿದ್ದವು. ಅದಕ್ಕೆಲ್ಲ ತೆರೆ ಎಳೆದಿರುವ ಸಿದ್ಧರಾಮಯ್ಯ ನಾನು ಕೋಲಾರ ಕ್ಷೇತ್ರದಿಂದ ಸ್ಪರ್ಧಿಸುವೆ ಎಂದು ಸ್ಪಷ್ಟನೆ ನೀಡಿದ್ದರು. ಸದ್ಯ ಈ ವಿಚಾರವಾಗಿ ಜಿಲ್ಲೆಯ ಬಾದಾಮಿ ತಾಲೂಕಿನ ಗುಳೇದಗುಡ್ಡ ಪಟ್ಟಣದಲ್ಲಿ ಮಾಜಿ ಸಿಎಂ H.D.ಕುಮಾರಸ್ವಾಮಿ ಮಾತನಾಡಿ, ಜೆಡಿಎಸ್ ಅಭ್ಯರ್ಥಿ ಗೆಲ್ಲಿಸಲು ಕೋಲಾರ ಜನರು ತೀರ್ಮಾನಿಸಿದ್ದಾರೆ. JDS ಅಭ್ಯರ್ಥಿ ಗೆಲ್ತಾರೆ, ಯಾವುದೇ ಸಂಶಯವಿಲ್ಲ ಬರೆದಿಟ್ಟುಕೊಳ್ಳಿ. ಕೋಲಾರ ಕ್ಷೇತ್ರದಲ್ಲಿ ಯಾರು ಸ್ಪರ್ಧೆ ಮಾಡ್ತಾರೆ ಅನ್ನೋ ಪ್ರಶ್ನೆ ಇಲ್ಲ. ಕೋಲಾರದಲ್ಲಿ ಜೆಡಿಎಸ್ ವಿಜಯವನ್ನು ಜನ ಈಗಾಗಲೇ ಬರೆದಿದ್ದಾರೆ ಎಂದು ಹೇಳಿದರು.
ಜೆ.ಸಿ.ಮಾಧುಸ್ವಾಮಿ ಬಹುಶಃ ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದಾರೆ
ಮಾಧುಸ್ವಾಮಿ ವಿರುದ್ಧ ಕಿಡಿ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ್ದು, ಜೆ.ಸಿ.ಮಾಧುಸ್ವಾಮಿ ಬಹುಶಃ ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದಾರೆ. ನಾನು ಚಿಕ್ಕನಾಯಕನಹಳ್ಳಿ ಕ್ಷೇತ್ರಕ್ಕೆ ಭೇಟಿ ನೀಡಿ ಒಂದು ತಿಂಗಳಾಗಿದೆ. ಒಂದು ತಿಂಗಳ ಬಳಿಕ ಅವರು ಈ ರೀತಿ ಮಾತಾಡ್ತಿದ್ದಾರೆ. ಅಪ್ಪ, ಮಕ್ಕಳು, ಮೊಮ್ಮಕ್ಕಳು ದೋಚಿದ್ದಾರೆ ಎಂಬ ಪದ ಬಳಸಿದ್ದಾರೆ. ಯಾರು ದೋಚುತ್ತಿದ್ದಾರೆ, ಲೂಟಿ ಮಾಡ್ತಿದ್ದಾರೆಂದು ಜನ ನೋಡ್ತಿದ್ದಾರೆ. ರೈತರು ಹಣ ಕಟ್ಟದಿದ್ದರೆ ನೋಟಿಸ್ ಕೊಟ್ರೆ ತಪ್ಪಿಲ್ಲ ಅಂತಾ ಹೇಳಿದ್ದಾರೆ. ಇವರೆಲ್ಲ ವಿಕೃತ ಮನಸ್ಸಿನವರು, ಅವರ ಸರ್ಟಿಫಿಕೆಟ್ ನನಗೆ ಬೇಕಾಗಿಲ್ಲ ಎಂದು ಕುಮಾರಸ್ವಾಮಿ ವಾಗ್ದಾಳಿ ಮಾಡಿದರು.