Jd(S) ticket dangal in Hassan: HD Kumaraswamy expresses displeasure over Revanna’s move | ಹಾಸನದಲ್ಲಿ ತಾರಕಕ್ಕೇರಿದ ಜೆಡಿಎಸ್ ಟಿಕೆಟ್​ ಫೈಟ್: ರೇವಣ್ಣ ನಡೆಯಿಂದ ಬೇಸರ ವ್ಯಕ್ತಪಡಿಸಿದ ಹೆಚ್​ಡಿ ಕುಮಾರಸ್ವಾಮಿ


ಪತ್ನಿ ಭವಾನಿಗೆ ಹಾಸನ ಟಿಕೆಟ್ ಕೈತಪ್ಪಿದ್ದಕ್ಕೆ ಸ್ವರೂಪ್​ಗೂ ಟಿಕೆಟ್ ನೀಡದಂತೆ ಪಟ್ಟು ಹಿಡಿದಿದ್ದಾರಂತೆ. ಈ ಹಿನ್ನೆಲೆ ಚುನಾವಣೆ ಸಮೀಪದಲ್ಲಿ ರೇವಣ್ಣ ನಡೆಯಿಂದ ಹೆಚ್.​ಡಿ. ದೇವೆಗೌಡ ಬಳಿ ಹೆಚ್​. ಡಿ ಕುಮಾರಸ್ವಾಮಿ ಬೇಸರ ವ್ಯಕ್ತಪಡಿಸಿಕೊಂಡಿದ್ದಾರೆ.

ಹಾಸನದಲ್ಲಿ ತಾರಕಕ್ಕೇರಿದ ಜೆಡಿಎಸ್ ಟಿಕೆಟ್​ ಫೈಟ್: ರೇವಣ್ಣ ನಡೆಯಿಂದ ಬೇಸರ ವ್ಯಕ್ತಪಡಿಸಿದ ಹೆಚ್​ಡಿ ಕುಮಾರಸ್ವಾಮಿ

ಹೆಚ್‌.ಡಿ‌.ರೇವಣ್ಣ, ಹೆಚ್​.ಡಿ ಕುಮಾರಸ್ವಾಮಿ

ಬೆಂಗಳೂರು: ಹಾಸನದಲ್ಲಿ ಜೆಡಿಎಸ್ ಟಿಕೆಟ್ ಫೈಟ್ (Hassan JDS Ticket Fight) ತಾರಕಕ್ಕೇರಿದೆ. ಹಾಸನ ಕ್ಷೇತ್ರದ ‌ಟಿಕೆಟ್​​ಗೆ ದಳಮನೆಯಲ್ಲಿ ಮಹಾಯುದ್ಧವೇ ಶುರುವಾದಂತಾಗಿದೆ. ಕಾರ್ಯಕರ್ತನಿಗೆ ಟಿಕೆಟ್ ಎಂದು ಪಟ್ಟು ಹಿಡಿದಿರುವ ಮಾಜಿ ಸಿಎಂ ಹೆಚ್.​ಡಿ. ಕುಮಾರಸ್ವಾಮಿಗೆ ಟಕ್ಕರ್ ಕೊಡಲು ಮಾಜಿ ಸಚಿವ ರೇವಣ್ಣ ಸಜ್ಜಾಗಿದ್ದಾರೆ. ಪತ್ನಿ ಭವಾನಿಗೆ ಹಾಸನ ಟಿಕೆಟ್ ಕೈತಪ್ಪಿದ್ದಕ್ಕೆ ಸ್ವರೂಪ್​ಗೂ ಟಿಕೆಟ್ ನೀಡದಂತೆ ಪಟ್ಟು ಹಿಡಿದಿದ್ದಾರಂತೆ. ಈ ಹಿನ್ನೆಲೆ ಚುನಾವಣೆ ಸಮೀಪದಲ್ಲಿ ರೇವಣ್ಣ ನಡೆಯಿಂದ ಹೆಚ್.​ಡಿ. ದೇವೆಗೌಡ ಬಳಿ ಹೆಚ್​. ಡಿ ಕುಮಾರಸ್ವಾಮಿ ಬೇಸರ ವ್ಯಕ್ತಪಡಿಸಿಕೊಂಡಿದ್ದಾರೆ. ಹಾಸನ ಟಿಕೆಟ್ ವಿಚಾರ ಚರ್ಚೆಗಾಗಿ ಹೆಚ್.​ಡಿ. ದೇವೆಗೌಡರನ್ನು ಭೇಟಿ ಮಾಡಿದ ಹೆಚ್.​ಡಿ. ಕುಮಾರಸ್ವಾಮಿ ರಾಜೇಗೌಡರ ಹೆಸರು ಈ ಸಮಯದಲ್ಲಿ ಯಾಕೆ ತರುತ್ತಿದ್ದಾರೆ. ನಮ್ಮ ಪಕ್ಷದೊಳಗೆ ಎರಡು ಎರಡು ಬಣಗಳಾದರೆ ಕಾರ್ಯಕರ್ತರಲ್ಲಿ ಗೊಂದಲ ಉಂಟಾಗುತ್ತದೆ. ರೇವಣ್ಣ ಕರೆದು ಮನವರಿಕೆ ಮಾಡುವಂತೆ ಹೆಚ್​​ಡಿಡಿ ಬಳಿ ಮನವಿ ಮಾಡಿಕೊಂಡಿದ್ದಾರೆ. ರಾಜ್ಯದ್ಯಂತ ಪಕ್ಷ ಅಧಿಕಾರಕ್ಕೆ ತರಲು ಹೋರಾಟ ಮಾಡುತ್ತೀದ್ದೇವೆ. ಒಂದು ಟಿಕೆಟ್​​ಗೋಸ್ಕರ ಈ ರೀತಿ ಪಟ್ಟು ಹಿಡಿದರೆ ಪಲಿತಾಂಶದ ಮೇಲೆ ಹೊಡೆತ ಬೀಳುತ್ತೆ ಎಂದು ಹೇಳಿದ್ದಾರೆ.

ಕೆ.ಎಂ.ರಾಜೇಗೌಡ ಓಪನ್ ಆಫರ್ ನೀಡಿದ ರೇವಣ್ಣ  

ಭವಾನಿ ರೇವಣ್ಣ ಅಭ್ಯರ್ಥಿ ಆಗಲಿ ಎನ್ನುವ ಅಭಿಪ್ರಾಯ ಹೊಂದಿದ್ದ ಎಲ್ಲರೂ ಈಗ ರಾಜೇಗೌಡರ ಮನೆಗೆ ಶಿಫ್ಟ್ ಆಗಿದ್ದಾರೆ. ಸದ್ಯ ಕೆಎಂ ರಾಜೇಗೌಡ ನಿವಾಸ ರಾಜಕೀಯ ಚಟುವಟಿಕೆಯ ಕೇಂದ್ರವಾಗಿದೆ. ಜೆಡಿಎಸ್​ನ ಹಿರಿಯ ನಾಯಕ, ಹಾಸನ ನಗರಾಭಿವೃದ್ಧಿ ಪ್ರಾದಿಕಾರದ ಮಾಜಿ ಅಧ್ಯಕ್ಷ ಕೆ.ಎಂ.ರಾಜೇಗೌಡ ಅವರನ್ನು ಕಣಕ್ಕಿಳಿಸಲು ಜೆಡಿಎಸ್ ಮುಖಂಡರು ಮುಂದಾಗಿದ್ದಾರೆ ಎನ್ನಲಾಗುತ್ತಿದೆ. ಇನ್ನು ನಿನ್ನೆ ರಾಜೇಗೌಡರ ಮನೆಯಲ್ಲಿ ನಡೆದ ಬೆಂಬಲಿಗರ ಸಭೆಯಲ್ಲಿ ರಾಜೇಗೌಡರ ಪರ ರೇವಣ್ಣ ಬ್ಯಾಟ್ ಬೀಸಿದರು. ಆ ಮೂಲಕ ಬಹಿರಂಗವಾಗಿಯೇ ಕೆ.ಎಂ‌.ರಾಜೇಗೌಡರಿ ಬೆಂಬಲವಾಗಿ ನಿಂತತಿದೆ.

TV9 Kannada


Leave a Reply

Your email address will not be published. Required fields are marked *