Jet Airways Jobs: ಜೆಟ್​ ಏರ್​ವೇಸ್ ಆಕಾಶ ಮಾರ್ಗದಲ್ಲಿ ಉದ್ಯೋಗಾವಕಾಶ ಸುರಿಮಳೆ, ಅಕ್ರಮಗಳಿಗೆ ಅವಕಾಶವಿಲ್ಲ! | Jet Air ways Is Hiring says Jet Airways official twitter handle you can also apply


Jet Airways Jobs: ಜೆಟ್​ ಏರ್​ವೇಸ್ ಆಕಾಶ ಮಾರ್ಗದಲ್ಲಿ ಉದ್ಯೋಗಾವಕಾಶ ಸುರಿಮಳೆ, ಅಕ್ರಮಗಳಿಗೆ ಅವಕಾಶವಿಲ್ಲ!

ಜೆಟ್​ ಏರ್​ವೇಸ್ ಆಕಾಶ ಮಾರ್ಗದಲ್ಲಿ ಉದ್ಯೋಗಾವಕಾಶಗಳ ಸುರಿಮಳೆ, ಅಕ್ರಮಗಳಿಗೆ ಅವಕಾಶವಿಲ್ಲ!

ಜೆಟ್​ ಏರ್​ವೇಸ್​ ವಿಮಾನ ಯಾನ ಸಂಸ್ಥೆಯು ಮತ್ತೆ ಹಾರಾಟಕ್ಕೆ ಸಿದ್ಧತೆ ನಡೆಸಿದೆ. 2019ರಲ್ಲಿ ಕಾರ್ಯಾಚರಣೆ ನಿಲ್ಲಿಸಿದ ಮೇಲೆ ಮತ್ತೆ ಆರಂಭ ಮಾಡಲಾಗುತ್ತಿದೆ. 2019ರಲ್ಲಿ ಕಾರ್ಯಾಚರಣೆ ನಿಲ್ಲಿಸಿದ್ದ ಜೆಟ್​ ಏರ್​ವೇಸ್ (Jet Airways) ವಿಮಾನ ಯಾನ ಸಂಸ್ಥೆ ಮತ್ತೆ ಹಾರಾಟ ನಡೆಸುವತ್ತ ಮುಂದಡಿ ಇಟ್ಟಿದೆ. ಜೆಟ್​ ಏರ್​ವೇಸ್ ಬಾನಂಗಳದಲ್ಲಿ ಉದ್ಯೋಗಾವಕಾಶಗಳ ಸುರಿಮಳೆಗೆರೆಯಲು ಸಜ್ಜಾಗಿದೆ. ಈಗಾಗಲೇ ಮೇಲ್ಮಟ್ಟದ ಕೆಲ ನೇಮಕಾತಿಗಳು ನಡೆದಿವೆ.

ಶೀಘ್ರದಲ್ಲೇ ವಾಯು ಯಾನ ಕಾರ್ಯಾಚರಣೆ ಪರವಾನಗಿ ಪಡೆಯುವ ನಿಟ್ಟಿನಲ್ಲಿ ಪ್ರಯತ್ನ ಆರಂಭಿಸಲಾಗಿದೆ. ಏರ್​ಲೈನ್​ ಸಿಇಒ ಸಂಜೀವ್​ ಕಪೂರ್ ಅವರು ಹೈಬ್ರಿಡ್ ಮಾಡೆಲ್ ಬಗ್ಗೆ ಮಾತನಾಡಿದ್ದು, ವಿಮಾನ ಯಾನ ವಲಯ ನಿಧಾನಗತಿ ಆಗಿತ್ತು. ಸದ್ಯದ ಸನ್ನಿವೇಶದಲ್ಲಿ ಭಾರತೀಯ ವಿಮಾನ ಯಾನ ವಲಯವು ಕಡಿಮೆ ಪ್ರಯಾಣ ವೆಚ್ಚದ ಸಂಸ್ಥೆಗಳು ಪಾರಮ್ಯ ಸಾಧಿಸಿವೆ. 2019ನೇ ಇಸವಿಯಲ್ಲಿ, ಯಾವಾಗ ಜೆಟ್​ ಏರ್​ವೇಸ್ ತನ್ನ ಕಾರ್ಯಾಚರಣೆಯನ್ನು ನಿಲ್ಲಿಸಿತೋ ಆಗ ಶೇ 87ರಷ್ಟು ಸಂಪೂರ್ಣ ದೇಶೀಯ ವಾಯು ಸಂಚಾರವನ್ನು ಕಡಿಮೆ ದರದ ಸಂಸ್ಥೆಗಳು ನೋಡಿಕೊಳ್ಳುತ್ತಿದ್ದವು. ಹೈಬ್ರಿಡ್ ಮಾಡೆಲ್ ಹೆಚ್ಚಾಗಿ ಕಂಡುಬರುತ್ತದೆ. ಇದರಲ್ಲಿ ಪ್ರಯಾಣ ವೆಚ್ಚ ಕಡಿಮೆ. ಆದರೆ ಪ್ರಯಾಣಿಕರು ಆಹಾರ ಮತ್ತಿತರ ವಸ್ತುಗಳನ್ನು ಖರೀದಿ ಮಾಡಬೇಕಾಗುತ್ತದೆ.

#JetAirwaysIsHiring
ಇಂದು ಮಂಗಳವಾರ ಸಂಜೆ ತನ್ನ ನೂತನ ನೇಮಕಾತಿ ಪ್ರಕ್ರಿಯೆ ಬಗ್ಗೆ ಟ್ವೀಟ್​ ಮಾಡಿ, ಮಾಹಿತಿ ನೀಡಿರುವ ಜೆಟ್​ ಏರ್​ವೇಸ್​ ವಿಮಾನ ಯಾನ ಸಂಸ್ಥೆಯು ಇನ್ನು ಮುಂದೆ ಸಂಸ್ಥೆಯ ವತಿಯಿಂದ ಆಯಕಟ್ಟಿನ ಸ್ಥಾನಗಳಿಗೆ ನೇಮಕಾತಿಗಳು ನಿರಂತರವಾಗಿ ನಡೆಯಲಿದ್ದು, ತನ್ನ ಅಧಿಕೃತ ಟ್ವಿಟ್ಟರ್​ ಖಾತೆಯನ್ನು ನೋಡುವಂತೆ ಕೋರಿದೆ. ಜೊತೆಗೆ ಯಾವುದೇ ಉದ್ಯೋಗ ನೇಮಕಾತಿಗೆ ಆಮಿಷಗಳು ಇಲ್ಲದೆ, ಅರ್ಹ ಅಭ್ಯರ್ಥಿಗಳನ್ನು ಮಾತ್ರವೇ ನೇಮಕ ಮಾಡಿಕೊಳ್ಳುವುದಾಗಿ ಸಂಸ್ಥೆ ತಿಳಿಸಿದೆ. ಹಾಗಾಗಿ ಯಾವುದೇ ನೇಮಕಾತಿ ಅಕ್ರಮಗಳಿಗೆ ಅಭ್ಯರ್ಥಿಗಳು ತುತ್ತಾಗಬಾರದು ಎಚ್ಚರಿಸಿದೆ. [email protected] ಈ ವಿಳಾಸಕ್ಕೆ ಮಾತ್ರವೇ ಸೂಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು ಎಂದು ಸಂಸ್ಥೆ ಸೂಚಿಸಿದೆ.

ಜೆಟ್​ ಏರ್​ವೇಸ್​ ವಿಮಾನ ಯಾನ ಸಂಸ್ಥೆಯ ಟ್ವೀಟ್​ ಸಾರಾಂಶ ಹೀಗಿದೆ:
Are you looking to join us inroles? If yes, please read below. #JetAirwaysIsHiring
Excited by Product Development? Experienced in doing this for airlines? Energized by the thought of being part of Jet Airways re-launch team? If your answer is Yes! for all of the above, please send your CV to [email protected] Read below for more info. #JetAirwaysIsHiring

TV9 Kannada


Leave a Reply

Your email address will not be published. Required fields are marked *