Jimmy Neesham: ಪಂದ್ಯ ಗೆದ್ದರೂ, ಎಲ್ಲರೂ ಹೋದರೂ ಕದಲದ ಜಿಮ್ಮಿ ನೀಶಮ್ | New Zealand’s Jimmy Neesham on not celebrating semifinal win


Jimmy Neesham: ಪಂದ್ಯ ಗೆದ್ದರೂ, ಎಲ್ಲರೂ ಹೋದರೂ ಕದಲದ ಜಿಮ್ಮಿ ನೀಶಮ್

Jimmy Neesham

ಟಿ20 ವಿಶ್ವಕಪ್​ನ (T20 World Cup 2021) ಮೊದಲ ಸೆಮಿಫೈನಲ್​ನಲ್ಲಿ ಇಂಗ್ಲೆಂಡ್ ವಿರುದ್ದ ನ್ಯೂಜಿಲೆಂಡ್ 5 ವಿಕೆಟ್​ಗಳಿಂದ ಭರ್ಜರಿ ಜಯ ಸಾಧಿಸಿತು. ಈ ಗೆಲುವಿನೊಂದಿಗೆ ನ್ಯೂಜಿಲೆಂಡ್ 2019ರ ವಿಶ್ವಕಪ್‌ನಲ್ಲಿ ಇಂಗ್ಲೆಂಡ್ ವಿರುದ್ಧದ ಸೋಲಿನ ಸೇಡನ್ನು ತೀರಿಸಿಕೊಂಡಿತು. ಈ ಭರ್ಜರಿ ಗೆಲುವಿನಲ್ಲಿ ಆರಂಭಿಕ ಆಟಗಾರ ಡೆರಿಲ್ ಮಿಚೆಲ್ ಹಾಗೂ ಆಲ್​ರೌಂಡರ್​ ಜಿಮ್ಮಿ ನೀಶಮ್ (Jimmy Neesham) ಪ್ರಮುಖ ಪಾತ್ರ ವಹಿಸಿದ್ದರು. ಮಧ್ಯಮ ಕ್ರಮಾಂಕದಲ್ಲಿ ಕಣಕ್ಕಿಳಿದಿದ್ದ ನೀಶಮ್ ಕೇವಲ 11 ಎಸೆತಗಳಲ್ಲಿ 27 ರನ್​ ಬಾರಿಸುವ ಮೂಲಕ ಇಡೀ ಪಂದ್ಯದ ಚಿತ್ರಣ ಬದಲಿಸಿದ್ದರು. ಅಂತಿಮವಾಗಿ ನ್ಯೂಜಿಲೆಂಡ್ 19 ಓವರ್​ನಲ್ಲಿ ಗುರಿಮುಟ್ಟಿತು.

ಈ ಭರ್ಜರಿ ಗೆಲುವಿನಲ್ಲಿ ನ್ಯೂಜಿಲೆಂಡ್ ಆಟಗಾರರು ಸಖತ್ ಸಂಭ್ರಮದಲ್ಲಿದ್ದರೆ, ಅತ್ತ ಗೆಲುವಿನ ರೂವಾರಿ ಎನಿಸಿಕೊಂಡಿರುವ ಜಿಮ್ಮಿ ನೀಶಮ್ ಮಾತ್ರ ಸುಮ್ಮನೆ ಕೂತಿದ್ದರು. ಗೆಲುವಿಗೂ ತನಗೂ ಯಾವುದೇ ಸಂಬಧವೇ ಇಲ್ಲ ಎಂಬಂತಿದ್ದ ನೀಶಮ್ ವಿಡಿಯೋ ಇದೀಗ ವೈರಲ್ ಆಗಿದೆ. ಇನ್ನು ಪಂದ್ಯ ಮುಗಿದ ಬಳಿಕ ಕೂಡ ನೀಶಮ್ ಮಾತ್ರ ಕದಲಲಿಲ್ಲ ಎಂಬುದೇ ವಿಶೇಷ.

ಫಾಕ್ಸ್ ಸ್ಪೋರ್ಟ್ಸ್ ವರದಿ ಪ್ರಕಾರ, ಪಂದ್ಯ ಮುಗಿದ ನಂತರ, ಇಡೀ ತಂಡವು ಡ್ರೆಸ್ಸಿಂಗ್ ರೂಮ್​ಗೆ ತೆರಳಿ ಸಂಭ್ರಮಿಸಿತು. ಆದರೆ ನೀಶಮ್ ಡಗೌಟ್‌ನಲ್ಲಿ ತನ್ನ ಕುರ್ಚಿಯಲ್ಲಿ ಬಹಳ ಹೊತ್ತು ಕುಳಿತಿದ್ದ. ಇದಕ್ಕೆ ಸಂಬಂಧಿಸಿದ ಚಿತ್ರವೂ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇದರಲ್ಲಿ ನೀಶಮ್ ಒಬ್ಬನೇ ಕುರ್ಚಿಯ ಮೇಲೆ ಕುಳಿತಿರುವುದು ಕಾಣಿಸುತ್ತದೆ. ನೀಶಮ್ ಅವರ ಸುತ್ತ ಮುತ್ತ ತಂಡದ ಯಾವುದೇ ಆಟಗಾರ ಅಥವಾ ಸಹಾಯಕ ಸಿಬ್ಬಂದಿ ಇರಲಿಲ್ಲ. ಇದೀಗ ಜಿಮ್ಮಿ ನೀಶಮ್ ಅವರ ಫೋಟೋ ವೈರಲ್ ಆಗಿದ್ದು, ನ್ಯೂಜಿಲೆಂಡ್ ಆಟಗಾರನ ನಡೆಗೆ ಹಲವರು ಅಚ್ಚರಿ ವ್ಯಕ್ತಪಡಿಸಿದ್ದಾರೆ.

ನೀಶಮ್ ಗೇಮ್ ಚೇಂಜರ್:
ನ್ಯೂಜಿಲೆಂಡ್​ಗೆ ಗೆಲ್ಲಲು ಕೊನೆಯ 24 ಎಸೆತಗಳಲ್ಲಿ 57 ರನ್​ಗಳ ಅವಶ್ಯಕತೆಯಿತ್ತು. ಈ ವೇಳೆ ಕ್ರೀಸ್​ಗೆ ಆಗಮಿಸಿದ ಜಿಮ್ಮಿ 17ನೇ ಓವರ್​ನಲ್ಲಿ 2 ಸಿಕ್ಸರ್ ಹಾಗೂ ಒಂದು ಬೌಂಡರಿ ಬಾರಿಸಿ ಒಟ್ಟು 23 ರನ್ ಚಚ್ಚಿದ್ದರು. 11 ಎಸೆತಗಳಲ್ಲಿ 27 ರನ್ ಬಾರಿಸುವ ಮೂಲಕ ಇಂಗ್ಲೆಂಡ್ ಹಿಡಿತದಲ್ಲಿದ್ದ ಪಂದ್ಯವನ್ನು ನ್ಯೂಜಿಲೆಂಡ್​ ತೆಕ್ಕೆಗೆ ತಂದರು. 19ನೇ ಓವರ್​ನಲ್ಲಿ ಡೆರಿಲ್ ಮಿಚೆಲ್ 20 ರನ್​ ಬಾರಿಸುವ ಮೂಲಕ ಇದೀಗ 6 ವಿಕೆಟ್​​ಗಳ ಭರ್ಜರಿ ಜಯ ಸಾಧಿಸಿತು.

ಇದನ್ನೂ ಓದಿ: Team India: ಟೀಮ್ ಇಂಡಿಯಾದ ಈ ಜೋಡಿ ವಿಶ್ವಕಪ್ ಗೆದ್ದು ಕೊಡಲಿದೆ ಎಂದ ಮಾಜಿ ಕ್ರಿಕೆಟಿಗ

ಇದನ್ನೂ ಓದಿ: Team India: ಟೀಮ್ ಇಂಡಿಯಾದ ಮುಂದಿನ ಸರಣಿಗಳ ವೇಳಾಪಟ್ಟಿ ಹೀಗಿದೆ

ಇದನ್ನೂ ಓದಿ:   IPL 2022: ಯುವ ನಾಯಕನ ಮೇಲೆ ಕಣ್ಣಿಟ್ಟಿರುವ CSK

(New Zealand’s Jimmy Neesham on not celebrating semifinal win)

TV9 Kannada


Leave a Reply

Your email address will not be published. Required fields are marked *