Jio Phone 5G: ರೋಚಕತೆ ಸೃಷ್ಟಿಸಿದ ಜಿಯೋ ಫೋನ್ 5G: ಸೋರಿಕೆಯಾಗಿದೆ ಫೀಚರ್ಸ್, ಬೆಲೆ ಎಷ್ಟು? | Jio Phone 5G specifications have surfaced once again check specs and price


Jio Phone 5G Price: ಭಾರತದಲ್ಲಿ ಒಂದರ ಹಿಂದೆ ಒಂದಂರಂತೆ ಅತಿ ಕಡಿಮೆ ಬೆಲೆಗೆ 5ಜಿ ಫೋನ್​ಗಳು ಬಿಡುಗಡೆ ಆಗುತ್ತಿದೆ. ಈ ಪೈಕಿ ಜಿಯೋ ಕೂಡ ನೂತನ 5G (Jio Phone 5G) ಸ್ಮಾರ್ಟ್‌ಫೋನ್‌ ರಿಲೀಸ್ ಮಾಡಲು ಸಿದ್ಧತೆ ನಡೆಸುತ್ತಿದೆ.

ಭಾರತದಲ್ಲಿ 5ಜಿ ಲಾಂಚ್​ಗೆ ಕ್ಷಣಗಣನೆ ಶುರುವಾಗಿದೆ. ಅಕ್ಟೋಬರ್ 1 ರಂದು ನಡೆಯಲಿರುವ ಇಂಡಿಯಾ ಮೊಬೈಲ್ ಕಾಂಗ್ರೆಸ್‌ (Mobile Congress) ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಭಾರತದಲ್ಲಿ 5G ಸೇವೆಗಳನ್ನು ಪ್ರಾರಂಭಿಸಲಿದ್ದಾರೆ. ಪ್ರಸಿದ್ಧ ಟೆಲಿಕಾಂ ಸಂಸ್ಥೆಗಳಾದ ಜಿಯೋ, ಏರ್ಟೆಲ್ ಹಾಗೂ ವೋಡಾಫೋನ್ ಐಡಿಯಾ ಮುಂದಿನ ತಿಂಗಳು 5G ಆರಂಭಿಸುವ ನಿರೀಕ್ಷಿಯಿದೆ. ಇದರ ನಡುವೆ ಭಾರತದಲ್ಲಿ ಒಂದರ ಹಿಂದೆ ಒಂದಂರಂತೆ ಅತಿ ಕಡಿಮೆ ಬೆಲೆಗೆ 5ಜಿ ಫೋನ್​ಗಳು ಬಿಡುಗಡೆ ಆಗುತ್ತಿದೆ. ಈ ಪೈಕಿ ಜಿಯೋ ಕೂಡ ನೂತನ 5G (Jio Phone 5G) ಸ್ಮಾರ್ಟ್‌ಫೋನ್‌ ರಿಲೀಸ್ ಮಾಡಲು ಸಿದ್ಧತೆ ನಡೆಸುತ್ತಿದೆ. ಹೀಗಿರುವಾಗ ಈ ಫೋನಿನ ಬೆಲೆ ಸೇರಿದಂತೆ ಕೆಲ ಫೀಚರ್​ಗಳು ಆನ್​ಲೈನ್​ನಲ್ಲಿ ಸೋರಿಕೆಯಾಗಿದೆ. ಇದೀಗ ಜಿಯೋ ಲಾಂಚ್ ಮಾಡಲಿರುವ ಹೊಸ 5G ಸ್ಮಾರ್ಟ್‌ಫೋನ್‌ ಗ್ರಾಹಕರಲ್ಲಿ ಸಾಕಷ್ಟು ರೋಚಕತೆ ಸೃಷ್ಟಿಸಿದೆ.

ಗ್ಯಾಜೆಟ್ಸ್ ವೆಬ್​ಸೈಟ್ 91 ಮೊಬೈಲ್ಸ್ ಮಾಡಿರುವ ವರದಿಯ ಪ್ರಕಾರ ನೂತನ ಜಿಯೋ ಫೋನ್ 5G ಬೆಲೆ ಕೇವಲ 12,000 ರೂ. ಕ್ಕಿಂತ ಕಡಿಮೆ ಇರಲಿದೆ ಎಂದು ಹೇಳಲಾಗಿದೆ. ಜೊತೆಗೆ ಈ ಫೋನ್ ‘ಗಂಗಾ’ ಎಂಬ ಕೋಡ್‌ ನೇಮ್‌ ಹೊಂದಿದ್ದು, ‘LS1654QB5’ ಮಾದರಿ ಸಂಖ್ಯೆಯೊಂದಿಗೆ ಲಾಂಚ್ ಆಗಲಿದೆ ಎಂಬ ಮಾತಿದೆ.

ಜಿಯೋ ಫೋನ್ 5G ಸ್ಮಾರ್ಟ್‌ಫೋನ್‌ 6.5 ಇಂಚಿನ ಹೆಚ್‌ಡಿ+ LCD ಸ್ಕ್ರೀನ್ ಜೊತೆಗೆ 90Hz ಸ್ಕ್ರೀನ್ ರೀಫ್ರೇಶ್ ರೇಟ್‌ ಅನ್ನು ಹೊಂದಿರಲಿದೆ. ಹಾಗೆಯೇ ಈ ಫೋನ್ ಸ್ನಾಪ್‌ಡ್ರಾಗನ್ 480 ಪ್ರೊಸೆಸರ್‌ ಸಾಮರ್ಥ್ಯದಲ್ಲಿ ಕಾರ್ಯನಿರ್ವಹಿಸಲಿದ್ದು, ಈ ಪ್ರೊಸೆಸರ್‌ ಎಂಟ್ರಿ ಲೆವೆಲ್ 5G SoC ಆಗಿದೆ.

ಇನ್ನು ಈ ಸ್ಮಾರ್ಟ್‌ಫೋನ್‌ 4GB RAM ಮತ್ತು 32GB ಇಂಟರ್‌ ಸ್ಟೋರೇಜ್‌ ಹೊಂದಿರಲಿದೆ ಎನ್ನಲಾಗಿದೆ. ಅಲ್ಲದೆ ಮೆಮೊರಿ ಕಾರ್ಡ್‌ ಮೂಲಕ 512GB ಯ ವರೆಗೆ ಸಂಗ್ರಹ ಸಾಮರ್ಥ್ಯವನ್ನು ವಿಸ್ತರಿಸುವುದಕ್ಕೆ ಅವಕಾಶ ನೀಡಲಿದೆ ಎಂದು ಹೇಳಲಾಗಿದೆ. ಜಿಯೋ ಫೋನ್ 5G ಫೋನ್‌ ಡ್ಯುಯಲ್ ರಿಯರ್‌ ಕ್ಯಾಮೆರಾ ಸೆಟಪ್ ಅನ್ನು ಹೊಂದಿರಲಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 13 ಮೆಗಾಪಿಕ್ಸೆಲ್ ಸೆನ್ಸಾರ್‌ ಅನ್ನು ಹೊಂದಿರುವ ಸಾದ್ಯತೆಯಿದೆ.

TV9 Kannada


Leave a Reply

Your email address will not be published.