Jos Buttler: ಚಹಲ್ ಪತ್ನಿ ಧನಶ್ರೀ ಜೊತೆ ಜೋಸ್ ಬಟ್ಲರ್ ಭರ್ಜರಿ ಡ್ಯಾನ್ಸ್: ವೈರಲ್ ಆಗುತ್ತದೆ ವಿಡಿಯೋ | Yuzvendra Chahal wife Dhanashree Verma was seen teaching Buttler some dance steps Video Viral


Jos Buttler: ಚಹಲ್ ಪತ್ನಿ ಧನಶ್ರೀ ಜೊತೆ ಜೋಸ್ ಬಟ್ಲರ್ ಭರ್ಜರಿ ಡ್ಯಾನ್ಸ್: ವೈರಲ್ ಆಗುತ್ತದೆ ವಿಡಿಯೋ

Jos Buttler and Dhanashree Verma

Dhanashree Verma: ಫೈನಲ್ ಪಂದ್ಯ ಮುಗಿದ ಬಳಿಕ ಆಟಗಾರರು ತಮ್ಮ ಡ್ರೆಸ್ಸಿಂಗ್ ರೂಮ್​ನಲ್ಲಿ ಚಿಕ್ಕದಾಗಿ ಸೆಲೆಬ್ರೇಷನ್ ಮಾಡಿದ್ದಾರೆ. ಇದರಲ್ಲಿ ಚಹಲ್ ಪತ್ನಿ ಧನಶ್ರೀ ವರ್ಮಾ ಬಟ್ಲರ್ ಅವರಿಗೆ ಡ್ಯಾನ್ಸ್ ಹೇಳಿಕೊಟ್ಟಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ.

ಐಪಿಎಲ್ 2022 (IPL 2022) ಟೂರ್ನಿಯಲ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ಧ ಗುಜರಾತ್ ಟೈಟಾನ್ಸ್ ಮೇಲುಗೈ ಸಾಧಿಸಿ ಚೊಚ್ಚಲ ಆವೃತ್ತಿಯಲ್ಲೇ ಪ್ರಶಸ್ತಿಗೆ ಮುತ್ತಿಕ್ಕಿತು. 2008ರ ಬಳಿಕ ಮೊದಲ ಬಾರಿಗೆ ಫೈನಲ್ ತಲುಪಿದ್ದ ರಾಜಸ್ಥಾನ್ ಕಪ್ ಗೆಲ್ಲುವಲ್ಲಿ ಎಡವಿತು. ಆದರೆ, ಟೂರ್ನಿಯುದ್ದಕ್ಕೂ ಆರ್ ಆರ್ ಮೇಲುಗೈ ಸಾಧಿಸುತ್ತಾ ಬಂತು. ತಂಡ ಕೆಲವು ಪಂದ್ಯಗಳಲ್ಲಿ ಸೋತರೂ ಆಟಗಾರರ ಪ್ರದರ್ಶನ ಅದ್ಭುತವಾಗಿತ್ತು. ಇದರಿಂದಲೇ ಜೋಸ್ ಬಟ್ಲರ್ ಆರೆಂಜ್ ಕ್ಯಾಪ್ ತಮ್ಮದಾಗಿಸಿದರೆ ಯುಜ್ವೇಂದ್ರ ಚಹಲ್ (Yuzvendra Chahal) ಪರ್ಪಲ್ ಕ್ಯಾಪ್ ತೊಟ್ಟರು. ಬಟ್ಲರ್ ಬರೋಬ್ಬರಿ ಆರು ಪ್ರಶಸ್ತಿಗಳನ್ನು ಬಾಜಿಕೊಂಡರು. ಫೈನಲ್ ಪಂದ್ಯ ಮುಗಿದ ಬಳಿಕ ಆಟಗಾರರು ತಮ್ಮ ಡ್ರೆಸ್ಸಿಂಗ್ ರೂಮ್​ನಲ್ಲಿ ಚಿಕ್ಕದಾಗಿ ಸೆಲೆಬ್ರೇಷನ್ ಕೂಡ ಮಾಡಿದ್ದಾರೆ. ಇದರಲ್ಲಿ ಚಹಲ್ ಪತ್ನಿ ಬಟ್ಲರ್ (Jos Buttler) ಅವರಿಗೆ ಡ್ಯಾನ್ಸ್ ಹೇಳಿಕೊಟ್ಟಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ.

ಈ ವಿಡಿಯೋದ ಆರಂಭದಲ್ಲಿ ಪಂಜಾಬಿ ಹಾಡೊಂದಕ್ಕೆ ಯುಜ್ವೇಂದ್ರ ಚಹಲ್ ಜೊತೆ ಅವರ ಪತ್ನಿ ಧನಶ್ರೀ ವರ್ಮಾ ಅವರು ಮತ್ತು ಜೋಸ್ ಬಟ್ಲರ್ ನೃತ್ಯ ಮಾಡಲು ಮುಂದಾದರು. ಧನಶ್ರೀ ಸ್ಟೆಪ್​ಗೆ ಮ್ಯಾಚ್ ಮಾಡಲು ಸಾಧ್ಯವಾಗದ ಚಹಲ್ ಹಿಂದೆ ಸರಿದರೆ ಬಟ್ಲರ್ ತಮ್ಮ ಕೈಲಾದಷ್ಟು ಡ್ಯಾನ್ಸ್ ಮಾಡಿದರು. ಈ ಹಿಂದೆ ಕೂಡ ಚಹಲ್ ಹಾಗೂ ಧನಶ್ರೀ ಹಾಡೊಂದಕ್ಕೆ ಸಖತ್ ಸ್ಟೆಪ್ ಹಾಕಿದ್ದರು. ಇದಕ್ಕೆ ರಾಜಸ್ಥಾನ್ ತಂಡದ ಸ್ಫೋಟಕ ಬ್ಯಾಟರ್ ಜೋಸ್ ಬಟ್ಲರ್ ಕಮೆಂಟ್ ಮಾಡಿದ್ದು, “ನೈಸ್ ಮೂವ್ ಚಹಲ್” ಎಂದು ಬರೆದಿದ್ದರು. ಇದುಕೂಡ ವೈರಲ್ ಆಗಿತ್ತು.

Hardik Pandya: ರೋಡ್​ನಲ್ಲಿ ಐಪಿಎಲ್ ಕಪ್ ಹಿಡಿದು ಹಾರ್ದಿಕ್ ಪಾಂಡ್ಯ ಏನು ಮಾಡಿದ್ರು ನೋಡಿ

ನೃತ್ಯಪಟು ಆಗಿರುವ ಧನಶ್ರೀ ವರ್ಮಾ ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯರಾಗಿದ್ದಾರೆ. ಐಪಿಎಲ್ 2022 ವೇಳೆ ರಾಜಸ್ಥಾನ್ ರಾಯಲ್ಸ್ ತಂಡದ ಪರ ಆಡಿದ್ದ ಯುಜ್ವೇಂದ್ರ ಚಹಲ್ ಜೊತೆ ಅವರ ಪತ್ನಿ ಕೂಡ ಮೈದಾನದಿಂದ ಮೈದಾನಕ್ಕೆ ಸುತ್ತಾಡುತ್ತಿದ್ದರು. ಆರ್ ಆರ್ ತಂಡದ ಪಿಂಕ್ ಕಲರ್ ಜೆರ್ಸಿಗೆ ಹೊಮ್ಮುವಂತಹ ಉಡುಗೆ ತೊಟ್ಟು ಸಖತ್ ವೈರಲ್ ಆಗಿದ್ದರು.

ಧನಶ್ರೀ ವರ್ಮಾ ಅವರು ನೃತ್ಯಕ್ಕೆ ಸಂಬಂಧಿಸಿದ ಯೂಟ್ಯೂಬ್ ಚಾನೆಲ್ ಕೂಡ ಹೊಂದಿದ್ದಾರೆ. ಈ ಚಾನಲ್ 25 ಲಕ್ಷಕ್ಕೂ ಹೆಚ್ಚು ಸದಸ್ಯರನ್ನು ಹೊಂದಿದೆ. ಧನಶ್ರೀ ಬಾಲಿವುಡ್ ಹಾಡುಗಳಿಗೆ ಭರ್ಜರಿ ಸ್ಟೆಪ್ಸ್ ಹಾಕಿ ನೆಟ್‌ಫ್ಲಿಕ್ಸ್‌ನಲ್ಲಿ ಸ್ಪ್ಲಾಶ್ ಮಾಡುತ್ತಾರೆ. ಇದಲ್ಲದೆ, ಅವರು ಹಿಪ್-ಹಾಪ್​ನಲ್ಲಿ ತರಬೇತಿ ನೀಡುತ್ತಾರೆ. ಧನಶ್ರೀ ಅವರು ನವಿ ಮುಂಬೈನ ಡಿವೈ ಪಾಟೀಲ್ ಡೆಂಟಲ್ ಕಾಲೇಜಿನಲ್ಲಿ 2014 ರಲ್ಲಿ ಶಿಕ್ಷಣ ಪಡೆದರು. ಯುಜ್ವೇಂದ್ರ ಚಹಲ್ ಮತ್ತು ಅವರ ಪತ್ನಿ ಧನಶ್ರೀ ವರ್ಮಾ ಅವರು ತಮ್ಮ ಸುಂದರವಾದ ಫೋಟೋಗಳು ಮತ್ತು ವೀಡಿಯೊಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಆಗಾಗ್ಗೆ ಹರಿಬಿಡುತ್ತಿರುತ್ತಾರೆ. ಈ ಜೋಡಿ ಡಿಸೆಂಬರ್ 2020 ರಲ್ಲಿ ವೈವಾಹಿಕ ಜೀವನಕ್ಕೆ ಕಾಲಿರಿಸಿದರು.

ಇನ್ನು ಈ ಬಾರಿಯ ಟೂರ್ನಿಯುದ್ದಕ್ಕೂ ಅಮೋಘ ಬ್ಯಾಟಿಂಗ್ ಪ್ರದರ್ಶನ ನೀಡಿದ ಆರ್ ಆರ್ ತಂಡದ ಜೋಸ್ ಬಟ್ಲರ್ ಆರೆಂಜ್ ಕ್ಯಾಪ್ ತಮ್ಮದಾಗಿಸಿಕೊಂಡರು. ಆಡಿದ 17 ಪಂದ್ಯಗಳಿಂದ 57.53ರ ಸರಾಸರಿ ಹಾಗೂ 149.05ರ ಸ್ಟ್ರೈಕ್ ರೇಟ್​ನೊಂದಿಗೆ 863 ರನೆಎಗಳಿಸಿ ಮಿಂಚಿದರು. ಇವರ ಈ ಪ್ರದರ್ಶನದಲ್ಲಿ 4 ಶತಕ ಹಾಗೂ 4 ಅರ್ಧಶತಕ ಒಳಗೊಂಡಿದೆ. ಇನ್ನು ಯುಜ್ವೇಂದ್ರ ಚಹಲ್ ಪರ್ಪಲ್ ಕ್ಯಾಪ್ ಮುಡಿಗೇರಿಸಿಕೊಂಡರು. ಇಡೀ ಸೀಸನ್​ನಲ್ಲಿ ಇವರು 17 ಪಂದ್ಯಗಳಲ್ಲಿ 19.51ರ ಸರಾಸರಿ ಮತ್ತು 7.75ರ ಎಕಾನಮಿಯೊಂದಿಗೆ 27 ವಿಕೆಟ್ ಪಡೆದು ಮಿಂಚಿದ್ದಾರೆ. ಇವರಿಬ್ಬರೂ 10 ಲಕ್ಷ ರೂ. ಬಾಜಿಕೊಂಡರು.

TV9 Kannada


Leave a Reply

Your email address will not be published. Required fields are marked *