Jr NTR: ಜೂನಿಯರ್​ ಎನ್​ಟಿಆರ್​ ಬೆಂಗಳೂರಿಗೆ ಬಂದುಹೋದ ಬೆನ್ನಲ್ಲೇ ಕೇಳಿಬಂತು ಹೊಸ ಸಿನಿಮಾ ಸುದ್ದಿ – Jr NTR reportedly discussed a script with Sita Ramam director Hanu Raghavapudi, Tollywood News, Jr NTR New Movie Update


Jr NTR New Movie: ‘ಆರ್​ಆರ್​ಆರ್​’ ಬಳಿಕ ಜೂನಿಯರ್​ ಎನ್​ಟಿಆರ್​ ಅವರು ಬೇರೆ ಯಾವುದೇ ಸಿನಿಮಾವನ್ನೂ ಸದ್ಯಕ್ಕೆ ಶುರು ಮಾಡಿಲ್ಲ. ಯುವ ನಿರ್ದೇಶಕನ ಜೊತೆ ಅವರೀಗ ಮಾತುಕಥೆ ನಡೆಸಿದ್ದಾರೆ.

Jr NTR: ಜೂನಿಯರ್​ ಎನ್​ಟಿಆರ್​ ಬೆಂಗಳೂರಿಗೆ ಬಂದುಹೋದ ಬೆನ್ನಲ್ಲೇ ಕೇಳಿಬಂತು ಹೊಸ ಸಿನಿಮಾ ಸುದ್ದಿ

ಜೂನಿಯರ್​ ಎನ್​ಟಿಆರ್​

ನಟ ಪುನೀತ್​ ರಾಜ್​ಕುಮಾರ್​ ಅವರಿಗೆ ಮರಣೋತ್ತರವಾಗಿ ‘ಕರ್ನಾಟಕ ರತ್ನ’ ಪ್ರಶಸ್ತಿ ನೀಡಲಾಯಿತು. ವಿಧಾನಸೌಧದ ಮೆಟ್ಟಿಲುಗಳ ಮೇಲೆ ಮಂಗಳವಾರ (ನ.1) ಕನ್ನಡ ರಾಜ್ಯೋತ್ಸವದ ಶುಭ ಸಂದರ್ಭದಲ್ಲಿ ನಡೆದ ಪ್ರಶಸ್ತಿ ಪ್ರದಾನ ಕಾರ್ಯಕ್ರಮಕ್ಕೆ ಖ್ಯಾತ ನಟ ಜೂನಿಯರ್ ಎನ್​ಟಿಆರ್​ (Jr NTR) ಅವರು ಮುಖ್ಯ ಅತಿಥಿ ಆಗಿದ್ದರು. ಅವರ ಬಂದು ಹೋಗಿದ್ದು ಕರುನಾಡಿನಲ್ಲಿನ ಅಭಿಮಾನಿಗಳಿಗೆ ಸಾಕಷ್ಟು ಖುಷಿ ನೀಡಿದೆ. ಅದರ ಬೆನ್ನಲ್ಲೇ ಹೊಸ ಚಿತ್ರದ ಬಗ್ಗೆ ಒಂದು ಗುಸುಗುಸು ಕೇಳಿಬಂದಿದೆ. ಮೂಲಗಳ ಪ್ರಕಾರ ಜೂನಿಯರ್ ಎನ್​ಟಿಆರ್​ ಅವರು ‘ಸೀತಾ ರಾಮಂ’ (Sita Ramam) ಚಿತ್ರದ ನಿರ್ದೇಶಕ ಹನು ರಾಘವಪುಡಿ (Hanu Raghavapudi) ಜೊತೆ ಕೈ ಜೋಡಿಸುವ ಸಾಧ್ಯತೆ ಇದೆ. ಈಗಾಗಲೇ ಇವರಿಬ್ಬರು ಒಂದು ಸ್ಕ್ರಿಪ್ಟ್​ ​ ಕುರಿತು ಮಾತುಕಥೆ ನಡೆಸಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ.

ರಾಜಮೌಳಿ ನಿರ್ದೇಶನದ ‘ಆರ್​ಆರ್​ಆರ್​’ ಸಿನಿಮಾ ಗೆಲುವಿನ ಬಳಿಕ ಜೂನಿಯರ್​ ಎನ್​ಟಿಆರ್​ ಅವರ ಮಾರುಕಟ್ಟೆ ಹಿರಿದಾಗಿದೆ. ಟಾಲಿವುಡ್​ನಲ್ಲಿ ಮಾತ್ರವಲ್ಲದೇ ಪ್ಯಾನ್​ ಇಂಡಿಯಾ ಮಟ್ಟದಲ್ಲಿ ಅವರು ಬಹುಬೇಡಿಕೆಯ ನಟನಾಗಿ ಗುರುತಿಸಿಕೊಂಡಿದ್ದಾರೆ. ಪ್ರತಿ ಚಿತ್ರದ ಸ್ಕ್ರಿಪ್ಟ್​ ಆಯ್ಕೆಯಲ್ಲಿ ಅವರು ಸಖತ್​ ಕಾಳಜಿ ವಹಿಸುತ್ತಿದ್ದಾರೆ. ಈಗ ಅವರು ‘ಸೀತಾ ರಾಮಂ’ ನಿರ್ದೇಶಕ ಹನು ರಾಘವಪುಡಿ ಜೊತೆ ಕೈ ಜೋಡಿಸುವ ಸಾಧ್ಯತೆ ದಟ್ಟವಾಗಿದೆ ಎನ್ನಲಾಗುತ್ತಿದೆ.

ರಶ್ಮಿಕಾ ಮಂದಣ್ಣ, ದುಲ್ಕರ್​ ಸಲ್ಮಾನ್​, ಮೃಣಾಲ್​ ಠಾಕೂರ್ ನಟನೆಯ ‘ಸೀತಾ ರಾಮಂ’ ಸಿನಿಮಾ ಈ ವರ್ಷ ಸೂಪರ್​ ಹಿಟ್​ ಆಯಿತು. ಆ ಬಳಿಕ ನಿರ್ದೇಶಕ ಹನು ರಾಘವಪುಡಿ ಅವರು ರಾಷ್ಟ್ರಮಟ್ಟದಲ್ಲಿ ಖ್ಯಾತಿ ಗಳಿಸಿದ್ದಾರೆ. ಈಗ ಅವರು ಜೂನಿಯರ್​ ಎನ್​ಟಿಆರ್​ ಅವರನ್ನು ಭೇಟಿ ಮಾಡಿ ಒಂದು ಕಥೆ​ ಹೇಳಿದ್ದಾರೆ ಎಂದು ಕೆಲವೆಡೆ ವರದಿ ಆಗಿದೆ. ಈ ಬಗ್ಗೆ ಯಾರಿಂದಲೂ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ. ಆದರೂ ಬೆಂಕಿ ಇಲ್ಲದೆ ಹೊಗೆ ಆಡಲ್ಲ ಎನ್ನುತ್ತಿದ್ದಾರೆ ಗಾಸಿಪ್​ ಮಂದಿ.

‘ಆರ್​ಆರ್​ಆರ್​’ ತೆರೆಕಂಡ ಬಳಿಕ ಜೂನಿಯರ್​ ಎನ್​ಟಿಆರ್​ ಅವರು ಬೇರೆ ಯಾವುದೇ ಸಿನಿಮಾವನ್ನೂ ಸದ್ಯಕ್ಕೆ ಶುರು ಮಾಡಿಲ್ಲ. ಕೆಲವು ಚಿತ್ರಗಳಿಗೆ ಸಹಿ ಮಾಡಿದ್ದಾರಾದರೂ ಶೂಟಿಂಗ್​ ಪ್ರಾರಂಭ ಆಗಿಲ್ಲ. ನಿರ್ದೇಶಕ ಕೊರಟಾಲ ಶಿವ ಅವರ ಜೊತೆ ಜೂನಿಯರ್ ಎನ್​ಟಿಆರ್​ ಕೈ ಜೋಡಿಸಿರುವ ‘ಎನ್​ಟಿಆರ್​30’ ಚಿತ್ರ ಕೂಡ ಸೆಟ್ಟೇರುವುದು ತಡವಾಗುತ್ತಿದೆ. ಈ ಗ್ಯಾಪ್​ನಲ್ಲಿಯೇ ಅವರು ಹನು ರಾಘವಪುಡಿ ಜೊತೆ ಹೊಸ ಸ್ಕ್ರಿಪ್ಟ್​ ಬಗ್ಗೆ ಚರ್ಚೆ ನಡೆಸಿದ್ದಾರೆ ಎನ್ನಲಾಗಿದೆ.

TV9 Kannada


Leave a Reply

Your email address will not be published.