Kabzaa: ಬಹುನಿರೀಕ್ಷಿತ ‘ಕಬ್ಜ’ ಚಿತ್ರದ ಬಜೆಟ್ ಎಷ್ಟು?; ನಿರ್ದೇಶಕ ಆರ್.ಚಂದ್ರು ಹಂಚಿಕೊಂಡ್ರು ಮಾಹಿತಿ | Kabzaa director R Chandru opens up about movie budget and Kabzaa set exclusive video is here

Kabzaa: ಬಹುನಿರೀಕ್ಷಿತ ‘ಕಬ್ಜ’ ಚಿತ್ರದ ಬಜೆಟ್ ಎಷ್ಟು?; ನಿರ್ದೇಶಕ ಆರ್.ಚಂದ್ರು ಹಂಚಿಕೊಂಡ್ರು ಮಾಹಿತಿ

‘ಕಬ್ಜ’ ಚಿತ್ರದಲ್ಲಿ ಉಪೇಂದ್ರ

ಸ್ಯಾಂಡಲ್​ವುಡ್​ನಲ್ಲಿ ಪ್ರಸ್ತುತ ಪ್ಯಾನ್ ಇಂಡಿಯಾ ಚಿತ್ರಗಳ ಸದ್ದು ಜೋರಾಗಿದೆ. ಖ್ಯಾತ ತಾರೆಯರ ಹಲವು ಚಿತ್ರಗಳು ಪ್ಯಾನ್ ಇಂಡಿಯಾ ಮಟ್ಟದಲ್ಲಿ ತಯಾರಾಗುತ್ತಿದೆ. ಅವುಗಳಲ್ಲಿ ರಿಯಲ್ ಸ್ಟಾರ್ ಉಪೇಂದ್ರ ಹಾಗೂ ಕಿಚ್ಚ ಸುದೀಪ್ ನಟಿಸುತ್ತಿರುವ ‘ಕಬ್ಜ’ ಚಿತ್ರವು ಈಗಾಗಲೇ ದೊಡ್ಡ ಮಟ್ಟದಲ್ಲಿ ಗಮನ ಸೆಳೆದಿದೆ. ಇತ್ತೀಚೆಗಷ್ಟೇ ಉಪೇಂದ್ರ ಜನ್ಮದಿನದ ಪ್ರಯುಕ್ತ ಚಿತ್ರದ ಮೋಷನ್ ಪೋಸ್ಟರನ್ನು ಬಿಡುಗಡೆಗೊಳಿಸಲಾಗಿತ್ತು. ದೀಪಾವಳಿಯ ಸಂದರ್ಭದಲ್ಲಿ ಟೀಸರ್ ಬಿಡುಗಡೆ ಮಾಡುವುದಾಗಿ ಚಿತ್ರತಂಡ ತಿಳಿಸಿದೆ. ಇದೀಗ ಚಿತ್ರದ ನಿರ್ದೇಶಕ ಆರ್​.ಚಂದ್ರು ‘ಕಬ್ಜ’ದ ಕುರಿತು ಟಿವಿ9ನೊಂದಿಗೆ ಮಾತನಾಡಿದ್ದಾರೆ.

‘ಕಬ್ಜ’ ಚಿತ್ರದ ಬಜೆಟ್ ಎಷ್ಟು ಎಂಬ ಪ್ರಶ್ನೆಗೆ ಅವರು ಉತ್ತರ ನೀಡಿದ್ದಾರೆ. ಚಿತ್ರವು ಬಹುದೊಡ್ಡ ಮಟ್ಟದಲ್ಲಿ ತಯಾರಾಗುತ್ತಿದ್ದು, ನಿರೀಕ್ಷೆಗಿಂತ ಹೆಚ್ಚಾಗಿ ವಿಸ್ತರಿಸುತ್ತಿದೆ. ಆದ್ದರಿಂದ ಕತೆಗೆ ಪೂರಕವಾಗುವಷ್ಟು ಹಣವನ್ನು ಹಾಕುತ್ತಿದ್ದೇನೆ ಎಂದು ಚಂದ್ರು ನುಡಿದಿದ್ದಾರೆ. ಈಗ ಪ್ಯಾನ್ ಇಂಡಿಯಾ ಟ್ರೆಂಡ್​ನ ಕಾಲ. ಅದಕ್ಕೆ ತಕ್ಕಂತೆ ನಾವು ತಾಂತ್ರಿಕವಾಗಿ ಸೇರಿದಂತೆ ಎಲ್ಲಾ ಬಗೆಯಿಂದಲೂ ಉತ್ತಮ ಚಿತ್ರ ಕಟ್ಟಿಕೊಡಲು ಯತ್ನಿಸಲಿದ್ದೇವೆ ಎಂದಿದ್ಧಾರೆ.

‘ಕಬ್ಜ’ ಚಿತ್ರದ ಬಜೆಟ್ ಕುರಿತಂತೆ ಆರ್.ಚಂದ್ರು ಮಾತನಾಡಿರುವ ವಿಡಿಯೋ ಇಲ್ಲಿದೆ:

‘ಕಬ್ಜ’ ಚಿತ್ರದ ಎರಡನೇ ಭಾಗ ಬರಲಿದೆಯೇ ಎಂಬ ಪ್ರಶ್ನೆಗೂ ಆರ್.ಚಂದ್ರು ಉತ್ತರ ನೀಡಿದ್ದಾರೆ. ಎರಡನೇ ಭಾಗಕ್ಕೂ ಪ್ಲಾನ್ ಇದೆ. ಮೊದಲ ಭಾಗಕ್ಕೆ ಜನರು ಆಶೀರ್ವಾದ ಮಾಡಿದ ತಕ್ಷಣವೇ ಎರಡನೇ ಭಾಗದ ಮುಹೂರ್ತ ನೆರವೇರಲಿದೆ ಎಂದಿದ್ದಾರೆ.

‘ಕಬ್ಜ’ ಚಿತ್ರದ ಅದ್ದೂರಿ ಸೆಟ್​ನ ವಿಡಿಯೋ ಇಲ್ಲಿದೆ:

ಕೆಜಿಎಫ್ ಖ್ಯಾತಿಯ ರವಿ ಬಸ್ರೂರ್ ‘ಕಬ್ಜ’ ಚಿತ್ರಕ್ಕೆ ಸಂಗೀತ ನೀಡಲಿದ್ದು, ಎಜೆ ಶೆಟ್ಟಿ ಛಾಯಾಗ್ರಹಣ ಮಾಡುತ್ತಿದ್ದಾರೆ. ಚಿತ್ರದಲ್ಲಿ ಬಹುದೊಡ್ಡ ತಾರಾಗಣವಿದ್ದು, ಶ್ರೀನಿವಾಸ್ ರಾವ್ ಕೋಟ, ಪ್ರಕಾಶ್ ರಾಜ್, ಜಗಪತಿ ಬಾಬು, ಕಬೀರ್ ದುಹಾನ್ ಸಿಂಗ್ ಮೊದಲಾದವರು ಕಾಣಿಸಿಕೊಳ್ಳಲಿದ್ದಾರೆ. ಚಿತ್ರವನ್ನು ಆರ್​.ಚಂದ್ರಶೇಖರ್ ನಿರ್ಮಿಸುತ್ತಿದ್ದು, ಎಂಟಿಬಿ ನಾಗರಾಜ್ ಪ್ರಸ್ತುತಪಡಿಸಲಿದ್ದಾರೆ.

ಇದನ್ನೂ ಓದಿ:

Upendra Rao: ‘ಕಬ್ಜ’ ಚಿತ್ರದ ಮೋಷನ್ ಪೋಸ್ಟರ್​ನಲ್ಲಿ ಅಬ್ಬರಿಸಿದ ಉಪ್ಪಿ; ಚಿತ್ರದ ಟೀಸರ್ ಬಿಡುಗಡೆ ಯಾವಾಗ ಗೊತ್ತಾ?

‘ನಮ್ಮ ಮನೆಯಲ್ಲೂ ಹೆಂಡತಿ ಗದರುತ್ತಾರೆ’; ‘ಅನುಬಂಧ’ ಕಾರ್ಯಕ್ರಮದಲ್ಲಿ ಅಚ್ಚರಿ ವಿಚಾರ ಬಿಚ್ಚಿಟ್ಟ ಸಿಎಂ ಬಸವರಾಜ ಬೊಮ್ಮಾಯಿ

‘ಮಹಿಳೆಯರನ್ನು ಮಾತ್ರ ಪ್ರಶ್ನೆ ಮಾಡುವ ನಮ್ಮ ಸಮಾಜಕ್ಕೆ ನೈತಿಕತೆ ಇಲ್ಲ’; ಸಿಟ್ಟಾದ ಸಮಂತಾ

TV9 Kannada

Leave a comment

Your email address will not be published. Required fields are marked *