Kagiso Rabada: ರಬಾಡ ಹ್ಯಾಟ್ರಿಕ್ ವಿಕೆಟ್ ಸಾಧನೆ: ಗೆದ್ದರೂ ಆಫ್ರಿಕಾ ಟೂರ್ನಿಯಿಂದ ಔಟ್: ಸೆಮೀಸ್​ಗೆ ಇಂಗ್ಲೆಂಡ್ | Kagiso Rabada pick a T20I hat trick but South Africa out the T20I World Cup England enter the Semi Final


Kagiso Rabada: ರಬಾಡ ಹ್ಯಾಟ್ರಿಕ್ ವಿಕೆಟ್ ಸಾಧನೆ: ಗೆದ್ದರೂ ಆಫ್ರಿಕಾ ಟೂರ್ನಿಯಿಂದ ಔಟ್: ಸೆಮೀಸ್​ಗೆ ಇಂಗ್ಲೆಂಡ್

Kagiso Rabada ENG vs SA

ಐಸಿಸಿ ಟಿ20 ವಿಶ್ವಕಪ್ (T20 World Cup) ಟೂರ್ನಿಯಲ್ಲಿ ಶನಿವಾರ ನಡೆದ ಸೂಪರ್-12 ಹಂತದ ಒಂದನೇ ಗುಂಪಿನ ಕೊನೆಯ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ದಕ್ಷಿಣ ಆಫ್ರಿಕಾ (England vs South Africa) 10 ರನ್ ಅಂತರದ ರೋಚಕ ಗೆಲುವು ದಾಖಲಿಸಿರುವ ಹೊರತಾಗಿಯೂ ಸೆಮಿ ಫೈನಲ್‌ಗೆ (Semi Final) ಪ್ರವೇಶಿಸುವಲ್ಲಿ ವಿಫಲವಾಗಿದೆ. ನಿಗದಿತ ಅವದಿಯಲ್ಲಿ ಎದುರಾಳಿಯನ್ನು ಕಟ್ಟಿಹಾಕಲು ವಿಫಲವಾರ ಆಫ್ರಿಕಾ ಟೂರ್ನಿಯಿಂದ ಹೊರಬಿದ್ದರೆ, ಇಂಗ್ಲೆಂಡ್ ಸೆಮಿ ಫೈನಲ್​ಗೆ ಅಧಿಕೃತವಾಗಿ ಪ್ರವೇಶ ಪಡೆದಿದೆ. ರನ್‌ರೇಟ್ ಲೆಕ್ಕಾಚಾರದಲ್ಲಿ ಕಡೇ ಹಂತದವರೆಗೂ ಹೋರಾಡಿದ ದಕ್ಷಿಣ ಆಫ್ರಿಕಾ ತಂಡ ಸೆಮಿಫೈನಲ್ ಪ್ರವೇಶೀಸಲು ವಿಫಲವಾದರೂ ಇಂಗ್ಲೆಂಡ್ ತಂಡದ ಗೆಲುವಿನ ಓಟಕ್ಕೆ ಬ್ರೇಕ್ ಹಾಕಲು ಶಕ್ತವಾಯಿತು. ಈ ಮೂಲಕ ಗೆಲುವಿನೊಂದಿಗೆ ದ.ಆಫ್ರಿಕಾ ಟೂರ್ನಿಗೆ ವಿದಾಯ ಘೋಷಿಸಿತು.

ಇಂಗ್ಲೆಂಡ್, ಆಸ್ಟ್ರೇಲಿಯಾ ಹಾಗೂ ದಕ್ಷಿಣ ಆಫ್ರಿಕಾ ತಂಡಗಳು ಆಡಿರುವ ಐದು ಪಂದ್ಯಗಳಲ್ಲಿ ನಾಲ್ಕು ಗೆಲುವಿನೊಂದಿಗೆ ಸಮಾನ ಎಂಟು ಅಂಕಗಳನ್ನು ಕಲೆ ಹಾಕಿದೆ. ಆದರೆ ದಕ್ಷಿಣ ಆಫ್ರಿಕಾಗಿಂತಲೂ ಉತ್ತಮ ರನ್‌ರೇಟ್ ಕಾಯ್ದುಕೊಂಡಿರುವ ಇಂಗ್ಲೆಂಡ್ ಹಾಗೂ ಆಸ್ಟ್ರೇಲಿಯಾ ತಂಡಗಳು ಸೆಮಿಫೈನಲ್‌ಗೆ ಲಗ್ಗೆಯಿಟ್ಟಿವೆ.

ಮೊದಲು ಬ್ಯಾಟಿಂಗ್ ನಡೆಸಿದ ದಕ್ಷಿಣ ಆಫ್ರಿಕಾ ತಂಡ ರಾಸ್ಸಿ ವ್ಯಾನ್ ಡೆರ್‌ ಡುಸೆನ್‌ (94*) ಹಾಗೂ ಏಡೆನ್ ಮಾರ್ಕರಮ್ (52*) ಬಿರುಸಿನ ಅರ್ಧಶತಕಗಳ ನೆರವಿನಿಂದ ಎರಡು ವಿಕೆಟ್ ನಷ್ಟಕ್ಕೆ 20 ಓವರ್​ನಲ್ಲಿ 189 ರನ್‌ಗಳ ಬೃಹತ್ ಮೊತ್ತ ಪೇರಿಸಿತ್ತು. ಅಲ್ಲದೆ ಸೆಮಿಫೈನಲ್ ಪ್ರವೇಶಿಸಲು ಎದುರಾಳಿ ಇಂಗ್ಲೆಂಡ್ ತಂಡವನ್ನು ಗರಿಷ್ಠ 131 ರನ್‌ಗಳಿಗೆ ನಿಯಂತ್ರಿಸಬೇಕಾದ ಒತ್ತಡಕ್ಕೆ ಸಿಲುಕಿತ್ತು.

ಸವಾಲಿನ ಮೊತ್ತ ಬೆನ್ನತ್ತಿದ ಇಂಗ್ಲೆಂಡ್‌ಗೆ ಜೇಸನ್ ರಾಯ್ ಹಾಗೂ ಜೋಸ್ ಬಟ್ಲರ್ ಮೊದಲ ವಿಕೆಟ್‌ಗೆ ಅರ್ಧಶತಕದ (58) ಜೊತೆಯಾಟ ನೀಡಿದರು. ಈ ಹಂತದಲ್ಲಿ 20 ರನ್ ಗಳಿಸಿದ ರಾಯ್ ಗಾಯದಿಂದಾಗಿ ನಿವೃತ್ತಿ ಹೊಂದಿದರು. ಬೆನ್ನಲ್ಲೇ ಬಟ್ಲರ್ (26 ರನ್) ಹಾಗೂ ಜಾನಿ ಬೆಸ್ಟೊ (1) ವಿಕೆಟ್ ನಷ್ಟವಾಯಿತು. ಮಧ್ಯಮ ಕ್ರಮಾಂಕದಲ್ಲಿ ಮೊಯಿನ್ ಅಲಿ (37) ಹಾಗೂ ಡೇವಿಡ್ ಮಲಾನ್ (33) ರನ್ ಗತಿ ಕುಸಿಯದಂತೆ ನೋಡಿಕೊಂಡರು. ಕೊನೆಯ ಹಂತದಲ್ಲಿ ಲಯಮ್ ಲಿವಿಂಗ್‌ಸ್ಟೋನ್ (28) ಹಾಗೂ ನಾಯಕ ಏಯಾನ್ ಮಾರ್ಗನ್ (17) ಉಪಯುಕ್ತ ಇನ್ನಿಂಗ್ಸ್ ಕಟ್ಟಿದರು.

ಆದರೆ ಇನ್ನಿಂಗ್ಸ್‌ನ ಅಂತಿಮ ಓವರ್‌ನಲ್ಲಿ ಹ್ಯಾಟ್ರಿಕ್ ವಿಕೆಟ್ ಸಾಧನೆ ಮಾಡಿದ ಕಗಿಸೊ ರಬಾಡ ದಕ್ಷಿಣ ಆಫ್ರಿಕಾಗೆ ರೋಚಕ ಗೆಲುವು ಒದಗಿಸಿಕೊಡುವಲ್ಲಿ ನೆರವಾದರು. ಇನ್ನುಳಿದಂತೆ ಡ್ವೇಯ್ನ್ ಪ್ರೆಟೋರಿಯಸ್ ಹಾಗೂ ತಬ್ರೈಜ್ ಶಮ್ಸಿ ತಲಾ ಎರಡು ವಿಕೆಟ್‌ಗಳನ್ನು ಕಬಳಿಸಿದರು.

 

ರಬಾಡ ಹ್ಯಾಟ್ರಿಕ್ ಸಾಧನೆ:

ಕೊನೆಯ ಓವರ್‌ನಲ್ಲಿ ಇಂಗ್ಲೆಂಡ್ ಗೆಲುವಿಗೆ 14 ರನ್‌ ಅಗತ್ಯವಿದ್ದಾಗ ಅತ್ಯುತ್ತಮ ಬೌಲ್‌ ಮಾಡಿದ ಕಗಿಸೊ ರಬಾಡ 2021ರ ಟಿ20 ವಿಶ್ವಕಪ್‌ ಟೂರ್ನಿಯಲ್ಲಿ ಎರಡನೇ ಹ್ಯಾಟ್ರಿಕ್‌ ವಿಕೆಟ್‌ ಸಾಧನೆ ಮಾಡಿದರು. ಆ ಮೂಲಕ ಅಂತಿಮ ಓವರ್‌ನಲ್ಲಿ ಎದುರಾಳಿ ತಂಡಕ್ಕೆ ಕೇವಲ 4 ರನ್‌ಗಳಿಗೆ ನಿಯಂತ್ರಿಸಿದರು ಹಾಗೂ ದಕ್ಷಿಣ ಆಫ್ರಿಕಾ ತಂಡಕ್ಕೆ 10 ರನ್‌ ಜಯ ತಂದಿತ್ತರು. ಡ್ವೇನ್‌ ಪ್ರೆಟೋರಿಯಸ್‌ ಹಾಗೂ ತಬ್ರೈಝ್‌ ಶಾಂಸಿ ತಲಾ ಎರಡು ವಿಕೆಟ್‌ ಕಬಳಿಸಿದರು. ಅಲ್ಲದ ಟಿ20 ವಿಶ್ವಕಪ್​ನಲ್ಲಿ ಹ್ಯಾಟ್ರಿಕ್ ವಿಕೆಟ್ ಕಿತ್ತ ಮೊದಲ ದಕ್ಷಿಣ ಆಫ್ರಿಕಾ ಬೌಲರ್ ಮತ್ತು ನಾಲ್ಕನೇ ಬೌಲರ್ ಎಂಬ ಸಾಧನೆ ಮಾಡಿದರು.

Chris Gayle: ಯೂನಿವರ್ಸ್​ ಬಾಸ್ ಕ್ರಿಸ್ ಗೇಲ್ ನಿವೃತ್ತಿ ಘೋಷಿಸಿಲ್ವಾ?

(Kagiso Rabada pick a T20I hat-trick but South Africa out the T20I World Cup England enter the Semi Final)

TV9 Kannada


Leave a Reply

Your email address will not be published. Required fields are marked *