Kangana Ranaut: ಕಂಗನಾ ಅಭಿಮಾನಿಗಳಿಗೆ ಎದುರಾಯ್ತು ಅನಿರೀಕ್ಷಿತ ಸಮಾಚಾರ; ಸಂಗಾತಿಯ ಗುಟ್ಟು ಬಿಟ್ಟುಕೊಟ್ಟ ನಟಿ | Kangana Ranaut says she will reveal her partner soon and planning to have kids within five years


Kangana Ranaut: ಕಂಗನಾ ಅಭಿಮಾನಿಗಳಿಗೆ ಎದುರಾಯ್ತು ಅನಿರೀಕ್ಷಿತ ಸಮಾಚಾರ; ಸಂಗಾತಿಯ ಗುಟ್ಟು ಬಿಟ್ಟುಕೊಟ್ಟ ನಟಿ

ಕಂಗನಾ ರಣಾವತ್

ಬಾಲಿವುಡ್ ನಟಿಯರು ಸಾಮಾನ್ಯವಾಗಿ ವೃತ್ತಿ ಜೀವನದ ಎತ್ತರದಲ್ಲಿರುವಾಗ ಮದುವೆ, ಸಂಸಾರ ಮೊದಲಾದವುಗಳ ಬಗ್ಗೆ ಮುಕ್ತವಾಗಿ ಮಾತನಾಡುವುದು ಕಡಿಮೆ. ಕೆಲವೊಮ್ಮೆ ಅದು ವೈಯಕ್ತಿಕ ಜೀವನ ಎಂದು ಈ ಎಲ್ಲಾ ಮಾತುಗಳಿಂದ ದೂರ ಉಳಿಯುತ್ತಾರೆ ಅಥವಾ ಕೇವಲ ವೃತ್ತಿ ಜೀವನದ ಬಗ್ಗೆ ಮಾತ್ರ ಯೋಚಿಸುತ್ತಾರೆ. ಆದರೆ ನಟಿ ಕಂಗನಾ ರಣಾವತ್ ಈ ವಿಷಯದಲ್ಲೂ ತಾವು ಎಲ್ಲರಿಗಿಂತ ಭಿನ್ನ ಎಂಬುದನ್ನು ಸಾಬೀತುಮಾಡಿದ್ದಾರೆ. ಚಿತ್ರರಂಗದಲ್ಲಿ ನಟ-ನಟಿಯರು ಮಾತನಾಡಲು ಹಿಂದೆ-ಮುಂದೆ ನೋಡುವ ವಿಚಾರಗಳನ್ನು ನಿರ್ಭಯವಾಗಿ ಮಾತನಾಡುವ ಕಂಗನಾ, ಮದುವೆ, ಸಂಸಾರ, ಮಕ್ಕಳು ಈ ವಿಷಯವನ್ನೂ ಯಾವುದೇ ಮುಚ್ಚುಮರೆಯಿಲ್ಲದೇ ಹೇಳಿಕೊಂಡು ಸದ್ಯ ಸುದ್ದಿಯಲ್ಲಿದ್ದಾರೆ. ಅಲ್ಲದೇ ಇದು ಕಂಗನಾರ ಅಪ್ಪಟ ಅಭಿಮಾನಿಗಳಿಗೆ ತುಸು ಬೇಸರದ ಸಂಗತಿಯೂ ಹೌದು. ಕಾರಣ, ಇನ್ನೈದು ವರ್ಷಗಳೊಳಗೆ ಕಂಗನಾ ಮದುವೆಯಾಗಿ, ಮಕ್ಕಳನ್ನು ಹೊಂದುವ ಬಗ್ಗೆ ಯೋಚಿಸುತ್ತಿದ್ದಾರಂತೆ!

ಇತ್ತೀಚೆಗಷ್ಟೇ ಪದ್ಮಶ್ರೀ ಪ್ರಶಸ್ತಿ ಸ್ವೀಕರಿಸಿದ ಕಂಗನಾ, ಕೆಲ ಕಾಲದ ನಂತರ ಸಂದರ್ಶನವೊಂದರಲ್ಲಿ ಹಲವು ಕುತೂಹಲಕರ ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಇನ್ನು ಐದು ವರ್ಷಗಳ ನಂತರ ನಿಮ್ಮನ್ನು ನೀವು ಎಲ್ಲಿ ನೋಡುತ್ತೀರಿ ಎಂಬ ಪ್ರಶ್ನೆಗೆ ಉತ್ತರಿಸಿದ ಕಂಗನಾ, ‘‘ನಾನು ಖಂಡಿತವಾಗಿಯೂ ಮದುವೆಯಾಗುತ್ತೇನೆ ಮತ್ತು ಮಕ್ಕಳನ್ನು ಹೊಂದುತ್ತೇನೆ. ಐದು ವರ್ಷಗಳ ನಂತರ ನನ್ನನ್ನು ನಾಣು ತಾಯಿಯಾಗಿ, ಪತ್ನಿಯಾಗಿ ನೋಡಬಹುದು. ಇದರೊಂದಿಗೆ ನವಭಾರತ ಪರಿಕಲ್ಪನೆಯ ಸಾಕಾರದಲ್ಲಿ ಸಕ್ರಿಯವಾಗಿ ತೊಡಗಿಕೊಂಡಿರುತ್ತೇನೆ’’ ಎಂದು ಹೇಳಿದ್ದಾರೆ.

ಹಾಗೆಯೇ ಸಂದರ್ಶನದಲ್ಲಿ ಅಚ್ಚರಿಯ ವಿಚಾರವೊಂದನ್ನು ತೆರೆದಿಟ್ಟಿರುವ ಕಂಗನಾ, ತಮ್ಮ ಸಂಗಾತಿಯ ಕುರಿತು ಮಾತನಾಡಿದ್ದಾರೆ. ಸಂಗಾತಿಯ ಕುರಿತಾದ ಪ್ರಶ್ನೆಗೆ ಅವರು, ‘ನಿಮಗೆ ಸದ್ಯದಲ್ಲೇ ತಿಳಿಯಲಿದೆ’ ಎಂದು ಉತ್ತರಿಸಿದ್ದಾರೆ. ಈ ಮೂಲಕ ಕಂಗನಾ ಸದ್ಯದಲ್ಲೇ ವೈವಾಹಿಕ ಜೀವನಕ್ಕೆ ಕಾಲಿಡಲಿದ್ದಾರೆಯೇ ಎಂಬ ಪ್ರಶ್ನೆಗಳು ಅಭಿಮಾನಿಗಳಿಗೆ ಹುಟ್ಟಿಕೊಂಡಿದೆ. ಜೊತೆಗೆ ಕಂಗನಾರ ಈ ನಿರ್ಧಾರ ಅವರ ಅಭಿಮಾನಿಗಳಿಗೆ ಬಹಳ ಅಚ್ಚರಿಯನ್ನೂ ನೀಡಿದೆ. ಸದ್ಯ ಪ್ರೀತಿಯಲ್ಲಿ ಬಿದ್ದಿರುವ ಕಂಗನಾಗೆ, ನಿಮ್ಮ ಹೊಸ ಜಗತ್ತು ಹೇಗಿದೆ ಎಂಬ ಪ್ರಶ್ನೆಗೆ, ‘‘ಪ್ರೀತಿಯಲ್ಲಿ ಪ್ರತ್ಯೇಕ ಜಗತ್ತು ಎಂಬುದಿರುವುದಿಲ್ಲ. ಆದರೆ ಸಂತಸದ ಹಾದಿಯಲ್ಲಿಯೇ ಇದ್ದೇನೆ’’ ಎಂದು ಕಂಗನಾ ನುಡಿದಿದ್ದಾರೆ. ಸಂಗಾತಿಯ ಕುರಿತು ಮತ್ತಷ್ಟು ಪ್ರಶ್ನಿಸಿದಾಗ ಅವರು, ‘ಈ ಪ್ರಶ್ನೆಯಿಂದ ಮುಂದಕ್ಕೆ ಹೋಗೋಣ. ನಿಮಗೆ ಸದ್ಯದಲ್ಲಿಯೇ ತಿಳಿಯಲಿದೆ’ ಎಂದು ಪುನರುತ್ತರಿಸಿದ್ದಾರೆ. ಈ ಮೂಲಕ ಕಂಗನಾರ ಸಂಗಾತಿಯ ಪರಿಚಯ ಅವರ ಅಭಿಮಾನಿಗಳಿಗೆ ಸದ್ಯದಲ್ಲಿಯೇ ಆಗಲಿದೆ ಎಂದು ನಟಿ ಬಹಿರಂಗಪಡಿಸಿದ್ದಾರೆ.

ಕಂಗನಾ ಬತ್ತಳಿಕೆಯಲ್ಲಿ ಸದ್ಯ ಹಲವು ಚಿತ್ರಗಳಿವೆ. ‘ಧಾಕಡ್’, ‘ತೇಜಸ್’, ‘ಅಪರಾಜಿತ ಅಯೋಧ್ಯ’, ‘ದಿ ಇನ್ಕಾರ್ನೇಷನ್ ಸೀತಾ’, ‘ಮಣಿಕರ್ಣಿಕಾ ರಿಟರ್ನ್ಸ್’, ‘ಟೀಕು ವೆಡ್ಸ್ ಶೇರು’ ಮೊದಲಾದ ಚಿತ್ರಗಳಲ್ಲಿ ಕಂಗನಾ ಕಾಣಿಸಿಕೊಳ್ಳುತ್ತಿದ್ದಾರೆ.

ಇದನ್ನೂ ಓದಿ:

Keerthy Suresh: ‘ಅಣ್ಣಾಥೆ’ ಚಿತ್ರದಲ್ಲಿ ರಜನಿಕಾಂತ್​ ತಂಗಿ ಪಾತ್ರ ಮಾಡಲು 2 ಕೋಟಿ ರೂ. ಪಡೆದ ನಟಿ ಕೀರ್ತಿ ಸುರೇಶ್​

‘ಅಪ್ಪು ನಿಧನದ ಸುದ್ದಿ ಕೇಳಿದಾಗ ರಾಡ್​ನಿಂದ ತಲೆಗೆ ಹೊಡೆದಂತೆ ಆಯ್ತು’; ಕರಾಳ ಕ್ಷಣದ ಬಗ್ಗೆ ಶಿವಣ್ಣನ ಮಾತು

TV9 Kannada


Leave a Reply

Your email address will not be published. Required fields are marked *