Kangana Ranaut Twitter Account: ಕಂಗನಾ ರಣಾವತ್ ಅವರ ಟ್ವಿಟರ್ ಖಾತೆ ಮತ್ತೆ ಸಕ್ರಿಯವಾಗಿದೆ. 20 ತಿಂಗಳ ಬಳಿಕ ಅವರು ಟ್ವೀಟ್ ಮಾಡಿದ್ದಾರೆ. ಇದು ಅವರ ಅಭಿಮಾನಿಗಳಿಗೆ ಖುಷಿ ನೀಡಿದೆ.

ಕಂಗನಾ ರಣಾವತ್ ಟ್ವಿಟರ್
ನಟಿ ಕಂಗನಾ ರಣಾವತ್ (Kangana Ranaut) ಅಭಿಮಾನಿಗಳಿಗೆ ಇದು ಸಿಹಿ ಸುದ್ದಿ. ಸದಾ ವಿವಾದಗಳಿಂದಲೇ ಸದ್ದು ಮಾಡುವ ಕಂಗನಾ ಅವರು ಟ್ವಿಟರ್ಗೆ ಮರಳಿದ್ದಾರೆ. ಈ ಕುರಿತು ಮಂಗಳವಾರ (ಜ.24) ಅವರು ಬ್ರೇಕಿಂಗ್ ನ್ಯೂಸ್ ನೀಡಿದ್ದಾರೆ. ಕಂಗನಾ ರಣಾವತ್ ಅವರ ಟ್ವಿಟರ್ ಖಾತೆ (Kangana Ranaut Twitter) ಮತ್ತೆ ಆ್ಯಕ್ಟೀವ್ ಆಗಿದೆ. ಆಕ್ಷೇಪಾರ್ಹ ಟ್ವೀಟ್ ಮಾಡಿದ ಕಾರಣಕ್ಕೆ 20 ತಿಂಗಳ ಹಿಂದೆ ಅವರ ಖಾತೆಯನ್ನು ಸಸ್ಪೆಂಡ್ ಮಾಡಲಾಗಿತ್ತು. ಆದರೆ ಈಗ ಅವರು ಪುನಃ ಟ್ವಿಟರ್ ಅಂಗಳಕ್ಕೆ ಕಾಲಿಟ್ಟಿದ್ದಾರೆ. ಈ ಕುರಿತು ಅವರು ಸಂತಸ ಹಂಚಿಕೊಂಡಿದ್ದು, ‘ಮರಳಿ ಇಲ್ಲಿಗೆ ಬಂದಿದ್ದಕ್ಕೆ ಖುಷಿ ಆಗುತ್ತಿದೆ’ ಎಂದು ಟ್ವೀಟ್ (Kangana Ranaut Tweet) ಮಾಡಿದ್ದಾರೆ. ಅಭಿಮಾನಿಗಳು ಕಮೆಂಟ್ಗಳ ಮೂಲಕ ನೆಚ್ಚಿನ ನಟಿಗೆ ಸ್ವಾಗತ ಕೋರುತ್ತಿದ್ದಾರೆ.
Hello everyone, it’s nice to be back here 🙂
ತಾಜಾ ಸುದ್ದಿ
— Kangana Ranaut (@KanganaTeam) January 24, 2023
ಟ್ವಿಟರ್ಗೆ ಮರಳಿ ಬಂದಿರುವ ಕಂಗನಾ ರಣಾವತ್ ಅವರು ತಮ್ಮ ಮುಂಬರುವ ಸಿನಿಮಾ ‘ಎಮರ್ಜೆನ್ಸಿ’ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. ಈ ಚಿತ್ರದ ಶೂಟಿಂಗ್ ಮುಗಿದಿದೆ ಎಂದು ಅವರು ಹೇಳಿದ್ದಾರೆ. ನಟಿಯ ಟ್ವಿಟರ್ ಖಾತೆ ಮರಳಿ ಸಿಕ್ಕಿದ್ದಕ್ಕೆ ನೆಟ್ಟಿಗರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಈ ಬಗ್ಗೆ ಅನೇಕರು ತಮ್ಮ ಅಭಿಪ್ರಾಯ ಹಂಚಿಕೊಳ್ಳುತ್ತಿದ್ದಾರೆ.
And it’s a wrap !!!
Emergency filming completed successfully… see you in cinemas on 20th October 2023 …
20-10-2023 🚩 pic.twitter.com/L1s5m3W99G— Kangana Ranaut (@KanganaTeam) January 24, 2023
ಸೋಶಿಯಲ್ ಮೀಡಿಯಾದಲ್ಲಿ ಕಂಗನಾ ರಣಾವತ್ ಅವರು ಸಕ್ರಿಯರಾಗಿರುತ್ತಾರೆ. ಟ್ವಿಟರ್ನಲ್ಲಿ ಅವರು ಹತ್ತು ಹಲವು ವಿಚಾರಗಳನ್ನು ಹಂಚಿಕೊಳ್ಳುತ್ತಾರೆ. ಟ್ವಿಟರ್ ಖಾತೆ ಸಸ್ಪೆಂಡ್ ಆದ ಬಳಿಕ ಇನ್ಸ್ಟಾಗ್ರಾಮ್ನಲ್ಲಿ ಕಂಗನಾ ಹೆಚ್ಚು ಆ್ಯಕ್ಟೀವ್ ಆಗಿದ್ದರು. ಈಗ ತಾವು ಟ್ವಿಟರ್ಗೆ ಮರಳಿರುವ ಸುದ್ದಿಯನ್ನು ಇನ್ಸ್ಟಾಗ್ರಾಮ್ನಲ್ಲಿಯೂ ಅವರು ಹಂಚಿಕೊಂಡಿದ್ದಾರೆ.