ಕರೀನಾ ಕಪೂರ್
ಬಾಲಿವುಡ್ ನಟಿ ಕರೀನಾ ಕಪೂರ್ ಸದ್ಯ ಚಿತ್ರರಂಗದಿಂದ ತಾತ್ಕಾಲಿಕ ಬ್ರೇಕ್ ತೆಗೆದುಕೊಂಡಿದ್ದಾರೆ. ಹಾಗಂತ ಅವರು ಅಭಿಮಾನಿಗಳೊಂದಿಗೆ ಸಂಪರ್ಕವನ್ನು ಕಡಿದುಕೊಂಡಿಲ್ಲ. ಸಾಮಾಜಿಕ ಜಾಲತಾಣಗಳಿಗೆ ತುಸು ಲೇಟ್ ಆಗಿ ಎಂಟ್ರಿ ಕೊಟ್ಟಿದ್ದ ಕರೀನಾ, ಕಳೆದ ವರ್ಷದ ಆಸುಪಾಸಿನಲ್ಲಿ ಇನ್ಸ್ಟಾಗ್ರಾಂ ಖಾತೆ ತೆರೆದಿದ್ದರು. ಆದರೆ ಅಲ್ಲಿಂದ ಅವರು ಸತತವಾಗಿ ಅಭಿಮಾನಿಗಳೊಂದಿಗೆ ಸಂಪರ್ಕದಲ್ಲಿದ್ದಾರೆ. ಈ ವರ್ಷ ಫೆಬ್ರವರಿಯಲ್ಲಿ ಎರಡನೇ ಪುತ್ರ ಜೇಹ್ ಕುಟುಂಬಕ್ಕೆ ಆಗಮಿಸಿದ್ದ. ನಂತರ ಸಂಪೂರ್ಣವಾಗಿ ಆತನ ಆರೈಕೆಯಲ್ಲಿ ಕರೀನಾ ತೊಡಗಿಕೊಂಡಿದ್ದರು. ಇದೀಗ ಮತ್ತೆ ಚಿತ್ರರಂಗದತ್ತ ಮರಳಲು ಅವರು ಸಜ್ಜಾಗುತ್ತಿದ್ದು, ಅದಕ್ಕೆ ತಯಾರಿ ನಡೆಸಿದ್ದಾರೆ. ಪ್ರಸ್ತುತ ಪಟೌಡಿ ಅರಮನೆಯಲ್ಲಿರುವ ಕಂಗನಾ, ಹಂಚಿಕೊಂಡ ಒಂದು ಚಿತ್ರ ಅಂತರ್ಜಾಲದಲ್ಲಿ ವೈರಲ್ ಆಗಿದ್ದು, ಅಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಗಿದೆ.
ಇನ್ಸ್ಟಾಗ್ರಾಂ ಸ್ಟೋರಿಯ ಮುಖಾಂತರ ಕರೀನಾ ಪಟೌಡಿ ಪ್ಯಾಲೇಸ್ನಲ್ಲಿ ಸಂತಸದಿಂದ ಕಾಲ ಕಳೆಯುತ್ತಿರುವ ಚಿತ್ರವನ್ನು ಹಂಚಿಕೊಂಡಿದ್ದಾರೆ. ಅವರು ಸ್ವೆಟರ್ ಧರಿಸಿ, ಅರಮನೆಯ ಉದ್ಯಾನದ ಎದುರು ಬಿಸಿಲಿಗೆ ಮುಖವೊಡ್ಡಿರುವ ಚಿತ್ರ ಹಂಚಿಕೊಂಡಿದ್ದಾರೆ. ಅವರು ಧರಿಸಿರುವ ಕೆಂಪು ಬಣ್ಣದ ಸ್ವೆಟರ್ ಬಳಿ, ‘ಸ್ವೆಟರ್ ವೆದರ್’ ಎಂದು ಕರೀನಾ ಬರೆದಿದ್ದು, ಚಳಿಗಾಲವನ್ನು ತಮ್ಮದೇ ಸ್ಟೈಲ್ನಲ್ಲಿ ವ್ಯಾಖ್ಯಾನಿಸಿ, ಹೊಸ ಹೆಸರನ್ನಿಟ್ಟಿದ್ದಾರೆ.
ಕರೀನಾ ಧರಿಸಿರುವ ಸ್ವೆಟರ್ ಸದ್ಯ ಅಂತರ್ಜಾಲದಲ್ಲಿ ಸಖತ್ ಸದ್ದು ಮಾಡುತ್ತಿದ್ದು, ಅಭಿಮಾನಿಗಳು ಇಷ್ಟಪಟ್ಟಿದ್ದಾರೆ. ಇದರೊಂದಿಗೆ ವಿಶೇಷವಾಗಿ ಕರೀನಾ ನೀಡಿದ ‘ಸ್ವೆಟರ್ ವೆದರ್’ ಕ್ಯಾಪ್ಶನ್ ಎಲ್ಲರ ಗಮನ ಸೆಳೆದಿದೆ. ಅದಕ್ಕೆ ವಿಧವಿಧವಾಗಿ ಕಾಮೆಂಟ್ ಮಾಡುತ್ತಾ ಫ್ಯಾನ್ಸ್ ಮೆಚ್ಚುಗೆಯನ್ನೂ ಸೂಚಿಸುತ್ತಿದ್ದಾರೆ.. ಕರೀನಾ ಹಂಚಿಕೊಂಡಿರುವ ಸ್ಟೋರಿ ಇಲ್ಲಿದೆ.

ಕರೀನಾ ಹಂಚಿಕೊಂಡಿರುವ ಸ್ಟೋರಿ
ಕರೀನಾ ಕಪೂರ್ ಮತ್ತು ಸೈಫ್ ಅಲಿ ಖಾನ್ ದಂಪತಿ ಈ ಬಾರಿ ಜನ್ಮದಿನವನ್ನು ಪಟೌಡಿ ಅರಮನೆಯಲ್ಲಿ ಆಚರಿಸಿದ್ದರು. ಹಳೆಯ ಕಾಲದ ವೈಭವೋಪೇತ ಅರಮನೆಯಲ್ಲಿ ಸಾಂಪ್ರದಾಯಿಕ ರೀತಿಯಲ್ಲಿ ಹಬ್ಬ ಆಚರಿಸಿದ್ದ ಈ ತಾರಾ ಜೋಡಿ, ನಂತರ ಚಿತ್ರಗಳನ್ನು ಹಂಚಿಕೊಂಡಿದ್ದರು. ಅವುಗಳೂ ಕೂಡ ಸಖತ್ ವೈರಲ್ ಆಗಿದ್ದವು.
ಕರೀನಾ ಹಂಚಿಕೊಂಡಿದ್ದ ದೀಪಾವಳಿ ಸಂದರ್ಭದ ಚಿತ್ರಗಳು:
ಕರೀನಾ ಬತ್ತಳಿಕೆಯಲ್ಲಿ ಪ್ರಸ್ತುತ ಅಮೀರ್ ಖಾನ್ ನಟನೆಯ ‘ಲಾಲ್ ಸಿಂಗ್ ಛಡ್ಡಾ’ ಚಿತ್ರವಿದೆ. ‘ಫಾರೆಸ್ಟ್ ಗಂಪ್’ ಚಿತ್ರದ ಅಧಿಕೃತ ರಿಮೇಕ್ ಆಘಿರುವ ಈ ಚಿತ್ರ ಬಹುಕೋಟಿ ವೆಚ್ಚದಲ್ಲಿ ತಯಾರಾಗುತ್ತಿದ್ದು, ಹಲವು ಖ್ಯಾತ ಕಲಾವಿದರು ಬಣ್ಣ ಹಚ್ಚುತ್ತಿದ್ದಾರೆ. ಚಿತ್ರ ಏಪ್ರಿಲ್ನಲ್ಲಿ ಬಿಡುಗಡೆಯಾಗುವ ನಿರೀಕ್ಷೆ ಇದೆ.
ಇದನ್ನೂ ಓದಿ:
ಹೊಟ್ಟೆಪಾಡಿಗೆ ಬಟ್ಟೆಬಿಚ್ಚಿ ಓಡಾಡೋರಿಗೆ ಏನು ಗೊತ್ತು ಗಾಂಧಿ ಮೌಲ್ಯ: ಕಂಗನಾ ಹೇಳಿಕೆಗೆ ರಮೇಶ್ಕುಮಾರ್ ವ್ಯಂಗ್ಯ
ಹಂಸಲೇಖ ಹೇಳಿಕೆ ಬೆಂಬಲಿಸಿದ ಪ್ರಗತಿಪರ ಸಂಘಟನೆಗಳು; ಅವರಿಗೆ ಭದ್ರತೆ ನೀಡುವಂತೆ ಮನವಿ