Karnataka Breaking Kannada News Live: RSS ಬ್ಯಾನ್ ನೆಹರೂರಿಂದಲೇ ಆಗಿಲ್ಲ, ಖರ್ಗೆಯಿಂದ ಆಗುತ್ತಾ?: ಬಿಜೆಪಿ ಶಾಸಕ ಚನ್ನಬಸಪ್ಪ | Kannada News | Breaking News Today Live Updates Karnataka Cabinet Expansion, Karnataka Weather Report Karnataka Rains Updates


TV9 Digital Desk

| Edited By: Rakesh Nayak Manchi

Updated on:May 26, 2023 | 9:17 AM

Weather Forecast, Breaking News Live Updates: ಕರ್ನಾಟಕ ರಾಜಕೀಯ ಬೆಳವಣಿಗೆಗಳ ಜೊತೆಗೆ ಬೆಂಗಳೂರು ಸೇರಿದಂತೆ ರಾಜ್ಯದಲ್ಲಿ ಮಳೆಯ ಅಬ್ಬರ ಜೋರಾಗಿದೆ. ಟಿವಿ9 ಡಿಜಿಟಲ್ ಲೈವ್ ಮೂಲಕ ರಾಜಕೀಯ ಹಾಗೂ ಮಳೆಯ ಕ್ಷಣ ಕ್ಷಣದ ಅಪ್​ಡೇಟ್ಸ್ ಪಡೆಯಿರಿ.

Karnataka Breaking Kannada News Live: RSS ಬ್ಯಾನ್ ನೆಹರೂರಿಂದಲೇ ಆಗಿಲ್ಲ, ಖರ್ಗೆಯಿಂದ ಆಗುತ್ತಾ?: ಬಿಜೆಪಿ ಶಾಸಕ ಚನ್ನಬಸಪ್ಪ

ಕರ್ನಾಟಕದ ರಾಜಕೀಯ ಬೆಳವಣಿಗೆಗಳು ಮತ್ತು ಕರ್ನಾಟಕ ಮಳೆ

LIVE NEWS & UPDATES

  • 26 May 2023 09:17 AM (IST)

    Karnataka Breaking Kannada News Live: ಆರ್​ಎಸ್​ಎಸ್ ಬ್ಯಾನ್ ಮಾಡಲು ಪ್ರಿಯಾಂಕ್ ಖರ್ಗೆಯಿಂದ ಸಾಧ್ಯವೇ?: ಬಿಜೆಪಿ ಶಾಸಕ ಚನ್ನಬಸಪ್ಪ

    ಬಜರಂಗದಳ, RSS ಸಂಘಟನೆ ನಿಷೇಧ ನೆಹರೂರಿಂದಲೇ ಆಗಲಿಲ್ಲ. ಇನ್ನು ಸಚಿವ ಪ್ರಿಯಾಂಕ್​​ ಖರ್ಗೆ ಅವರಿಂದ ಸಾಧ್ಯವೇ ಎಂದು ಚನ್ನಬಸಪ್ಪ ಅವರು ಶಿವಮೊಗ್ಗ ನಗರದಲ್ಲಿ ಬಿಜೆಪಿ ಶಾಸಕ ಚನ್ನಬಸಪ್ಪ ಹೇಳಿದ್ದಾರೆ. ಟಿವಿ9 ಜೊತೆ ಮಾತನಾಡಿದ ಅವರು, ಮನೆ ಮನೆಯಲ್ಲಿ ಹಿಂದುತ್ವ ಮತ್ತು ಆರ್​​ಎಸ್​​ಎಸ್ ಬೆರೆತು ಹೋಗಿದೆ. ಪ್ರಿಯಾಂಕ್​ ಖರ್ಗೆ ಇಂತಹ ಹೇಳಿಕೆ ನೀಡಿ ಗೊಂದಲ ಸೃಷ್ಟಿಸುತ್ತಿದ್ದಾರೆ ಎಂದರು. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ದ್ವೇಷದ ರಾಜಕಾರಣ ಮಾಡುತ್ತಿದೆ. ಅಶ್ವತ್ಥ್​ ನಾರಾಯಣ, ಕಾರ್ಯಕರ್ತರ ಮೇಲೆ ಕೇಸ್​ ದಾಖಲಾಗಿದೆ ಎಂದು ಆಕ್ರೋಶ ಹೊರಹಾಕಿದರು.

Karnataka Breaking Kannada News Live Updates: ಸರ್ಕಾರ ಅಧಿಕಾರಕ್ಕೆ ಬಂದಾಯ್ತು, ಸಿಎಂ ಆಗಿ ಸಿದ್ದರಾಮಯ್ಯ(Siddaramaiah), ಡಿಸಿಎಂ ಆಗಿ ಡಿಕೆ ಶಿವಕುಮಾರ್ (DK Shivakumar) ಆಯ್ಕೆ ಆಗಿದ್ದಾರೆ. ಆದ್ರೆ ಸಂಪುಟಕ್ಕೆ ಸೇರಿರೋದು ಮಾತ್ರ ಕೇವಲ 8 ಸಚಿವರು. ಇನ್ನೂ 18 ಶಾಸಕರು ಸಚಿವ ಸಂಪುಟಕ್ಕೆ ಸೇರಲಿದ್ದಾರೆ. ಇಂದು ಕೂಡ ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ಅವರು ತಮ್ಮ ಆಪ್ತರಿಗೆ ಸಚಿವ ಸ್ಥಾನ ನೀಡಲು ದೆಹಲಿಯಲ್ಲಿ ಪಕ್ಷದ ಉನ್ನತ ನಾಯಕರೊಂದಿಗೆ ಸರ್ಕಸ್ ನಡೆಸುತ್ತಿದ್ದಾರೆ. ಹೀಗಾಗಿ ಸಂಪುಟ ರಚನೆ ತಡವಾಗುತ್ತಿದೆ. ಅದಾಗ್ಯೂ, ನಾಳೆ ನೂತನ ಸಚಿವರ ಪ್ರಮಾಣವಚನ ಕಾರ್ಯಕ್ರಮಕ್ಕೆ ರಾಜ್ಯಪಾಲರಿಂದ ಗ್ರೀನ್ ಸಿಗ್ನಲ್ ಸಿಕ್ಕಿದೆ. ಇಂದು ರಾತ್ರಿಯೊಳಗೆ ಸಚಿವರ ಪಟ್ಟಿ ರಿಲೀಸ್ ಆಗುವ ಸಾಧ್ಯತೆ ಇದೆ. ಈ ರಾಜಕೀಯ ಬೆಳವಣಿಗೆಗಳ ಜೊತೆಗೆ ಬೆಂಗಳೂರು ಸೇರಿದಂತೆ ರಾಜ್ಯದಲ್ಲಿ ಮಳೆಯ ಅಬ್ಬರ ಜೋರಾಗಿದೆ (Bengaluru Rain). ಟಿವಿ9 ಡಿಜಿಟಲ್ ಲೈವ್ ಮೂಲಕ ರಾಜಕೀಯ ಹಾಗೂ ಮಳೆಯ ಕ್ಷಣ ಕ್ಷಣದ ಅಪ್​ಡೇಟ್ಸ್ ಪಡೆಯಿರಿ.

Published On – May 26,2023 9:14 AM

TV9 Kannada


Leave a Reply

Your email address will not be published. Required fields are marked *