Karnataka Election 2023: Kanakapura’s Bande DK Shivakumar from Maddur Constituency | Karnataka Election 2023: ಕನಕಪುರದ ಬಂಡೆ ಡಿ.ಕೆ.ಶಿವಕುಮಾರ್ ಮದ್ದೂರು ಕ್ಷೇತ್ರದಿಂದ ಕಣಕ್ಕೆ?


ಚುನಾವಣೆ ಹತ್ತಿರ ಬರುತ್ತಿದ್ದಂತೆ ಈಗಾಗಲೇ ಅದರ ಕಾವು ಜೋರಾಗಿದೆ. ಯಾರ್ಯಾರು ಯಾವ ಪಕ್ಷದ ಆಕಾಂಕ್ಷಿಗಳು, ಯಾವ ಚಿಹ್ನೆಯಿಂದ ಅಖಾಡಕ್ಕೆ ಇಳೀತಾರೆ ಎನ್ನುವುದೇ ದೊಡ್ಡ ಸಸ್ಪೆನ್ಸ್ ಆಗಿದೆ.

Karnataka Election 2023: ಕನಕಪುರದ ಬಂಡೆ ಡಿ.ಕೆ.ಶಿವಕುಮಾರ್ ಮದ್ದೂರು ಕ್ಷೇತ್ರದಿಂದ ಕಣಕ್ಕೆ?

ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್​

ಮಂಡ್ಯ: ವಿಧಾನ ಸಭಾ ಚುನಾವಣೆಗೆ ಕೆಲವೇ ಕೆಲವು ತಿಂಗಳುಗಳು ಮಾತ್ರ ಬಾಕಿ ಇದೆ. ಇನ್ನು ಚುನಾವಣಾ ದಿನಾಂಕ ಘೋಷಣೆ ಮಾಡಿಯೇ ಇಲ್ಲಾ. ಅಷ್ಟರಲ್ಲಾಗಲೇ ಚದುರಂಗದ ಆಟಗಳು ಶುರುವಾಗಿದೆ. ಜಿಲ್ಲೆಯ ಮೇಲೆ ಈಗಾಗಲೇ ಬಿಜೆಪಿ ಹೈಕಮಾಂಡ್ ಕಣ್ಣಿಟ್ಟಿದ್ದು, ಶತಾಯ ಗತಾಯ ಜೆಡಿಎಸ್ ಭದ್ರ ಕೋಟೆಯಲ್ಲಿ ಕಮಲ ಅರಳಿಸಲೇ ಬೇಕೆಂದು ಶಪಥ ಮಾಡಿದೆ. ಇತ್ತ ಕಾಂಗ್ರೆಸ್ ಕೂಡ ತಮ್ಮ ಹಳೆಯ ಭದ್ರ ಕೋಟೆಯನ್ನ ಉಳಿಸಿ ಕೊಳ್ಳುವ ಪ್ಲಾನ್ ಮಾಡಿದೆ. ಅದಕ್ಕಾಗಿ ಕೆಪಿಸಿಸಿ ಅದ್ಯಕ್ಷ ಡಿ.ಕೆ ಶಿವಕುಮಾರ್(D. K. Shivakumar)​ರನ್ನ ಮದ್ದೂರಿನಲ್ಲಿ ಕಣಕ್ಕೆ ಇಳಿಸಲು ಮುಂದಾಗಿದೆ. ನಿನ್ನೆ ಡಿಕೆಶಿ ಮನೆಗೆ ಭೇಟಿ ಕೊಟ್ಟ ಮಂಡ್ಯ ಕೈ ನಾಯಕರು ಡಿಕೆಶಿಯನ್ನ ಮದ್ದೂರು ವಿಧಾನಸಭಾ ಕ್ಷೇತ್ರದಿಂದ ಕಣಕಿಳಿಯುವಂತೆ ಮನವಿ ಮಾಡಿಕೊಂಡಿದ್ದಾರೆ.

ಚುನಾವಣೆ ಹತ್ತಿರ ಬರುತ್ತಿದ್ದಂತೆ ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಸೇರಿದಂತೆ ಮೂರು ಪಕ್ಷಗಳು ತಮ್ಮದೆಯಾದಂತ ಸ್ಟ್ಯಾಟರ್ಜಿ ಶುರು ಮಾಡಿಕೊಂಡಿದೆ. ಯಾರ್ಯಾರು ಯಾವ ಪಕ್ಷದ ಆಕಾಂಕ್ಷಿಗಳು, ಯಾವ ಚಿಹ್ನೆಯಿಂದ ಅಖಾಡಕ್ಕೆ ಇಳೀತಾರೆ ಅನ್ನೋದೆ ದೊಡ್ಡ ಸಸ್ಪೆನ್ಸ್ ಆಗಿದೆ. ಅದರಲ್ಲೂ ಪಕ್ಷೇತರ ಅಭ್ಯರ್ಥಿಗಳು ಈಗಾಗ್ಲೆ ರೊಚ್ಚಿಗೆದ್ದು ಪ್ರಚಾರ ಕಾರ್ಯ ಶುರು ಮಾಡಿದ್ದಾರೆ. ಇಂತಹ ಸಮಯದಲ್ಲಿ ನಾಗಮಂಗಲದ ಪಕ್ಷೇತರ ಅಭ್ಯರ್ಥಿ ಎಲ್.ಆರ್ ಶಿವರಾಮೇಗೌಡ ನಾಗಮಂಗಲ ಕ್ಷೇತ್ರದಿಂದ ಅಧಿಕೃತವಾಗಿ ಕಣಕ್ಕೆ ಇಳಿದಿದ್ದಾರೆ. ಈ ಮಧ್ಯೆ ಇದ್ದಕ್ಕಿದ್ದಂತೆ ಕೆಪಿಸಿಸಿ ಅದ್ಯಕ್ಷ ಡಿ.ಕೆ ಶಿವಕುಮಾರ್​ರನ್ನ ಭೇಟಿ ಮಾಡಿದ್ದು ಈಗ ರಾಜಕೀಯ ವಲಯದಲ್ಲಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.

ತಾಜಾ ಸುದ್ದಿ

TV9 Kannada


Leave a Reply

Your email address will not be published. Required fields are marked *