Karnataka Government has canceled the BDA home of Padma Shri awardee Tamate artist Munivenkatappa | Munivenkatappa: ಅತ್ತ ಪದ್ಮಶ್ರೀ ನೀಡಿದ ಕೇಂದ್ರ, ಇತ್ತ ಬಿಡಿಎ ಸೈಟ್ ಕಿತ್ತುಕೊಂಡ ರಾಜ್ಯ: ಮುನಿವೆಂಕಟಪ್ಪಗೆ ಸಿಹಿ ಕಹಿ


Padma shri: ದೇಶದ ಅತ್ಯನ್ನತ ನಾಗರಿಕ ಪ್ರಶಸ್ತಿಗಳಿಲ್ಲಿ ಒಂದಾದ ಪದ್ಮಶ್ರೀ ಪ್ರಶಸ್ತಿ ಪಡೆದ ತಮಟೆ ಕಲಾವಿದ ಮುನಿವೆಂಕಟಪ್ಪ ಅವರ ಬಿ.ಡಿ.ಎನ ಜೆ-ಕ್ಯಾಟಗರಿ ನಿವೇಶನವನ್ನು ರಾಜ್ಯ ಸರ್ಕಾರ ರದ್ದು ಮಾಡಿದೆ.

Munivenkatappa: ಅತ್ತ ಪದ್ಮಶ್ರೀ ನೀಡಿದ ಕೇಂದ್ರ, ಇತ್ತ ಬಿಡಿಎ ಸೈಟ್ ಕಿತ್ತುಕೊಂಡ ರಾಜ್ಯ: ಮುನಿವೆಂಕಟಪ್ಪಗೆ ಸಿಹಿ ಕಹಿ

ಮುನಿವೆಂಟಪ್ಪ (ಎಡಚಿತ್ರ) ಬಿಡಿಎ (ಬಲಚಿತ್ರ)

ಚಿಕ್ಕಬಳ್ಳಾಪುರ: ದೇಶದ ಅತ್ಯನ್ನತ ನಾಗರಿಕ ಪ್ರಶಸ್ತಿಗಳಿಲ್ಲಿ ಒಂದಾದ ಪದ್ಮಶ್ರೀ ಪ್ರಶಸ್ತಿಯನ್ನು (Padma Shri ) ಕೇಂದ್ರ ಸರ್ಕಾರ ರಾಜ್ಯದ ಬಡ ದಲಿತ ಖ್ಯಾತ ತಮಟೆ ಕಲಾವಿದ ಪಿಂಡಿಪಾಪನಹಳ್ಳಿ ಮುನಿವೆಂಕಟಪ್ಪಗೆ (Munivenkatappa) ಘೋಷಣೆ ಮಾಡಿದೆ. ಆದರೆ ರಾಜ್ಯ ಸರ್ಕಾರದ ಬಿ.ಡಿ.ಎ, ಮುನಿವೆಂಕಟಪ್ಪಗೆ ಮಂಜೂರಾಗಿದ್ದ ಜೆ-ಕ್ಯಾಟಗರಿ ನಿವೇಶನವನ್ನು ರದ್ದು ಮಾಡಿದೆ.

ಮುನಿವೆಂಕಟಪ್ಪಗೆ ಬಿ.ಡಿ.ಎ ನಿವೇಶನ ಮಂಜೂರಾಗಿತ್ತು

ಚಿಕ್ಕಬಳ್ಳಾಪುರ ಜಿಲ್ಲೆ ಶಿಡ್ಲಘಟ್ಟ ತಾಲೂಕಿನ ಕುಗ್ರಾಮ ಪಿಂಡಿಪಾಪನಹಳ್ಳಿ ಗ್ರಾಮದ ನಿವಾಸಿ ಮುನಿವೆಂಕಟಪ್ಪಗೆ ರಾಜ್ಯ ಸರ್ಕಾರ 26/2/2016ರಲ್ಲಿ ಕೆಂಪೇಗೌಡ ಬಡಾವಣೆಯ ಬಿ4 ಬ್ಲಾಕ್​ನ ಎ ಸೇಕ್ಟರ್​ನಲ್ಲಿ 6 ಇನ್ ಟು 9 ಮೀಟರ್​ನ (ಇ.ಡ್ಲೂ.ಎಸ್) ಜೆ-ಕ್ಯಾಟಗರಿಯ ನಿವೇಶನ ಸಂಖ್ಯೆ 70ನ್ನು ಮಂಜೂರು ಮಾಡಿತ್ತು. ಹಕ್ಕು ಪತ್ರನ್ನೂ ಕೊಡಲಾಗಿತ್ತು.

ತಾಜಾ ಸುದ್ದಿ

TV9 Kannada


Leave a Reply

Your email address will not be published. Required fields are marked *