Karnataka Govt: ತರಾತುರಿ ನೇಮಕ, ನಂತರ ರದ್ದು; 21 ಟ್ರಸ್ಟ್​ಗಳಿಗೆ ನೇಮಕಾತಿ ಆದೇಶ ಹಿಂಪಡೆದ ಸರ್ಕಾರ | Karnataka Govt Cancels Appointment of President and Members for 21 Trusts


ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಡಿ ಕಾರ್ಯನಿರ್ವಹಿಸುತ್ತಿರುವ 21 ಟ್ರಸ್ಟ್​ಗಳಿಗೆ ಹೊಸ ಅಧ್ಯಕ್ಷರು ಮತ್ತು ಸದಸ್ಯರನ್ನು ನೇಮಿಸಿ ಹೊರಡಿಸಿದ್ದ ಆದೇಶವನ್ನು ಸರ್ಕಾರ ರದ್ದುಪಡಿಸಿದೆ.

Karnataka Govt: ತರಾತುರಿ ನೇಮಕ, ನಂತರ ರದ್ದು; 21 ಟ್ರಸ್ಟ್​ಗಳಿಗೆ ನೇಮಕಾತಿ ಆದೇಶ ಹಿಂಪಡೆದ ಸರ್ಕಾರ

ಕನ್ನಡ ಮತ್ತು ಸಂಸ್ಕೃತಿ ಇಲಾಖೆ (ಸಂಗ್ರಹ ಚಿತ್ರ)

TV9kannada Web Team

| Edited By: Ghanashyam D M | ಡಿ.ಎಂ.ಘನಶ್ಯಾಮ

Aug 25, 2022 | 1:41 PM




ಬೆಂಗಳೂರು: ಇದ್ದಕ್ಕಿದ್ದಂತೆ ಆದೇಶ ಹೊರಡಿಸಿ ಜನರಿಂದ ಆಕ್ರೋಶ ವ್ಯಕ್ತವಾದ ತಕ್ಷಣ ಅದನ್ನು ಹಿಂದಕ್ಕೆ ಪಡೆಯುವುದು ರಾಜ್ಯ ಸರ್ಕಾರದ ಕಾರ್ಯವೈಖರಿಯ ಭಾಗವೇ ಆದಂತೆ ಇದೆ. ಈ ಹಿಂದೆ ಸರ್ಕಾರಿ ಕಚೇರಿಗಳಲ್ಲಿ ವಿಡಿಯೊ ಚಿತ್ರೀಕರಣ, ಛಾಯಾಗ್ರಹಣ ನಿಷೇಧಿಸಿ ಆದೇಶ ಹೊರಡಿಸಿದ್ದ ರಾಜ್ಯ ಸರ್ಕಾರ ನಂತರ ಅದನ್ನು ಹಿಂಪಡೆದಿತ್ತು. ಇದೀಗ ನಿನ್ನೆಯಷ್ಟೇ (ಆಗಸ್ಟ್​ 24) ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಡಿ ಕಾರ್ಯನಿರ್ವಹಿಸುತ್ತಿರುವ 21 ಟ್ರಸ್ಟ್​ಗಳಿಗೆ ಹೊಸ ಅಧ್ಯಕ್ಷರು ಮತ್ತು ಸದಸ್ಯರನ್ನು ನೇಮಿಸಿ ಹೊರಡಿಸಿದ್ದ ಆದೇಶವನ್ನು ಸರ್ಕಾರ ರದ್ದುಪಡಿಸಿದೆ. ನೇಮಕಾತಿಗೆ ಮೊದಲು ತಮ್ಮನ್ನು ಸಂಪರ್ಕಿಸಿ ಸಹಮತ ಪಡೆದಿರಲಿಲ್ಲ ಎಂದು ಬರಹಗಾರ ನರೇಂದ್ರ ರೈ ದೇರ್ಲ ಆಕ್ಷೇಪಿಸಿದ್ದರು. ‘ವೈಯಕ್ತಿಕ ಕಾರಣದಿಂದ ಸರ್ಕಾರದ ನೇಮಕಾತಿ ಒಪ್ಪಲು ಸಾಧ್ಯವಿಲ್ಲ. ಸರ್ಕಾರವು ಆದೇಶ ಹೊರಡಿಸುವ ಮೊದಲೇ ಸಂಪರ್ಕಿಸಿದ್ದರೆ ಇಂಥ ಮುಜುಗರದ ಸನ್ನಿವೇಶ ಎದುರಾಗುತ್ತಿರಲಿಲ್ಲ’ ಎಂದು ಖೇದ ವ್ಯಕ್ತಪಡಿಸಿದ್ದರು.

(ಮತ್ತಷ್ಟು ಮಾಹಿತಿ ಶೀಘ್ರ ಅಪ್​ಡೇಟ್ ಆಗಲಿದೆ)

ತಾಜಾ ಸುದ್ದಿ

TV9 Kannada


Leave a Reply

Your email address will not be published.