Karnataka MLC Election: ಪಶ್ಚಿಮ ಶಿಕ್ಷಕರ ಕ್ಷೇತ್ರದಲ್ಲಿ 8ನೇ ಬಾರಿಗೆ ಬಸವರಾಜ ಹೊರಟ್ಟಿ ಭರ್ಜರಿ ಗೆಲುವು | Karnataka MLC Election Results BJP candidate Basavaraj Horrati won West Teachers Constituency


Karnataka MLC Election: ಪಶ್ಚಿಮ ಶಿಕ್ಷಕರ ಕ್ಷೇತ್ರದಲ್ಲಿ 8ನೇ ಬಾರಿಗೆ ಬಸವರಾಜ ಹೊರಟ್ಟಿ ಭರ್ಜರಿ ಗೆಲುವು

ಬಸವರಾಜ ಹೊರಟ್ಟಿ

ಪಶ್ಚಿಮ ಶಿಕ್ಷಕರ ಚುನಾವಣೆ ಫಲಿತಾಂಶ ಪ್ರಕಟವಾಗಿದ್ದು, ಬಸವರಾಜ್ ಹೊರಟ್ಟಿ ಮತ್ತೊಮ್ಮೆ ಗೆದ್ದು ಬೀಗಿದ್ದಾರೆ. 8ನೇ ಬಾರಿಗೆ ಗೆಲುವು ತನ್ನದಾಗಿಸಿಕೊಂಡ ಬಸವರಾಜ್ ಹೊರಟ್ಟಿ ಅವರ ಅಭಿಮಾನಿಗಳು ಈಗಾಗಲೇ ಸಂಭ್ರಮಾಚರಣೆ ನಡೆಸುತ್ತಿದ್ದಾರೆ.

ಬೆಳಗಾವಿ: ಪಶ್ಚಿಮ ಶಿಕ್ಷಕರ ಕ್ಷೇತ್ರದಲ್ಲಿ ಸತತ 8ನೇ ಬಾರಿಗೆ ಬಸವರಾಜ ಹೊರಟ್ಟಿ (Basavaraj Horatti) ಗೆಲುವು ಸಾಧಿಸಿದ್ದಾರೆ. ಚುನಾವಣಾ ಆಯೋಗದಿಂದ ಅಧಿಕೃತ ಘೋಷಣೆ ಮಾತ್ರ ಬಾಕಿ ಉಳಿದಿದೆ. ಪ್ರಥಮ ಪ್ರಾಶಸ್ತ್ಯದ ಮತಗಳಲ್ಲೇ ಗೆದ್ದು ಬೀಗಿದ ಬಸವರಾಜ ಹೊರಟ್ಟಿ ಗೆಲುವಿನ ನಗು ಬೀರಿದ್ದಾರೆ. ಬಸವರಾಜ ಹೊರಟ್ಟಿಯ ದಿಗ್ವಿಜಯದಿಂದ ಕಾಂಗ್ರೆಸ್​ ಪಕ್ಷದ ಅಭ್ಯರ್ಥಿ ಬಸವರಾಜ್ ಗುರಿಕಾರ, ಜೆಡಿಎಸ್‌ ಪಕ್ಷದ ಅಭ್ಯರ್ಥಿ ಶ್ರೀಶೈಲ ಗಿಡದಿನ್ನಿಗೆ ಮುಖಭಂಗವಾಗಿದೆ.

ಪಶ್ಚಿಮ ಶಿಕ್ಷಕರ ಚುನಾವಣೆ ಫಲಿತಾಂಶ ಪ್ರಕಟವಾಗಿದ್ದು, ಬಸವರಾಜ್ ಹೊರಟ್ಟಿ ಮತ್ತೊಮ್ಮೆ ಗೆದ್ದು ಬೀಗಿದ್ದಾರೆ. 8ನೇ ಬಾರಿಗೆ ಗೆಲುವು ತನ್ನದಾಗಿಸಿಕೊಂಡ ಬಸವರಾಜ್ ಹೊರಟ್ಟಿ ಅವರ ಅಭಿಮಾನಿಗಳು ಈಗಾಗಲೇ ಸಂಭ್ರಮಾಚರಣೆ ನಡೆಸುತ್ತಿದ್ದಾರೆ.

ಪಶ್ಚಿಮ ಶಿಕ್ಷಕರ ಕ್ಷೇತ್ರ ಚುನಾವಣೆಯಲ್ಲಿ ಬಸವರಾಜ ಹೊರಟ್ಟಿ ಗೆದ್ದ ಹಿನ್ನೆಲೆಯಲ್ಲಿ ಬಸವರಾಜ್ ಹೊರಟ್ಟಿ ಅಭಿಮಾನಿಗಳಿಂದ ಬೆಳಗಾವಿಯಲ್ಲಿ ವಿಜಯೋತ್ಸವ ನಡೆಸಲಾಗುತ್ತಿದೆ. ಮತ ಎಣಿಕೆ ಕೇಂದ್ರದ ಹೊರಗಡೆ ವಿಜಯೋತ್ಸವ ನಡೆಯುತ್ತಿದೆ. ಬಸವರಾಜ ಹೊರಟ್ಟಿ ಅವರ ಭಾವಚಿತ್ರ ಹಿಡಿದು, ಅವರ ಪರ ಘೋಷಣೆ ಕೂಗಿ ಸಂಭ್ರಮಿಸುತ್ತಿದ್ದಾರೆ.

TV9 Kannada


Leave a Reply

Your email address will not be published.