Karnataka Polls Bengaluru Central BJP unit Canceled silent Sunil’s BJP membership details in kannada | Silent Sunil: ಬೆಂಗಳೂರು ಕೇಂದ್ರ ಬಿಜೆಪಿ ಘಟಕದಿಂದ ಸೈಲೆಂಟ್ ಸುನೀಲ್ ಸದಸ್ಯತ್ವ ರದ್ದು


ರೌಡಿಸಂ ಹಿನ್ನಲೆಯಿರುವ ಸೋಕಾಲ್ಡ್ ಡಾನ್​ಗಳು ರಾಜಕೀಯಕ್ಕೆ ಎಂಟ್ರಿ ಕೊಡುತ್ತಿದ್ದು, ಈ ಪೈಕಿ ಸೈಲೆಂಟ್ ಸುನೀಲ ಕೂಡ ಒಬ್ಬನಾಗಿದ್ದು, ಬಿಜೆಪಿ ಸದಸ್ಯತ್ವ ಪಡೆದಿದ್ದ. ಇದೀಗ ಆತನ ಬಿಜೆಪಿ ಸದಸ್ಯತ್ವವನ್ನು ಬೆಂಗಳೂರು ಕೇಂದ್ರ ಬಿಜೆಪಿ ಘಟಕ ರದ್ದುಗೊಳಿಸಿದೆ.

Silent Sunil: ಬೆಂಗಳೂರು ಕೇಂದ್ರ ಬಿಜೆಪಿ ಘಟಕದಿಂದ ಸೈಲೆಂಟ್ ಸುನೀಲ್ ಸದಸ್ಯತ್ವ ರದ್ದು

ಸೈಲೆಂಟ್ ಸುನೀಲನ ಬಿಜೆಪಿ ಸದಸ್ಯತ್ವ ರದ್ದು

ಬೆಂಗಳೂರು: ರೌಡಿಸಂ ಹಿನ್ನಲೆಯಿರುವ ಸೋಕಾಲ್ಡ್ ಡಾನ್​ಗಳು ರಾಜಕೀಯಕ್ಕೆ ಎಂಟ್ರಿ ಕೊಡುತ್ತಿದ್ದು, ಈ ಪೈಕಿ ಸೈಲೆಂಟ್ ಸುನೀಲ (Silent Sunila) ಕೂಡ ಒಬ್ಬನಾಗಿದ್ದು, ಬಿಜೆಪಿ ಸದಸ್ಯತ್ವ ಪಡೆದಿದ್ದ. ಇದೀಗ ಆತನ ಬಿಜೆಪಿ ಸದಸ್ಯತ್ವವನ್ನು ಬೆಂಗಳೂರು ಕೇಂದ್ರ ಬಿಜೆಪಿ ಘಟಕ ರದ್ದುಗೊಳಿಸಿದೆ. ಸುನೀಲ್ ಬಿಜೆಪಿ (BJP Karnataka) ಸೇರಿದ್ದ ಬಗ್ಗೆ ಫೋಟೋ ವೈರಲ್ ಬೆನ್ನಲ್ಲೇ ಈ ಕ್ರಮ ಕೈಗೊಳ್ಳಲಾಗಿದ್ದು, ಸುನೀಲ್ ಹೆಸರಿನ ಸದಸ್ಯತ್ವಕ್ಕೂ ಬಿಜೆಪಿಗೂ ಸಂಬಂಧವೇ ಇಲ್ಲ ಎಂದು ಬೆಂಗಳೂರು ಕೇಂದ್ರ ಬಿಜೆಪಿ ಅಧ್ಯಕ್ಷ ಮಂಜುನಾಥ್ ಸ್ಪಷ್ಟನೆ ನೀಡಿದ್ದಾರೆ. ಈ ಬಗ್ಗೆ ಟಿವಿ9 ಜೊತೆ ಮಾಹಿತಿ ಹಂಚಿಕೊಂಡ ಅವರು, ಸೈಲೆಂಟ್ ಸುನೀಲನನ್ನು ಬಿಜೆಪಿಗೆ ಸೇರ್ಪಡೆ ಮಾಡಿಕೊಂಡಿಲ್ಲ. ಸದಸ್ಯತ್ವ ನೋಂದಣಿ ವೇಳೆ ಆನ್‌ಲೈನ್‌ ಮೂಲಕ ಬಿಜೆಪಿ ಸದಸ್ಯತ್ವ ಪಡೆದಿದ್ದನು. ಈ ಸದಸ್ಯತ್ವವನ್ನು ಬೆಂಗಳೂರು ಕೇಂದ್ರ ಘಟಕದಿಂದ ರದ್ದುಪಡಿಸಿದ್ದೇವೆ. ಸುನೀಲ್ ಸದಸ್ಯತ್ವ ರದ್ದಿನ ಬಗ್ಗೆ ರಾಜ್ಯ ಘಟಕಕ್ಕೂ ಶಿಫಾರಸು ಮಾಡಲಾಗಿದೆ. ಈ ರೀತಿಯ ಘಟನೆಯಿಂದ ಬಿಜೆಪಿಗೂ ಮುಜುಗರವಾಗಿದೆ ಎಂದರು.

ರೌಡಿಸಂ ಹಾಗೂ ರಾಜಕಾರಣ ಯಾವಾಗಲೂ ಜೊತೆಜೊತೆಗೆ ಹೆಜ್ಜೆ ಹಾಕುತ್ತವೆ. ರಾಜಕೀಯ ತೆರೆಯ ಮುಂದಿನ ಕೆಲಸ ಮಾಡಿದರೆ, ರೌಡಿಸಂ ತೆರೆಯ ಹಿಂದಿನ ಕೆಲಸ ಮಾಡುತ್ತದೆ. ರೌಡಿಸಂ ಹಿನ್ನೆಲೆಯಿರುವ ಸೋಕಾಲ್ಡ್ ಡಾನ್​ಗಳು ಈಗ ರಾಜಕೀಯಕ್ಕೆ ಬರಲು ಮುಂದಾಗಿದ್ದಾರೆ. ಇಂಥವರ ಪೈಕಿ ಸೈಲೆಂಟ್ ಸುನೀಲ ಸಹ ಒಬ್ಬನಾಗಿದ್ದನು.

ಒಂದು ಕಾಲದ ಗೂಂಡಾ, ರೌಡಿಶೀಟರ್ ಹಾಗೂ ಬೆಂಗಳೂರಿನಲ್ಲಿ ಹವಾ ಇಟ್ಟಿದ್ದ ಸೈಲೆಂಟ್ ಸುನೀಲ ಈಗ ಸೈಲೆಂಟಾಗಿ ರೌಡಿ ಪಟ್ಟದಿಂದ ರಾಜಕೀಯ ಪುಢಾರಿ ಪಟ್ಟಕ್ಕೆ ಏರಿ ಕೂರಲು ಸಜ್ಜಾಗಿ ನಿಂತಿದ್ದ. ಅದಕ್ಕೆ ಸಾಕ್ಷಿ ಬೆಂಗಳೂರಿನ ಚಾಮರಾಜಪೇಟೆಯಲ್ಲಿ ನಡೆದ ರಕ್ತದಾನ ಶಿಬಿರ ಕಾರ್ಯಕ್ರಮ. ಸದ್ಯ ಚಾಮರಾಜಪೇಟೆಯಲ್ಲಿ ಕಾಂಗ್ರೆಸ್​ನ ಪ್ರಭಾವಿ ಶಾಸಕ ಜಮೀರ್ ಎದುರಿಗೆ ಭವಿಷ್ಯ ಕಟ್ಟಿಕೊಳ್ಳಲು ಸೈಲೆಂಟಾಗಿ ಸುನೀಲ ಸ್ಕೆಚ್ ಹಾಕಿದ್ದ. ಇದು ಬೆಂಗಳೂರಿನ ಮಟ್ಟಿಗೆ ಭಾರಿ ಸಂಚಲನದ ಜೊತೆಗೆ ವಿವಾದವನ್ನೂ ಸೃಷ್ಟಿಸಿತ್ತು.

TV9 Kannada


Leave a Reply

Your email address will not be published. Required fields are marked *