Karnataka PUC Exam: ಇಂದಿನಿಂದ ಪಿಯು ಪರೀಕ್ಷೆಗಳು ಆರಂಭ, ಹಿಜಾಬ್ ಬದಿಗಿಟ್ಟು ಪರೀಕ್ಷೆಗೆ ಹಾಜರಾಗ್ತಾರಾ ವಿದ್ಯಾರ್ಥಿನಿಯರು? | Karnataka 2nd PUC Exam 2022 starts from today april 22


Karnataka PUC Exam: ಇಂದಿನಿಂದ ಪಿಯು ಪರೀಕ್ಷೆಗಳು ಆರಂಭ, ಹಿಜಾಬ್ ಬದಿಗಿಟ್ಟು ಪರೀಕ್ಷೆಗೆ ಹಾಜರಾಗ್ತಾರಾ ವಿದ್ಯಾರ್ಥಿನಿಯರು?

ದ್ವಿತೀಯ ಪಿಯು ಎಕ್ಸಾಂ ಸಿದ್ಧತೆ

ಬೆಂಗಳೂರು: ಹಿಜಾಬ್(Hijab) ಗೊಂದಲದ ನಡುವೆಯೇ SSLC#SSLC 2022 Exam) ಪರೀಕ್ಷೆ ಮುಗೀತು. ಈಗ ಇಂದಿನಿಂದ ಸೆಕೆಂಡ್ ಪಿಯುಸಿ(Karnataka PUC Exam) ಪರೀಕ್ಷೆಗಳು ಆರಂಭವಾಗ್ತಿದೆ. ಶಿಕ್ಷಣ ಇಲಾಖೆಗೆ ಮತ್ತೊಂದು ಟೆನ್ಷನ್ ಶುರುವಾಗಿದ್ದು, ಪರೀಕ್ಷೆ ಹೇಗೆ ನಡೆಯಲಿದೆ ಅನ್ನೊ ಗೊಂದಲ ಕಾಡ್ತಿದೆ. ದ್ವಿತೀಯ ಪಿಯು ಎಕ್ಸಾಂ ಇಂದಿನಿಂದ ಆರಂಭವಾಗ್ತಿದೆ. ವಿದ್ಯಾರ್ಥಿಗಳು ಹೊಸ ಹುಮ್ಮಸ್ಸಿನಿಂದ ಪರೀಕ್ಷೆಗೆ ಸಿದ್ಧರಾಗಿದ್ದಾರೆ. ಆದ್ರೆ ಇಂದಿನ ಎಕ್ಸಾಂ ಶಿಕ್ಷಣ ಇಲಾಖೆಗೆ ದೊಡ್ಡ ಸವಾಲಾಗಿದೆ. ಪರೀಕ್ಷೆ ಮೇಲೆ ಹಿಜಾಬ್ ಕರಿನೆರಳು ಬೀಳುವ ಆತಂಕ ಎದುರಾಗಿದೆ.

ಪರೀಕ್ಷಾ ಕೇಂದ್ರಗಳಿಗೆ ಹಿಜಾಬ್ ಧರಿಸಿ ಬಂದ್ರೆ ನೋ ಎಂಟ್ರಿ
ದ್ವೀತಿಯ ಪಿಯು ಪರೀಕ್ಷೆ.. ಮಕ್ಕಳ ಭವಿಷ್ಯಕ್ಕೆ ಈ ಪರೀಕ್ಷೆ ತುಂಬಾ ಮುಖ್ಯ. ಇಂದಿನಿಂದ ಮೇ 18ರವರೆಗೆ ಎಕ್ಸಾಂಗಳು ನಡೆಯುತ್ತಿದ್ದು, ಪರೀಕ್ಷಾ ಕೇಂದ್ರಗಳಲ್ಲಿ ಸಿದ್ಧತೆ ಮಾಡಲಾಗಿದೆ. ಹಾಗೇ SSLC ರೀತಿಯಲ್ಲಿ ಪಿಯು ಪರೀಕ್ಷೆಗೂ ಸಮವಸ್ತ್ರ ನಿಯಮ ಜಾರಿಯಲ್ಲಿರಲಿದೆ. ಹಿಜಾಬ್ ಧರಿಸಿ ಬಂದ್ರೆ ಪರೀಕ್ಷೆಗೆ ಅವಕಾಶ ಇಲ್ಲ. ಹೀಗಾಗಿ ಪರೀಕ್ಷಾರ್ಥಿಗಳಿಗೆ ಸಮವಸ್ತ್ರ ಪಾಲನೆ ನಿಯಮ ಕಡ್ಡಾಯವಾಗಿದೆ. ಈಗಾಗ್ಲೇ ಆಯಾ ಕಾಲೇಜುಗಳ ಕಾಲೇಜು ಅಭಿವೃದ್ಧಿ ಕಮಿಟಿಗಳಿಗೆ ಸೂಚನೆ ನೀಡಿದ್ದು, ಕೋರ್ಟ್ ಆದೇಶವನ್ನ ಕಟ್ಟುನಿಟ್ಟಾಗಿ ಪಾಲಿಸುವಂತೆ ಸೂಚಿಸಲಾಗಿದೆ ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆ ನಿರ್ದೇಶಕ ಆರ್. ರಾಮಚಂದ್ರನ್ ಹೇಳಿದ್ದಾರೆ.

ಇನ್ನು ಈ ಬಾರಿ ರಾಜ್ಯಾದ್ಯಂತ ಒಟ್ಟು 1,076 ಕೇಂದ್ರಗಳಲ್ಲಿ ಪರೀಕ್ಷೆಗೆ ವ್ಯವಸ್ಥೆ ಮಾಡಿದ್ದು, ಆರೂವರೆ ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ.. ಇನ್ನು ಎಕ್ಸಾಂ ಕೇಂದ್ರದ ಸುತ್ತ 144 ಸೆಕ್ಷನ್ ಹಾಕಲಾಗಿದ್ದು, 200 ಮೀಟರ್ ನಿಷೇಧಾಜ್ಞೆ ಜಾರಿಯಾಗಿದೆ. ಪರೀಕ್ಷೆ ಹಾಲ್ ಟಿಕೆಟ್ ತೋರಿಸಿ KSRTC ಹಾಗೂ BMTC ಬಸ್ಗಳಲ್ಲಿ ಉಚಿತ ಪ್ರಯಾಣ ಮಾಡಬಹುದಾಗಿದೆ. ನಾಳೆಯ ಪರೀಕ್ಷೆಗೆ ವಿದ್ಯಾರ್ಥಿಗಳು ಸ್ವಲ್ಪ ಟೆನ್ಷನ್ನಲ್ಲೇ ತಯಾರಾಗಿದ್ದಾರೆ.

ಹಿಜಾಬ್ ಬದಿಗಿಟ್ಟು ಅಂತಿಮ ಪರೀಕ್ಷೆಗೆ ಹಾಜರಾಗ್ತಾರಾ ವಿದ್ಯಾರ್ಥಿನಿಯರು?
ಕೋರ್ಟ್ ಮೆಟ್ಟಿಲೇರಿದ್ದ ವಿದ್ಯಾರ್ಥಿನಿಯರ ನಡೆ ತೀವ್ರ ಕುತೂಹಲ ಕೆರಳಿಸಿದೆ. ಪ್ರಾಯೋಗಿಕ ಪರೀಕ್ಷೆಯಿಂದ ದೂರ ಉಳಿದವರು ಅಂತಿಮ ಪರೀಕ್ಷೆ ಬರೆಯುತ್ತಾರಾ? ಅಥವಾ ಅಂತಿಮ ಪರೀಕ್ಷೆಯಿಂದಲೂ ಅಂತರ ಕಾಯ್ದುಕೊಳ್ತಾರಾ? ಭವಿಷ್ಯದಲ್ಲಿ ಪರೀಕ್ಷೆ ಮುಖ್ಯ ಅಂತ ಇಂದಿನ ಪರೀಕ್ಷೆಗೆ ಹಾಜರಾಗ್ತಾರಾ? ಹಿಜಾಬೇ ಬೇಕು ಅಂತ ದೂರು ಉಳಿಯುತ್ತಾರಾ? ಎಂಬ ನಾನಾ ಪ್ರೆಶ್ನೆಗಳು ಉದ್ಭವಿಸಿವೆ. ಇನ್ನು SSLC ಪರೀಕ್ಷೆಗೆ ಸಾವಿರಾರು ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಗೈರಾಗಿದ್ದರು. ಗೈರಾದವರಿಗೂ ಹಿಜಾಬ್ ಗೂ ಯಾವುದೇ ಸಂಬಂಧವಿಲ್ಲ ಎಂದು ಶಿಕ್ಷಣ ಇಲಾಖೆ ಹೇಳಿತ್ತು.

ವಿಷಯವಾರು ಗೈರಾದ ವಿದ್ಯಾರ್ಥಿಗಳ ವಿವರ
ವಿಷಯ ನೊಂದಣಿ ಗೈರು
-ಪ್ರಥಮ ಭಾಷೆ 8,96,399 20,994
-ದ್ವಿತೀಯ ಭಾಷೆ 8,68,206 22,063
-ಗಣಿತ 8,72,525 25,144
-ಸಮಾಜ ವಿಜ್ಞಾನ 8,70,429 24,873
-ತೃತೀಯ ಭಾಷೆ 8,67,215 24,868
-ವಿಜ್ಞಾನ 8,17,994 25,526

TV9 Kannada


Leave a Reply

Your email address will not be published. Required fields are marked *