Karnataka Ranji Team: ಕರ್ನಾಟಕ ರಣಜಿ ತಂಡ ಪ್ರಕಟ | Manish Pandey to lead Karnataka in Ranji Trophy 2021 22


Karnataka Ranji Team: ಕರ್ನಾಟಕ ರಣಜಿ ತಂಡ ಪ್ರಕಟ

Karnataka Ranji Team

ಫೆಬ್ರವರಿ 10 ರಿಂದ ಶುರುವಾಗಲಿರುವ ರಣಜಿ ಟೂರ್ನಿಗಾಗಿ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (ಕೆಎಸ್‌ಸಿಎ) 20 ಸದಸ್ಯರ ತಂಡವನ್ನು ಪ್ರಕಟಿಸಿದೆ. ಈ ಬಾರಿ ಕೂಡ ತಂಡವನ್ನು ಕರ್ನಾಟಕದ ಅನುಭವಿ ಆಟಗಾರ ಮನೀಷ್ ಪಾಂಡೆ ಮುನ್ನಡೆಸಲಿದ್ದಾರೆ. ಇನ್ನು ತಂಡದ ಉಪನಾಯಕನಾಗಿ ರವಿಕುಮಾರ್ ಸಮರ್ಥ್ ಆಯ್ಕೆಯಾಗಿದ್ದಾರೆ. ಹಾಗೆಯೇ ತಂಡದಲ್ಲಿ ಸ್ಟಾರ್ ಆಟಗಾರರಾದ ಮಯಾಂಕ್ ಅಗರ್ವಾಲ್, ಕರುಣ್ ನಾಯರ್, ದೇವದತ್ ಪಡಿಕ್ಕಲ್, ಶ್ರೇಯಸ್ ಗೋಪಾಲ್ ಮತ್ತು ಪ್ರಸಿದ್ಧ್ ಕೃಷ್ಣ ಸ್ಥಾನ ಪಡೆದಿದ್ದಾರೆ.

ಭಾರತದ ಪ್ರಧಾನ ದೇಶೀಯ ಪಂದ್ಯಾವಳಿಯಾಗಿರುವ ರಣಜಿ ಟೂರ್ನಿ ಈ ಬಾರಿ ಎರಡು ಹಂತಗಳಲ್ಲಿ ನಡೆಯಲಿದೆ. ಅದರಂತೆ ಮೊದಲ ಹಂತ ಫೆಬ್ರವರಿ 10 ರಿಂದ ಮಾರ್ಚ್ 15 ರವರೆಗೆ ನಡೆದರೆ, ಎರಡನೇ ಹಂತವು ಮೇ 30 ರಿಂದ ಜೂನ್ 26 ರವರೆಗೆ ನಡೆಯಲಿದೆ. ಇನ್ನು ಈ ಬಾರಿ ಕರ್ನಾಟಕ ತಂಡವು ಎಲೈಟ್ ಸಿ ಗುಂಪಿನಲ್ಲಿದ್ದು, ಪುದುಚೇರಿ, ರೈಲ್ವೇ ಮತ್ತು ಜಮ್ಮು ಮತ್ತು ಕಾಶ್ಮೀರ ತಂಡಗಳ ವಿರುದ್ದ ಆಡಲಿದೆ.
2014-15ರ ಸೀಸನ್​ನಲ್ಲಿ ಕೊನೆಯ ಬಾರಿಗೆ ರಣಜಿ ಟ್ರೋಫಿ ಗೆದ್ದಿರುವ ಕರ್ನಾಟಕ ತಂಡವು ಈ ಬಾರಿ ತನ್ನೆಲ್ಲಾ ಪಂದ್ಯಗಳನ್ನು ಚೆನ್ನೈನಲ್ಲಿ ಆಡಲಿದೆ.

ಕರ್ನಾಟಕ ರಣಜಿ ತಂಡ ಹೀಗಿದೆ: ಮನೀಶ್ ಪಾಂಡೆ (ನಾಯಕ), ರವಿ ಕುಮಾರ್ ಸಮರ್ಥ್ (ಉಪನಾಯಕ), ಮಯಾಂಕ್ ಅಗರ್ವಾಲ್, ಕರುಣ್ ನಾಯರ್, ದೇವದತ್ ಪಡಿಕ್ಕಲ್, ಸಿದ್ಧಾರ್ಥ್ ಕೆವಿ, ನಿಶ್ಚಲ್ ಡಿ, ಅನೀಶ್ವರ್ ಗೌತಮ್, ಶುಭಾಂಗ್ ಹೆಗ್ಡೆ, ಕೆ ಗೌತಮ್, ಶ್ರೇಯಸ್ ಗೋಪಾಲ್, ಜಗದೀಶ್ ಸುಚಿತ್ , ಕೆಸಿ ಕಾರ್ಯಪ್ಪ, ಶರತ್ ಶ್ರೀನಿವಾಸ್ (ವಿಕೆಟ್ ಕೀಪರ್), ಶರತ್ ಬಿಆರ್, ಪ್ರಸಿದ್ಧ್ ಕೃಷ್ಣ, ರೋನಿತ್ ಮೋರೆ, ವೆಂಕಟೇಶ್ ಎಂ, ವೈಶಾಕ್ ವಿ, ವಿದ್ಯಾಧರ್ ಪಾಟೀಲ್.

TV9 Kannada


Leave a Reply

Your email address will not be published.