Karnataka SSLC Result 2022: ಎಸ್ಎಸ್​​ಎಲ್​ಸಿ ಫಲಿತಾಂಶ ಪ್ರಕಟ, 125 ಮಕ್ಕಳು ಔಟ್​ ಆಫ್ ಔಟ್ | Karnataka SSLC Result 2022 declared; Check result on sslc.karnataka.gov.in and karresults.nic.in


ಕರ್ನಾಟಕ ಎಸ್ಎಸ್​ಎಲ್​ಸಿ ಫಲಿತಾಂಶ 2022: ಫಲಿತಾಂಶದ ವಿವರವನ್ನು ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ನೀಡಿದರು.


ಬೆಂಗಳೂರು: 2021-22ನೇ ಸಾಲಿನ 10ನೇ ತರಗತಿಯ ಪರೀಕ್ಷೆ ಫಲಿತಾಂಶ ಪ್ರಕಟವಾಗಿದೆ. ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಬಿ.ಸಿ.ನಾಗೇಶ್​ ಫಲಿತಾಂಶದ ವಿವರಗಳನ್ನು ಸುದ್ದಿಗೋಷ್ಠಿಯಲ್ಲಿ ನೀಡಿದರು. ಈ ಬಾರಿ ರಾಜ್ಯದಲ್ಲಿ 8,20,900 ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಾಯಿಸಿಕೊಂಡಿದ್ದರು. 8,07,206 ವಿದ್ಯಾರ್ಥಿಗಳು ಹಾಜರಾಗಿದ್ದರು. 20,406 ವಿದ್ಯಾರ್ಥಿಗಳು ಪರೀಕ್ಷೆಗೆ ಗೈರು ಹಾಜರಾಗಿದ್ದರು. ರಿಪೀಟರ್ಸ್​ ಸೇರಿದಂತೆ 8,53,436 ಒಟ್ಟು ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು. ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಫಲಿತಾಂಶದ ವಿವರ ನೀಡಿದರು. 625ಕ್ಕೆ 625 ಅಂಕಗಳನ್ನು ಒಟ್ಟು 125 ಮಕ್ಕಳು ಪಡೆದಿದ್ದಾರೆ.

ಕಳೆದ ಎರಡು ವರ್ಷಗಳಿಂದ ರಾಜ್ಯದಲ್ಲಿ ಕೊರೊನಾ ಪಿಡುಗು ವ್ಯಾಪಿಸಿದ್ದ ಕಾರಣದಿಂದಾಗಿ ಪೂರ್ಣ ಪ್ರಮಾಣದಲ್ಲಿ ಪರೀಕ್ಷೆ ನಡೆದಿರಲಿಲ್ಲ. ಈ ವರ್ಷ ಪರೀಕ್ಷೆಗೆ ಹಾಜರಾಗಿದ್ದ ಮಕ್ಕಳ ಪೈಕಿ ಶೇ 85.63ರಷ್ಟು ಮಕ್ಕಳು ತೇರ್ಗಡೆಯಾಗಿದ್ದಾರೆ. ಕಳೆದ ಹತ್ತುವರ್ಷಗಳ ಅಂಕಿಅಂಶಗಳನ್ನು ಪರಿಶೀಲಿಸಿದರೆ ಇದು ದಾಖಲೆಯ ಫಲಿತಾಂಶ ಎನಿಸಿದೆ. ಶೇ 90.29 ಬಾಲಕಿಯರು ಮತ್ತು ಶೇ 81.03ರಷ್ಟು ಬಾಲಕರು ತೇರ್ಗಡೆಯಾಗಿದ್ದಾರೆ. ಗ್ರೇಸ್ ಅಂಕಗಳ ಮೂಲಕ 40,061 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ. 145 ವಿದ್ಯಾರ್ಥಿಗಳು ಔಟ್​ ಆಫ್ ಔಟ್ ಅಂದರೆ, 625ಕ್ಕೆ 625 ಅಂಕ ತೆಗೆದಿದ್ದಾರೆ.

TV9 Kannada


Leave a Reply

Your email address will not be published. Required fields are marked *