Kartik Purnima 2021: ಕಾರ್ತಿಕ ಹುಣ್ಣಿಮೆಗೆ ದಾನ ಮಾಡಿ ಪುಣ್ಯ ಕಟ್ಟಿಕೊಳ್ಳಿ, ಹುಣ್ಣಿಮೆಯ ಶುಭ ಮುಹೂರ್ತ ವಿವರ ಇಲ್ಲಿದೆ | Kartik purnima 2021 know date of kartik hunnime auspicious time puja vidhi importance


Kartik Purnima 2021: ಕಾರ್ತಿಕ ಹುಣ್ಣಿಮೆಗೆ ದಾನ ಮಾಡಿ ಪುಣ್ಯ ಕಟ್ಟಿಕೊಳ್ಳಿ, ಹುಣ್ಣಿಮೆಯ ಶುಭ ಮುಹೂರ್ತ ವಿವರ ಇಲ್ಲಿದೆ

Kartik Purnima 202: ಕಾರ್ತಿಕ ಹುಣ್ಣಿಮೆಗೆ ದಾನ ಮಾಡಿ ಪುಣ್ಯ ಕಟ್ಟಿಕೊಳ್ಳಿ, ಹುಣ್ಣಿಮೆಯ ಶುಭ ಮುಹೂರ್ತ ವಿವರ ಇಲ್ಲಿದೆ

ಈ ಬಾರಿ ಕಾರ್ತಿಕ ಹುಣ್ಣಿಮೆಯಂದು ಪುಣ್ಯ ಮಾಡಿ ಪುನೀತರಾಗಿ, ಹುಣ್ಣಿಮೆಯ ಶುಭ ಮುಹೂರ್ತದ ವಿವರ ಇಲ್ಲಿದೆ. ಕಾರ್ತಿಕ ಮಾಸ ಎಂಬುದು ಅತ್ಯಂತ ಮಹತ್ವದ ತಿಂಗಳು. ಹಿಂದೂ ಪಂಚಾಂಗದಲ್ಲಿ 8ನೆಯ ತಿಂಗಳು ಕಾರ್ತಿಕ ಮಾಸವಾಗಿದೆ. ಈ ಮಾಸದಲ್ಲಿ ಧಾರ್ಮಿಕ ವಿಧಿ ವಿಧಾನಗಳಿಗೆ ಹೆಚ್ಚಿನ ಮಹತ್ವವಿದೆ. ಕಾರ್ತಿಕ ಮಾಸದಲ್ಲಿ ವಿಷ್ಣು ಭಗವಾನ್ ತನ್ನ ನಾಲ್ಕು ತಿಂಗಳ ನಿದ್ರಾವಸ್ಥೆಯನ್ನು ಪೂರೈಸಿ, ಭೂಮಂಡಲದಲ್ಲಿ ಸಂಚಾರಕ್ಕೆ ಬರುತ್ತಾರೆ ಎಂಬ ಪ್ರತೀತಿ ಇದೆ. ಜೊತೆಗೆ ಲಕ್ಷ್ಮಿ ದೇವಿ ಸಹ ಶ್ರೀಮನ್ನಾರಾಯಣನ ಜೊತೆ ಭೂಲೋಕ ಸಂಚಾರವಾಸಿಗಳಾಗುತ್ತಾರೆ. ಹಾಗಾಗಿ ಈ ತಿಂಗಳಲ್ಲಿ ಧಾರ್ಮಿಕವಾಗಿ ನಡೆದುಕೊಳ್ಳಬೇಕಾಗುತ್ತದೆ.

ಹುಣ್ಣಿಮೆಯು ಪ್ರತಿ ಶುಕ್ಲ ಪಕ್ಷದ ಕೊನೆಯ ದಿನ ಬರುತ್ತದೆ. ಈ ಬಾರಿಯ ಕಾರ್ತಿಕ ಹುಣ್ಣಿಮೆ ನವೆಂಬರ್​ 19 ಶುಕ್ರವಾರದಂದು ಬರುತ್ತದೆ. ಈ ದಿನದಂದು ಸ್ನಾನ ಸಂಧ್ಯಾವಂದನೆಗಳಿಗೆ ವಿಶೇಷ ಮಹತ್ವ ಇದೆ. ಈ ಹುಣ್ಣಿಮೆಯು ಭಗವಂತ ವಿಷ್ಣುವಿಗೆ ಸಮರ್ಪಿತವಾಗಿದೆ. ಈ ದಿನ ಚಂದ್ರನ ಜೊತೆ ಜೊತೆಗೆ ವಿಷ್ಣುವಿಗೂ ಪೂಜೆ ನಡೆಯುತ್ತದೆ.

ಕಾರ್ತಿಕ ಮಾಸದ ಕೊನೆಯ ದಿನವೇ ಕಾರ್ತಿಕ ಹುಣ್ಣಿಮೆ. ಈ ದಿನ ಭೋಲೇನಾಥ್​ ದೇವರು ತ್ರಿಪುರಾಸುರನ ವಧೆ ಮಾಡಿದ ದಿನ. ಈ ಖುಷಿಯಲ್ಲಿಯೇ ದೇವಾನುದೇವತೆಗಳು ದೀಪಗಳನ್ನು ಹಚ್ಚಿ ಸಂಭ್ರಮಪಟ್ಟಿದ್ದರು. ಇದನ್ನು ದೇವ ದೀಪಾವಳಿ ಎಂದೂ ಕರೆಯುತ್ತಾರೆ.

ಕಾರ್ತಿಕ ಹುಣ್ಣಿಮೆ ಮುಹೂರ್ತ 2021:

ಕಾರ್ತಿಕ ಹುಣ್ಣಿಮೆ ಆರಂಭ – ನವೆಂಬರ್ 18 ಮಧ್ಯಾಹ್ನ 12 ಗಂಟೆ
ಕಾರ್ತಿಕ ಹುಣ್ಣಿಮೆ ಆರಂಭ – ನವೆಂಬರ್ 18 ಮಧ್ಯಾಹ್ನ 12 ಗಂಟೆ
ಕಾರ್ತಿಕ ಹುಣ್ಣಿಮೆ ಮುಕ್ತಾಯ – ನವೆಂಬರ್ 19, 2.22 ಗಂಟೆ
ಕಾರ್ತಿಕ ಹುಣ್ಣಿಮೆ ಚಂದ್ರ ಮೂಡುವ ಸಮಯ – ಸಂಜೆ 5 ಗಂಟೆ 28 ನಿಮಿಷ 24 ಸೆಕೆಂಡ್

ಕಾರ್ತಿಕ ಹುಣ್ಣಿಮೆಗೆ ಪೂಜಾ ವಿಧಾನ:

ಕಾರ್ತಿಕ ಹುಣ್ಣಿಮೆ ಅಂದರೆ ದೇವ ದೀಪಾವಳಿ ದಿನ ಬ್ರಾಹ್ಮೀ ಮುಹೂರ್ತದಲ್ಲಿ ಸಮೀಪದ ಸರೋವರಕ್ಕೆ ಹೋಗಿ ಸ್ನಾನ ಮಾಡಿಕೊಂಡು ಬರಬೇಕು. ಅದಾದ ಮೇಲೆ ಸುದ್ಧ ಹಸುವಿನ ತುಪ್ಪದ ದೇವ ದೀಪವನ್ನು ಹಚ್ಚಬೇಕು. ಶ್ರೀಹರಿಯನ್ನು ಸ್ಮರಿಸುತ್ತಾ ಧೂಪ, ದೀಪ, ಹೂವು, ಹಣ್ಣು ಹಂಪಲು, ಪಂಚಾಮೃತ ನೈವೇದ್ಯ ಮಾಡಬೇಕು. ಈ ವೇಳೆ ತುಳಸಿ ತಂದು ಪೂಜೆ ಮಾಡಬೇಕು. ಸಂಜೆಯಾಗುತ್ತಿದ್ದಂತೆ ಮತ್ತೊಮ್ಮೆ ಶ್ರೀಹರಿಯ ಪೂಜೆ ಮಾಡಬೇಕು. ಕೇಸರಿ ಬಾತ್​ ಮಾಡಿ ದೇವರಿಗೆ ಸಮರ್ಪಿಸಬೇಕು. ಶ್ರೀಹರಿಯ ಜೊತೆಗೆ ಲಕ್ಷ್ಮಿ ಪೂಜೆ ಮಾಡಿ, ಆರತಿ ಎತ್ತಬೇಕು. ರಾತ್ರಿ ಚಂದ್ರ ಕಾಣಿಸಿಕೊಂಡ ಮೇಲೆ ಅರ್ಘ್ಯ ಬಿಟ್ಟು, ವ್ರತ ಮುಗಿಸಬೇಕು. ಎಲ್ಲ ಹುಣ್ಣಿಮೆಗಳ ಪೈಕಿ ಕಾರ್ತಿಕ ಮಾಸದ ಹುಣ್ಣಿಮೆಗೆ ಹೆಚ್ಚಿನ ಮಹತ್ವವಿದೆ ಎಂಬುದನ್ನು ಮರೆಯಬೇಡಿ.

(kartik purnima 2021 know date of kartik hunnime auspicious time puja vidhi importance)

TV9 Kannada


Leave a Reply

Your email address will not be published. Required fields are marked *