KBC 13: ಮೊಘಲ್ ಸಾಮ್ರಾಜ್ಯದ ಕುರಿತ ₹ 7 ಕೋಟಿ ಮೊತ್ತದ ಪ್ರಶ್ನೆಗೆ ಉತ್ತರ ತಿಳಿಯದೇ ಕ್ವಿಟ್ ಮಾಡಿದ ಸ್ಪರ್ಧಿ; ನೀವು ಉತ್ತರಿಸಬಲ್ಲಿರಾ? | Can you answer the 7 Cr worth question on Mughal empire asked on KBC 13


KBC 13: ಮೊಘಲ್ ಸಾಮ್ರಾಜ್ಯದ ಕುರಿತ ₹ 7 ಕೋಟಿ ಮೊತ್ತದ ಪ್ರಶ್ನೆಗೆ ಉತ್ತರ ತಿಳಿಯದೇ ಕ್ವಿಟ್ ಮಾಡಿದ ಸ್ಪರ್ಧಿ; ನೀವು ಉತ್ತರಿಸಬಲ್ಲಿರಾ?

ಗೀತಾ ಸಿಂಗ್ ಗೌರ್, ಅಮಿತಾಭ್ ಬಚ್ಚನ್

ಅಮಿತಾಭ್ ಬಚ್ಚನ್ (Amitabh Bachchan) ನಡೆಸಿಕೊಡುವ ಕೌನ್ ಬನೇಗಾ ಕರೋಡ್​ಪತಿ (KBC 13) ಕಾರ್ಯಕ್ರಮ ಅದ್ಭುತವಾಗಿ ಮೂಡಿಬರುತ್ತಿದ್ದು, ಇತ್ತೀಚೆಗಷ್ಟೇ ಈ ಸೀಸನ್​ನ ಮೂರನೇ ಕೋಟ್ಯಧಿಪತಿ ಹೊರಹೊಮ್ಮಿದ್ದಾರೆ. ಮಧ್ಯಪ್ರದೇಶ ಮೂಲದ ಗೀತಾ ಸಿಂಗ್ ಗೌರ್ (Geetha Singh Gour), ಸರಿಯುತ್ತರಗಳನ್ನು‌ ನೀಡಿ 1 ಕೋಟಿ ಮೊತ್ತವನ್ನು ಗೆದ್ದರು. ಆದರೆ, 7 ಕೋಟಿ ರೂ ಮೊತ್ತದ ಪ್ರಶ್ನೆಗೆ ಅವರಿಗೆ ಸರಿಯಾದ ಉತ್ತರ ತಿಳಿದಿರಲಿಲ್ಲ. ಜೊತೆಗೆ, ಅವರಲ್ಲಿ ಯಾವ ಲೈಫ್ ಲೈನ್ ಸಹ ಉಳಿದಿರಲಿಲ್ಲ. ಆದ್ದರಿಂದ ಅವರು ಕ್ವಿಟ್ ಮಾಡುವ ನಿರ್ಧಾರ ತಳೆದರು. ಈ ಮೂಲಕ ಅವರು 1 ಕೋಟಿ‌ ಮೊತ್ತದೊಂದಿಗೆ ಸ್ಪರ್ಧೆಯನ್ನು ಮುಗಿಸಿದರು.‌ ಮೊಘಲ್‌ ಸಾಮ್ರಾಜ್ಯದ ಕುರಿತು ಅವರಿಗೆ ಕೊನೆಯ ಪ್ರಶ್ನೆಯನ್ನು ಕೇಳಲಾಗಿತ್ತು.‌ ಆದರೆ ಅದಕ್ಕೆ ಖಚಿತವಾದ ಉತ್ತರ ಗೀತಾರಿಗೆ ತಿಳಿದಿರಲಿಲ್ಲ. ಆ ಪ್ರಶ್ನೆ ಇಲ್ಲಿದೆ.

‘ಅಕ್ಬರ್ ಮೊಮ್ಮಕ್ಕಳನ್ನು ಕ್ರೈಸ್ತ ಪಾದ್ರಿಯರಿಗೆ ಹಸ್ತಾಂತರಿಸಿದ ನಂತರ, ಕ್ರಿಶ್ಚಿಯನ್‌ ಧರ್ಮಕ್ಕೆ ಮತಾಂತರಿಸಿ, ಹೆಸರು ಬದಲಿಸಲಾಯಿತು. ಈ‌ ಕೆಳಗಿನ ಹೆಸರುಗಳಲ್ಲಿ ಯಾವುದು ಅಕ್ಬರ್ ನ ಮೂರು ಮಕ್ಕಳ‌ ಹೆಸರಲ್ಲ?’

ಇದಕ್ಕೆ ಆಯ್ಕೆಯ ರೂಪದಲ್ಲಿ, ಡಾನ್‌ ಫೆಲಿಪೆ, ಡಾನ್ ಹೆನ್ರಿಕ್, ಡಾನ್‌ ಕಾರ್ಲೋಸ್ ಮತ್ತು ಡಾನ್ ಫ್ರಾನ್ಸಿಸ್ಕೊ ಎಂಬ ಹೆಸರುಗಳನ್ನು‌ ನೀಡಲಾಗಿತ್ತು. ಇದಕ್ಕೆ‌ ಸರಿಯಾದ ಉತ್ತರ ತಿಳಿಯದ ಕಾರಣ ಗೀತಾ ಕ್ವಿಟ್ ಮಾಡಿದರು. ವಾಸ್ತವವಾಗಿ, ಮೇಲಿನ ನಾಲ್ಕು ಹೆಸರುಗಳಲ್ಲಿ ಡಾನ್ ಫ್ರಾನ್ಸಿಸ್ಕೋ ಎಂಬ ಹೆಸರು, ಅಕ್ಬರ್ ಮೊಮ್ಮಕ್ಕಳಿಗೆ ಸಂಬಂಧಿಸಿದ ಹೆಸರಾಗಿರಲಿಲ್ಲ. ಆದ್ದರಿಂದ‌‌ ಸರಿಯಾದ ಉತ್ತರ ಡಾನ್‌ ಫ್ರಾನ್ಸಿಸ್ಕೋ ಆಗಿತ್ತು.

ಅಕ್ಬರ್ ಪುತ್ರ ಜಹಾಂಗೀರ್, ತಮ್ಮ‌‌ ಸೋದರನ ಮೂವರು ಪುತ್ರರನ್ನು ಕ್ರಿಶ್ಚಿಯನ್ ಪಾದ್ರಿಗಳಿಗೆ ಹಸ್ತಾಂತರಿಸಿದ್ದರು. ಪರಿಣಾಮವಾಗಿ ಅವರ ಹೆಸರುಗಳೂ ಬದಲಾದವು. ಕೆಲ ತಿಂಗಳುಗಳ ನಂತರ ಮೂವರೂ ಮತ್ತೆ‌ ಇಸ್ಲಾಂ ಧರ್ಮಕ್ಕೆ ಮರಳಿದರು‌ ಎಂದು ಅಮಿತಾಭ್ ಗೀತಾ ಅವರಿಗೆ ಪ್ರಶ್ನೆಯ ಹಿಂದಿರುವ ಇತಿಹಾಸವನ್ನು ನಂತರ ವಿವರಿಸಿದರು.

ಇದನ್ನೂ ಓದಿ:

‘ಅಪ್ಪು ಸರ್​ ವಿಚಾರದಲ್ಲಿ ಮರಣ ಎಂಬ ಪದ ಬಳಸೋಕೆ ನಾನು ಇಷ್ಟಪಡಲ್ಲ’: ರಚಿತಾ ರಾಮ್​​

Priyanka Chopra: ಬರೋಬ್ಬರಿ ₹ 2.1 ಕೋಟಿ ಮೊತ್ತದ ಎಂಗೇಜ್​ಮೆಂಟ್ ರಿಂಗ್ ಕುರಿತು ಕುತೂಹಲಕರ ವಿಚಾರ ಹಂಚಿಕೊಂಡ ಪ್ರಿಯಾಂಕಾ

TV9 Kannada


Leave a Reply

Your email address will not be published. Required fields are marked *