KBC 13: ₹ 50 ಲಕ್ಷ‌ ಮೊತ್ತದ ಚಿಟ್ಟೆಗಳ ಕುರಿತ ಈ ಕುತೂಹಲಕರ ಪ್ರಶ್ನೆಗೆ ಸ್ಪರ್ಧಿಗೆ ಉತ್ತರ ತಿಳಿಯಲಿಲ್ಲ; ನಿಮಗೆ ತಿಳಿದಿದೆಯೇ? | A contestant Jayashree fails to answer this Rs 50 Lakh question in KBC 13 hosted by Amitabh Bachchan


KBC 13: ₹ 50 ಲಕ್ಷ‌ ಮೊತ್ತದ ಚಿಟ್ಟೆಗಳ ಕುರಿತ ಈ ಕುತೂಹಲಕರ ಪ್ರಶ್ನೆಗೆ ಸ್ಪರ್ಧಿಗೆ ಉತ್ತರ ತಿಳಿಯಲಿಲ್ಲ; ನಿಮಗೆ ತಿಳಿದಿದೆಯೇ?

ಜಯಶ್ರೀ ಗೋಹಿಲ್, ಅಮಿತಾಭ್ ಬಚ್ಚನ್

ಅಮಿತಾಭ್ ಬಚ್ಚನ್‌ ನಡೆಸಿಕೊಡುವ ಕೌನ್‌ ಬನೇಗಾ ಕರೋಡ್ ಪತಿಯ 13ನೇ‌ ಸೀಸನ್‌ ಕುತೂಹಲಕಾರಿಯಾಗಿ ಮೂಡಿಬರುತ್ತಿದ್ದು, ವೀಕ್ಷಕರ ಮೆಚ್ಚುಗೆಗೆ ಪಾತ್ರವಾಗಿದೆ. ಈವರೆಗೆ ಸ್ಪರ್ಧೆಯಲ್ಲಿ ಮೂರು ಜನ ಕೋಟ್ಯಧಿಪತಿಗಳು ಹೊರಹೊಮ್ಮಿದ್ದಾರೆ.‌ ಇತ್ತೀಚಿನ‌ ಸಂಚಿಕೆಯಲ್ಲಿ‌ ಸ್ಪರ್ಧಿಯೋರ್ವರು ಕೋಟ್ಯಧಿಪತಿಯಾಗುವುದಕ್ಕೆ‌ ಎರಡೇ ಮೆಟ್ಟಿಲಿರುವಾಗ ಸ್ಪರ್ಧೆಯನ್ನು ಕ್ವಿಟ್ ಮಾಡಿದ್ದಾರೆ. ಗುಜರಾತ್ ಮೂಲದ ಜಯಶ್ರೀ ಗೋಹಿಲ್ ಎಂಬುವವರು ಹಾಟ್ ಸೀಟ್ ನಲ್ಲಿ‌ ಕುಳಿತಿದ್ದರು. 35 ವರ್ಷದ ಅವರು ಸರ್ಕಾರಿ ಉದ್ಯೋಗಿಯಾಗಿದ್ದು, ಭುಜ್ ನವರು. ₹ 25 ಲಕ್ಷ‌ ಮೊತ್ತದ ಪ್ರಶ್ನೆಗೆ ಸರಿಯುತ್ತರ ನೀಡಿ, ಅವರು ₹ 50 ಲಕ್ಷ‌ ಮೊತ್ತದ ಪ್ರಶ್ನೆಯ ಹಂತದಲ್ಲಿದ್ದರು. ಒಂದು ವೇಳೆ ಅವರು ಆ ಪ್ರಶ್ನೆಗೆ ಉತ್ತರಿಸಿದ್ದರೆ, ಕೋಟ್ಯಧಿಪತಿಯಾಗುವ ಹಂತದಿಂದ‌ ಒಂದೇ ಮೆಟ್ಟಿಲು ಹಿಂದಿರುತ್ತಿದ್ದರು. ಆದರೆ ₹ 50 ಲಕ್ಷ ಮೊತ್ತದ ಪ್ರಶ್ನೆಗೆ ಉತ್ತರ ತಿಳಿಯದ ಕಾರಣ‌, ಕ್ವಿಟ್ ಮಾಡುವ ನಿರ್ಧಾರ ಕೈಗೊಂಡರು. ಆ ಪ್ರಶ್ನೆ ಇಲ್ಲಿದೆ. 

ಜಯಶ್ರೀ ಅವರಿಗೆ ₹ 50 ಲಕ್ಷ‌ ಮೊತ್ತಕ್ಕಾಗಿ ಅಮಿತಾಭ್ ಈ‌ ಪ್ರಶ್ನೆಯನ್ನು‌ ಕೇಳಿದರು. ‘ಭಾರತದ ಅತ್ಯಂತ‌ ದೊಡ್ಡ ಚಿಟ್ಟೆ ಯಾವುದು?’ ನಾಲ್ಕು ಆಯ್ಕೆಗಳಾಗಿ, ಸದರ್ನ್‌ ಬರ್ಡ್ ವಿಂಗ್,‌ ಗೋಲ್ಡನ್‌ ಬರ್ಡ್ ವಿಂಗ್, ಕಾಮನ್‌ ವಿಂಡ್ ಮಿಲ್ ಮತ್ತು ಗ್ರೇಟ್ ವಿಂಡ್ ಮಿಲ್ ಗಳನ್ನು ನೀಡಲಾಗಿತ್ತು. ಆದರೆ ಈ ಪ್ರಶ್ನೆಗೆ ಖಚಿತ ಉತ್ತರ ತಿಳಿಯದ ಕಾರಣ, ಜಯಶ್ರೀ ಸ್ಪರ್ಧೆಯನ್ನು ಕ್ವಿಟ್ ಮಾಡುವ ನಿರ್ಧಾರ ಕೈಗೊಂಡರು. ಅಮಿತಾಭ್‌ ಕೇಳಿದ‌‌ ಪ್ರಶ್ನೆಗೆ ಸರಿಯಾದ ಉತ್ತರ ‘ಗೋಲ್ಡನ್ ಬರ್ಡ್ ವಿಂಗ್’ ಆಗಿತ್ತು.

₹ 25 ಲಕ್ಷ ಮೊತ್ತದೊಂದಿಗೆ ಜಯಶ್ರೀ ಸ್ಪರ್ಧೆಯಿಂದ ನಿರ್ಗಮಿಸಿದರು. ಕಾರ್ಯಕ್ರಮದಲ್ಲಿ ಅವರು ಅಮಿತಾಭ್ ಮೂಲಕ‌ ಅವರ ಪತಿಯ ಬಳಿ ಒಂದು ಕೋರಿಕೆ‌ ಮುಂದಿಟ್ಟಿದ್ದರು. ತಮಗೇನು ಬೇಕೋ ಅದನ್ನು ಮನೆಯಲ್ಲಿ ಮಾತನಾಡುವ ಸ್ವಾತಂತ್ರ್ಯ ಬೇಕು ಎಂದು ಪತಿಯ ಬಳಿ ಕೇಳಿ ಎಂದು ಜಯಶ್ರೀ ಅಮಿತಾಭ್ ಬಳಿ ಕೇಳಿಕೊಂಡರು. ಇದು ಎಲ್ಲರ ಅಚ್ಚರಿಗೆ ಕಾರಣವಾಯಿತು.

ಕೆಬಿಸಿ ಸ್ಪರ್ಧೆಯಲ್ಲಿ ಇತ್ತೀಚೆಗಷ್ಟೇ ಮೂರನೇ ಕೋಟ್ಯಧಿಪತಿ‌ ಹೊರಹೊಮ್ಮಿದ್ದರು. ಮಧ್ಯಪ್ರದೇಶದ ಗೀತಾ ಸಿಂಗ್ ಗೌರ್ ₹ 1 ಕೋಟಿಯನ್ನು ಗೆದ್ದಿದ್ದರು. ಸ್ಪರ್ಧೆಯಲ್ಲಿ ₹ 7 ಕೋಟಿಯನ್ನು ಗೆಲ್ಲುವ ಅವಕಾಶವಿದ್ದರೂ ಕೂಡ, ಇದುವರೆಗೆ ಯಾರಿಗೂ ಸಾಧ್ಯವಾಗಿಲ್ಲ. ಕೋಟ್ಯಧಿಪತಿಯಾದ ಮೂರೂ ಸ್ಪರ್ಧಿಗಳು ₹ 1 ಕೋಟಿಯನ್ನಷ್ಟೇ ಗೆದ್ದಿದ್ದಾರೆ.

ಇದನ್ನೂ ಓದಿ:

KBC 13: ಮೊಘಲ್ ಸಾಮ್ರಾಜ್ಯದ ಕುರಿತ ₹ 7 ಕೋಟಿ ಮೊತ್ತದ ಪ್ರಶ್ನೆಗೆ ಉತ್ತರ ತಿಳಿಯದೇ ಕ್ವಿಟ್ ಮಾಡಿದ ಸ್ಪರ್ಧಿ; ನೀವು ಉತ್ತರಿಸಬಲ್ಲಿರಾ?

Prabhas: ಪ್ರಭಾಸ್​ ಅಭಿಮಾನಿಯ ಸೂಸೈಡ್​ ಲೆಟರ್​ ವೈರಲ್​; ‘ರಾಧೆ ಶ್ಯಾಮ್​’ ತಂಡಕ್ಕೆ ಹೊಸ ಕಿರಿಕಿರಿ

TV9 Kannada


Leave a Reply

Your email address will not be published. Required fields are marked *