ಸಿಬಿಎಸ್ಇ ಮತ್ತು ಐಸಿಎಸ್ಇ ಪಠ್ಯಕ್ರಮಗಳಲ್ಲಿ ಪರೀಕ್ಷೆ ಬರೆದಿದ್ದ 12ನೇ ತರಗತಿ ವಿದ್ಯಾರ್ಥಿಗಳ ಫಲಿತಾಂಶ ಪ್ರಕಟವಾಗುವುದು ತಡವಾದ ಹಿನ್ನೆಲೆಯಲ್ಲಿ ಸಿಇಟಿ ಫಲಿತಾಂಶ ಪ್ರಕಟಣೆಯೂ ತಡವಾಯಿತು.

Image Credit source: Zee News
ಬೆಂಗಳೂರು: ಕರ್ನಾಟಕ ಪರೀಕ್ಷಾ ಪ್ರಾಧಿಕಾರವು (KEA) KCET 2022 ಪರೀಕ್ಷೆಗಳ ಫಲಿತಾಂಶಗಳನ್ನು ಶನಿವಾರ (ಜುಲೈ 30) ತನ್ನ ಅಧಿಕೃತ ವೆಬ್ಸೈಟ್ನಲ್ಲಿ ಪ್ರಕಟಿಸಲಿದೆ. ಕೆಸಿಇಟಿ 2022ರ ಫಲಿತಾಂಶಗಳನ್ನು ಅಧಿಕೃತ ವೆಬ್ಸೈಟ್ kea.kar.nic.in ಅಥವಾ cetonline.karnataka.gov.inನಲ್ಲಿ ವೀಕ್ಷಿಸಬಹುದು. ಫಲಿತಾಂಶದ ಜೊತೆಗೆ ಮೆರಿಟ್ ಪಟ್ಟಿ ಕೂಡ ಪ್ರಕಟವಾಗಲಿದೆ. ನಾಳೆ ಮಧ್ಯಾಹ್ನದ ವೇಳೆಗೆ ಕೆಸಿಇಟಿ ಫಲಿತಾಂಶ (KCET Results) ಪ್ರಕಟವಾಗುವ ನಿರೀಕ್ಷೆಯಿದೆ.
ಈ ಮೊದಲು ಸಿಇಟಿ ಫಲಿತಾಂಶವನ್ನು ಜುಲೈ 17ರಂದೇ ಪ್ರಕಟಿಸುವುದಾಗಿ ಪರೀಕ್ಷಾ ಪ್ರಾಧಿಕಾರ ಘೋಷಿಸಿತ್ತು. ಆದರೆ ಸಿಬಿಎಸ್ಇ ಮತ್ತು ಐಸಿಎಸ್ಇ ಪಠ್ಯಕ್ರಮಗಳಲ್ಲಿ ಪರೀಕ್ಷೆ ಬರೆದಿದ್ದ 12ನೇ ತರಗತಿ ವಿದ್ಯಾರ್ಥಿಗಳ ಫಲಿತಾಂಶ ಪ್ರಕಟವಾಗುವುದು ತಡವಾದ ಹಿನ್ನೆಲೆಯಲ್ಲಿ ಸಿಇಟಿ ಫಲಿತಾಂಶ ಪ್ರಕಟಣೆಯೂ ತಡವಾಯಿತು.
KCET ಫಲಿತಾಂಶ 2022 ಅನ್ನು ಹೇಗೆ ಪರಿಶೀಲಿಸುವುದು?:
– ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಅಧಿಕೃತ ವೆಬ್ಸೈಟ್ kea.kar.nic.inಗೆ ಭೇಟಿ ನೀಡಿ
– ವೆಬ್ಸೈಟ್ನಲ್ಲಿ ಮುಖಪುಟದಲ್ಲಿ ‘KCET ಫಲಿತಾಂಶ 2022’ ಮೇಲೆ ಕ್ಲಿಕ್ ಮಾಡಿ
– ಲಾಗ್ ಇನ್ ಮಾಡಲು ಅಗತ್ಯವಿರುವ ಎಲ್ಲಾ ದಾಖಲೆಗಳನ್ನು ನಮೂದಿಸಿ
– ಆಗ ನಿಮ್ಮ KCET ಫಲಿತಾಂಶಗಳು ಸ್ಕ್ರೀನ್ ಮೇಲೆ ಕಾಣಿಸಿಕೊಳ್ಳುತ್ತವೆ
– ರಿಸಲ್ಟ್ ಡೌನ್ಲೋಡ್ ಮಾಡಿಕೊಂಡು, ಪ್ರಿಂಟ್ಔಟ್ ತೆಗೆದುಕೊಳ್ಳಿ