ಬೆಂಗಳೂರು: ಇತ್ತೀಚೆಗಷ್ಟೇ ಸಿಎಂ ಯಡಿಯೂರಪ್ಪ ವಿದ್ಯುತ್​ ಚಾಲಿತ ಟ್ಯಾಕ್ಸಿ ಮತ್ತು ಬೈಕ್​ ಯೋಜನೆ (ಕರ್ನಾಟಕ ಎಲೆಕ್ಟ್ರಿಕ್​ ಬೈಕ್​ ಟ್ಯಾಕ್ಸಿ ಸ್ಕೀಮ್)ಗೆ ಚಾಲನೆ ನೀಡಿದ್ದರು. ಈ ಯೋಜನೆ ಜಾರಿಗೆ ಆಟೋ ಮತ್ತು ಟ್ಯಾಕ್ಸಿ ಸಂಘಟನೆಗಳು ವಿರೋಧ ವ್ಯಕ್ತಪಡಿಸಿವೆ.

ಈ ಯೋಜನೆ ಯಾವುದೇ ಕಾರಣಕ್ಕೂ ಜಾರಿಯಾಗಬಾರದು. ಕೊರೊನಾದಿಂದ ಮೊದಲೇ ನಾವು ಸಂಕಷ್ಟದಲ್ಲಿದ್ದೇವೆ. ಈ ಯೋಜನೆ ಜಾರಿಗೆ ಬಂದ್ರೆ ತಮ್ಮ ವಾಹನಗಳನ್ನ ಮಾರಾಟ ಮಾಡಿ ಬೀದಿಗೆ ಬೀಳುತ್ತೇವೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ

ಅಲ್ಲದೇ ಈ ಯೋಜನೆ ಜಾರಿಗೆ ಬಂದರೆ ದೊಡ್ಡ ಮಟ್ಟದಲ್ಲಿ ಸರ್ಕಾರದ ವಿರುದ್ಧ ಹೋರಾಟ ಮಾಡುವುದಾಗಿ ಟ್ಯಾಕ್ಸಿ ಸಂಘಟನೆಗಳು ಸರ್ಕಾರಕ್ಕೆ ಎಚ್ಚರಿಕೆ ನೀಡಿವೆ.

The post KEBTS -2021 ಯೋಜನೆಗೆ ಹಿನ್ನೆಡೆ: ಆಟೋ, ಟ್ಯಾಕ್ಸಿ ಸಂಘಟನೆಗಳ ವಿರೋಧ ಯಾಕೆ..? appeared first on News First Kannada.

Source: newsfirstlive.com

Source link