Kerala: ಬುಡಕಟ್ಟು ಜನಾಂಗದ ಕುಗ್ರಾಮದಲ್ಲಿ ಸಾಲುಸಾಲು ಶಿಶುಗಳ ಮರಣ; ತನಿಖೆಗೆ ಆದೇಶಿಸಿ ಕೇರಳ ಸರ್ಕಾರ | 3 infant deaths in 4 days in tribal hamlet Attapady Of Kerala


Kerala: ಬುಡಕಟ್ಟು ಜನಾಂಗದ ಕುಗ್ರಾಮದಲ್ಲಿ ಸಾಲುಸಾಲು ಶಿಶುಗಳ ಮರಣ; ತನಿಖೆಗೆ ಆದೇಶಿಸಿ ಕೇರಳ ಸರ್ಕಾರ

ಸಾಂಕೇತಿಕ ಚಿತ್ರ

ಕೇರಳದ ಅಟ್ಟಪಾಡಿ ತಾಲೂಕಿನಲ್ಲಿ ಬುಡಕಟ್ಟು ಜನಾಂಗ ವಾಸವಾಗಿರುವ ಕುಗ್ರಾಮಗಳಲ್ಲಿ ಮೂರು ತಿಂಗಳ ಹಸುಗೂಸು ಮೃತಪಟ್ಟಿದೆ. ಕಳೆದ ನಾಲ್ಕು ತಿಂಗಳಲ್ಲಿ ಈ ಮಗುವನ್ನೂ ಸೇರಿ ಒಟ್ಟು 3 ನವಜಾತ ಶಿಶುಗಳು ಮೃತಪಟ್ಟಿದ್ದು ಆತಂಕಕ್ಕೆ ಕಾರಣವಾಗಿದೆ. ಹೀಗಾಗಿ ಕೇರಳ ಸರ್ಕಾರ ವಿಷಯವನ್ನು ಗಂಭೀರವಾಗಿ ಪರಿಗಣಿಸಿ, ಘಟನೆಗೆ ಸಂಬಂಧಪಟ್ಟಂತೆ ಸರಿಯಾಗಿ ತನಿಖೆ ನಡೆಸುವಂತೆ ವಿವಿಧ ಇಲಾಖೆಗಳಿಗೆ ಸೂಚನೆ ನೀಡಿದೆ. ಸದ್ಯ ಬುಡಕಟ್ಟು ಜನಾಂಗದವರು ವಾಸಿಸುತ್ತಿರುವ ಅಗಾಲಿ ಮತ್ತು ಪುಥುರ್​ ಪ್ರದೇಶಗಳಲ್ಲಿ ಈ ಸಾವಾಗಿದೆ. ಆರೋಗ್ಯ ಸಚಿವೆ ವೀಣಾ ಜಾರ್ಜ್​ ಖುದ್ದಾಗಿ ಈ ವಿಚಾರವನ್ನು ಮೇಲ್ವಿಚಾರಣೆ ಮಾಡುತ್ತಿದ್ದಾರೆ.  

ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಕೆ ರಾಧಾಕೃಷ್ಣನ್ ಅವರಿಂದು ಈ ಪ್ರದೇಶಗಳಿಗೆ ಭೇಟಿ ನೀಡಿ, ಅಲ್ಲಿನ ಪರಿಸ್ಥಿತಿಯನ್ನು ಪರಿಶೀಲನೆ ಮಾಡಲಿದ್ದಾರೆ.  ಅದಾದ ಬಳಿಕ ಅಗಾಲಿಯಲ್ಲಿ ಸಭೆ ನಡೆಸಲಿದ್ದಾರೆ. ಇನ್ನು ಮಗುವಿನ ಸಾವಿನ ಬಗ್ಗೆ ಮಾಹಿತಿ ನೀಡಿದ ಪಾಲಕ್ಕಾಡ್ ಜಿಲ್ಲಾಧಿಕಾರಿ ರಮಾದೇವಿ, ಶುಕ್ರವಾರ ಮಗು ಸತ್ತಿದ್ದು ಮನ್ನಾರ್ಕಾಡು ಆಸ್ಪತ್ರೆಯಲ್ಲಿ. ಕಳೆದ ನಾಲ್ಕು ದಿನಗಳಲ್ಲಿ ಇದು ಮೂರನೇ ಸಾವಾಗಿದೆ. ಪಾಲಕ್ಕಾಡ್ ಜಿಲ್ಲಾಸ್ಪತ್ರೆಯಲ್ಲಿಯೇ ಪೋಸ್ಟ್​ಮಾರ್ಟಮ್​ ಮಾಡಲಾಗುವುದು ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: ಮದ್ಯದ ನಶೆಯಲ್ಲಿ ಭಿಕ್ಷುಕಿ ಮೇಲೆ ರೇಪ್, ಪ್ರಶ್ನಿಸಿದಾಗ ನನ್ನ ಹೆಂಡ್ತಿ ಆಗಬೇಕೆಂದು ನಾಟಕ ಮಾಡಿದ ಕಾಮುಕ

TV9 Kannada


Leave a Reply

Your email address will not be published. Required fields are marked *