KGF ಅಧೀರ ಅಂದ್ರೆ ಏನ್​ ಸುಮ್ನೇನಾ? ಅಧೀರನಿಗೆ ಇರಲಿದೆ ಇಂಟ್ರಡಕ್ಷನ್ ಸಾಂಗ್​​!

KGF ಅಧೀರ ಅಂದ್ರೆ ಏನ್​ ಸುಮ್ನೇನಾ? ಅಧೀರನಿಗೆ ಇರಲಿದೆ ಇಂಟ್ರಡಕ್ಷನ್ ಸಾಂಗ್​​!

ದೃಶ್ಯಗಳಲ್ಲಿ ಕೆಜಿಎಫ್​​ ಸಿನಿಮಾ ಎಷ್ಟು ರಿಚ್ ಸಿನಿಮಾವೋ ಅಷ್ಟೇ ಮ್ಯೂಸಿಕ್ ವಿಚಾರದಲ್ಲೂ ರಿಚ್. ಈ ವಿಚಾರಕ್ಕೆ ಕೆಜಿಎಫ್​ ಸಿನಿಮಾ ಇಂಡಿಯಾದ ಸಕಲ ಭಾಷೆಗಳ ಸಿನಿ ಪ್ರೇಮಿಗಳಿಗೂ ಇಷ್ಟವಾಗಿತ್ತಿರೋದು ಜೊತೆಗೆ ಕೆಜಿಎಫ್ ಚಾಪ್ಟರ್ 2ಗಾಗಿ ಜನ ಕಾದು ಕುಳಿತಿರುವಂತೆ ಮಾಡಿರೋದು.

ಒಬ್ಬ ಹೀರೋ ತೆರೆಯ ಮೇಲೆ ಮಿಂಚಿ ಪ್ರೇಕ್ಷಕರ ಮನದಲ್ಲಿ ಮಿನುಗ ಬೇಕಂದ್ರೆ ಅವನಿಗೆ ತಕ್ಕನಾದ ವಿಲನ್ ಎದುರು ಇರ್ಲೇಬೇಕು.. ಕೆಜಿಎಫ್ ಮೊದಲನೇ ಅಧ್ಯಾಯದಲ್ಲಿ ರಾಕಿಂಗ್ ಸ್ಟಾರ್ ಯಶ್ ಎದುರು ಖಡಕ್ ವಿಲನ್ಸ್​​ಗಳೇ ಇದ್ದರು. ಈಗ ಎರಡನೇ ಅಧ್ಯಾಯದಲ್ಲಿ ಬಾಲಿವುಡ್​ ಮುನ್ನ ಭಾಯ್ ಸಂಜಯ್ ದತ್ತ್ ಗುಡುಗಲಿದ್ದಾರೆ. ಸಂಜು ಬಾಬಾನಿಗೆ ಬಾಲಿವುಡ್​​​​ನಲ್ಲಿ ಅಷ್ಟೇ ಅಲ್ಲದೆ ಬೇರೆ ಬೇರೆ ಚಿತ್ರರಂಗದಲ್ಲೂ ಅಪಾರ ಅಭಿಮಾನಿಗಳಿದ್ದಾರೆ. ಈ ಕಾರಣದಿಂದ ಅಧೀರಾ ಪಾತ್ರವನ್ನ ವೈಭವಿಪೂರಕವಾಗಿ ತೋರಿಸಲು ಪ್ರಶಾಂತ್ ನೀಲ್ ಪಡೆ ಭರ್ಜರಿ ಪ್ಲಾನ್ ಒಂದನ್ನ ಸಿದ್ಧ ಮಾಡಿಕೊಂಡು ಕಾರ್ಯ ರೂಪಕ್ಕೂ ತಂದು ಮುಗಿಸಿದೆ. ರಾಕಿ ಭಾಯ್ ಎದುರು ಗುಡುಗುವ ಅಧೀರನಿಗೆ ಬಿಗ್​ಬಿಲ್ಡ್​​ ಅಪ್​ ಇಂಟ್ರಡಕ್ಷನ್ ಸಾಂಗ್ ಒಂದನ್ನ ನೀಲ್ ಪಡೆ ಮಾಡಿದೆ..

ವಿಲನ್​ಗಳಿಗೆ ಸಾಂಗ್​ ಅಪರೂಪ!
ಸಂಜಯ್ ದತ್ ನಿರ್ವಹಿಸಿರೋ ಅಧೀರ ಪಾತ್ರಕ್ಕೆ ಬಿಲ್ಡ್​ ಆಪ್ ಬಿಜಿಎಮ್ ಹಾಗೂ ಒಂದು ಸಾಂಗ್​ ಒಂದನ್ನ ಚಿತ್ರತಂಡ ಕ್ರಿಯೇಟ್ ಮಾಡಿಸಿದೆ. ಹನುಮ ಭಕ್ತ ಹರ್ಷ ಅವರ ಶಿಷ್ಯ ಮೋಹನ್ ಮಾಸ್ಟರ್​​​ ಕುಣಿತದ ಕಲ್ಪನೆಯಲ್ಲಿ ಅಧೀರ ಇಂಟ್ರಡಕ್ಷನ್ ಸಾಂಗ್ ಶೂಟ್ ಆಗಿದೆ. ಮೋಹನ್ ಮಾಸ್ಟರ್ ಕೆಜಿಎಫ್ ಚಾಪ್ಟರ್1ರಲ್ಲೂ ಮಧರ್ ಸಾಂಗ್ ಕೊರಿಯೊಗ್ರಫಿ ಮಾಡಿದ್ರು.

The post KGF ಅಧೀರ ಅಂದ್ರೆ ಏನ್​ ಸುಮ್ನೇನಾ? ಅಧೀರನಿಗೆ ಇರಲಿದೆ ಇಂಟ್ರಡಕ್ಷನ್ ಸಾಂಗ್​​! appeared first on News First Kannada.

Source: newsfirstlive.com

Source link