KGF 2 Collection: ಯಶ್​ ಅಬ್ಬರಕ್ಕೆ ಹಿಂದಿ ಮಾರ್ಕೆಟ್​ ಕಂಗಾಲು; 4 ದಿನಕ್ಕೆ ಬಾಲಿವುಡ್​ನಲ್ಲಿ 193 ಕೋಟಿ ರೂ. ಗಳಿಸಿದ ‘ಕೆಜಿಎಫ್​ 2’ | KGF Chapter 2 Hindi box office collection day 4 reaches Rs 193 Cr


KGF 2 Collection: ಯಶ್​ ಅಬ್ಬರಕ್ಕೆ ಹಿಂದಿ ಮಾರ್ಕೆಟ್​ ಕಂಗಾಲು; 4 ದಿನಕ್ಕೆ ಬಾಲಿವುಡ್​ನಲ್ಲಿ 193 ಕೋಟಿ ರೂ. ಗಳಿಸಿದ ‘ಕೆಜಿಎಫ್​ 2’

ಯಶ್

‘ಕೆಜಿಎಫ್​: ಚಾಪ್ಟರ್​ 2’ ಸಿನಿಮಾ ಸೂಪರ್​ ಹಿಟ್​ ಆಗುತ್ತದೆ ಎಂಬುದು ಎಲ್ಲರಿಗೂ ಗೊತ್ತಿತ್ತು. ಆದರೆ ಸುನಾಮಿಯ ರೀತಿಯಲ್ಲಿ ಬಾಕ್ಸ್​ ಆಫೀಸ್​ ಮೇಲೆ ದಾಳಿ ಮಾಡಲಿದೆ ಎಂದು ಹಿಂದಿ ಚಿತ್ರರಂಗದ ಅನೇಕರು ಊಹಿಸಿರಲಿಕ್ಕಿಲ್ಲ. ಅಂಥ ಆರ್ಭಟವನ್ನೇ ಮಾಡುತ್ತಿದೆ ‘ಕೆಜಿಎಫ್​ 2’ ಸಿನಿಮಾ. ಗುರುವಾರ (ಏ.14) ಬಿಡುಗಡೆ ಆದ ಈ ಸಿನಿಮಾ ಹಿಂದಿ ಮಾರುಕಟ್ಟೆಯಲ್ಲಿ ಸತತ ನಾಲ್ಕು ದಿನ ಧೂಳೆಬ್ಬಿಸಿದೆ. ಅದರ ಪರಿಣಾಮವಾಗಿ ಬರೋಬ್ಬರಿ 193.99 ಕೋಟಿ ರೂಪಾಯಿ ಕಲೆಕ್ಷನ್​ ಆಗಿದೆ. ಮೂಲ ಹಿಂದಿ ಸಿನಿಮಾಗಳೇ ಇಂಥ ರೆಕಾರ್ಡ್​ ಮಾಡಲು ಒಡ್ಡಾಡುತ್ತಿರುವಾಗ ಒಂದು ಡಬ್ಬಿಂಗ್​ ಸಿನಿಮಾ ಈ ರೀತಿ ಭೋರ್ಗರೆಯುತ್ತಿರುವುದು ಬಾಲಿವುಡ್​ ಮಂದಿಯನ್ನು ಕಂಗಾಲಾಗಿಸಿದೆ. ಹಿಂದಿ ಚಿತ್ರರಂಗದ ಸ್ಟಾರ್​ ನಟರು ‘ಕೆಜಿಎಫ್​ 2’ ಚಿತ್ರದ ಈ ಗಲ್ಲಾಪೆಟ್ಟಿಗೆ ಸಾಧನೆಯನ್ನು ಕಣ್ಣರಳಿಸಿ ನೋಡುತ್ತಿದ್ದಾರೆ.

TV9 Kannada


Leave a Reply

Your email address will not be published.